ವೃತ್ತದ ಮುಖ್ಯಸ್ಥರು

ಶ್ರೀ. ಡಿ.ಯತೀಶ್ ಕುಮಾರ್ ಭಾ.ಅ.ಸೇ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಕನರಾ ವೃತ್ತ, ಸಿರ್ಸಿ -581 402
08384236335
ccfkanaracircle@gmail.com

ವೃತ್ತದ ಬಗ್ಗೆ

ಕೆನರಾ ವೃತ್ತ ಐದು ಪ್ರಾದೇಶಿಕ ವಿಭಾಗಗಳನ್ನು ಹೊಂದಿದೆ, ಅವು ಹಳಿಯಾಳ, ಹೊನ್ನಾವರ, ಕಾರವಾರ, ಶಿರಸಿ ಮತ್ತು ಯಲ್ಲಾಪುರ ವಿಭಾಗಗಳು, ಹಾಗೂ ಕಾಳಿ ಹುಲಿ ಮೀಸಲು ಪ್ರದೇಶ ಎನ್ನುವ ಒಂದು ಹುಲಿ ಮೀಸಲು ಪ್ರದೇಶವನ್ನು ಒಳಗೊಂಡಿದೆ. ಕಾರವಾರ ಸಾ.ಅ. ಎನ್ನುವ ಸಾಮಾಜಿಕ ಅರಣ್ಯೀಕರಣ ವಿಭಾಗವೂ ಇದೆ. ಕೆನರಾ ವೃತ್ತದ ಗಡಿಗಳು ಉತ್ತರ ಕನ್ನಡ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿವೆ. ಕೆನರಾ ವೃತ್ತದ ಅರಣ್ಯಗಳು ಸಾಕಷ್ಟು ವೈವಿಧ್ಯತೆಯನ್ನು ಹೊಂದಿವೆ. ನಿತ್ಯ ಹಸಿರು, ಅರೆ ನಿತ್ಯ ಹಸಿರು, ತೇವಾಂಶದ-ಎಲೆ ಉದುರುವ, ಒಣ ಎಲೆ ಉದುರುವ, ಕುರುಚಲು ಕಾಡು, ಕಾಂಡ್ಲಾ ವನ ಮುಂತಾದ ವಿವಿಧ ವಿಧಗಳ ಕಾಡುಗಳನ್ನು ಈ ವೃತ್ತದಲ್ಲಿ ಕಾಣಬಹುದು. ನಿತ್ಯ ಹಸಿರು ಮತ್ತು ಅರೆ ನಿತ್ಯ ಹಸಿರು ಕಾಡುಗಳು ಜಿಲ್ಲೆಯ ಪಶ್ಚಿಮ ಭಾಗದಲ್ಲಿವೆ. ಈ ಅರಣ್ಯಗಳು ಎಲ್ಲ ವಿಭಾಗಗಳಲ್ಲಿ ಕಂಡುಬರುತ್ತವೆ. ಆದರೆ ಹೊನ್ನಾವರ, ಕಾರವಾರ ಮತ್ತು ಶಿರಸಿ ವಿಭಾಗಗಳಲ್ಲಿ ಮತ್ತು ಕಾಳಿ ಹುಲಿ ಮೀಸಲು ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹಳಿಯಾಳ ಮತ್ತು ಯಲ್ಲಾಪುರ ವಿಭಾಗಗಳಲ್ಲಿ, ಅವುಗಳ ಅಸ್ತಿತ್ವ ಪಶ್ಚಿಮ ಭಾಗದ ಕೆಲವು ವಲಯಗಳಿಗೆ ಸೀಮಿತವಾಗಿದೆ. ತೇವಾಂಶದ ಎಲೆಯುದುರುವ ಕಾಡುಗಳು ಎಲ್ಲ ವಿಭಾಗಗಳಲ್ಲೂ ಕಂಡುಬರುತ್ತದೆ ಆದರೆ ಅವುಗಳ ಅಸ್ತಿತ್ವ ಹಳಿಯಾಳ ಮತ್ತು ಯಲ್ಲಾಪುರ ವಿಭಾಗಗಳಲ್ಲಿ ಮತ್ತು ಕಾಳಿ ಹುಲಿ ಮೀಸಲು ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಒಣ ಎಲೆಯುದುರುವ ಕಾಡುಗಳು ವೃತ್ತದ ಪೂರ್ವಭಾಗದ ಹಳಿಯಾಳ ಮತ್ತು ಯಲ್ಲಾಪುರ ವಿಭಾಗಗಳಿಗೆ ಸೀಮಿತವಾಗಿವೆ. ಕಾಂಡ್ಲಾ ವನಗಳು ಕಾರವಾರ ಮತ್ತು ಹೊನ್ನಾವರ ವಿಭಾಗಗಳ ಕರಾವಳಿ ಪ್ರದೇಶದಲ್ಲಿ ಕಂಡುಬರುತ್ತವೆ. ಕರಾವಳಿ ಪ್ರದೇಶ ಹಾಗೂ ಜೈವಿಕ ಅಡಚಣೆ ಅತಿ ಗಂಭೀರವಾಗಿರುವ ಕೆಲವು ಸಣ್ಣ ಪ್ರದೇಶಗಳಲ್ಲಿ ಕುರುಚಲು ಕಾಡುಗಳು ಇವೆ.

ಟೆಂಡರ್‌ಗಳು

ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ

ಸುದ್ದಿ ಮತ್ತು ನವೀಕರಣಗಳು

ಇನ್ನಷ್ಟು ವೀಕ್ಷಿಸಿ