ವಿಭಾಗದ ಮುಖ್ಯಸ್ಥರು

ಡಾ ಸಂತೋಷ್‌ ಕುಮಾರ್‌ ಜಿ

ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು
ಉ. ಅ. ಸಂ. ಮತ್ತು ನಿರ್ದೇಶಕರ ಕಛೇರಿ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಸುಲ್ತಾನ್‌ ಷರೀಫ್‌ ಸರ್ಕಲ್‌, ಸತ್ತಿ ರಸ್ತೆ, ಚಾಮರಾಜನಗರ
0822622059
santhosg@gmail.com

ವಿಭಾಗದ ಬಗ್ಗೆ

ಬಿಳಿಗಿರಿ ರಂಗಸ್ವಾಮಿ ದೇವಸ್ಥಾನ (ಬಿ.ರಂ.ದೇ.) ಹುಲಿ ಮೀಸಲು ಪ್ರದೇಶಕ್ಕೆ ಸ್ಥಳೀಯವಾಗಿ ರಂಗಸ್ವಾಮಿ ಎಂದು ಕರೆಯಲಾಗುವ ವಿಷ್ಣು ದೇಗುಲ ಇರುವ ಬೆಟ್ಟದ ಮೇಲಿನ ಬಿಳಿ ಬಂಡೆ ‘ಬಿಳಿಗಿರಿ’ಯಿಂದಾಗಿ ಆ ಹೆಸರು ಬಂದಿದೆ. ವರ್ಷದ ಬಹುತೇಕ ಅವಧಿಯಲ್ಲಿ ಈ ಉನ್ನತ ಬೆಟ್ಟಗಳನ್ನು ಆವರಿಸುವ ಬಿಳಿ ಮಂಜು ಮತ್ತು ಬೆಳ್ಳಿ ಮೋಡಗಳಿಂದಾಗಿಯೂ ಈ ಶಿಖರಕ್ಕೆ ಆ ಹೆಸರು ಬಂದಿದೆ ಎಂದು ನಂಬಲಾಗಿದೆ. ಕನ್ನಡದಲ್ಲಿ, ಬಿಳಿಗಿರಿ ಅಂದರೆ ಬಿಳಿ ಬೆಟ್ಟಗಳು ಎಂಬ ಅರ್ಥವಿದೆ- ಅದರಿಂದ ಆ ಹೆಸರು ಬಂದಿದೆ. ಹುಲಿ ಮೀಸಲು ಪ್ರದೇಶ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿದೆ. ಇದು ಚಾಮರಾಜನಗರ, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕುಗಳ ಒಂದಿಷ್ಟು ಭಾಗಗಳನ್ನು ಒಳಗೊಂಡಿದೆ. ಈ ವಿಶಿಷ್ಟ ಜೀವ-ಭೌಗೋಳಿಕ ಪ್ರದೇಶ, ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳ ನಡುವಿನ ಸೇತುವೆಯಂತಿದ್ದು, 1974ರಲ್ಲಿ ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲಾಯಿತು. ಆ ಸಮಯದಲ್ಲಿ ಅಭಯಾರಣ್ಯ ಎರಡು ಮೀಸಲು ಅರಣ್ಯಗಳನ್ನು ಹೊಂದಿತ್ತು, ಅವು ಚಾಮರಾಜನಗರ ರಾಜ್ಯ ಅರಣ್ಯ ಮತ್ತು ಬಿರಂದೇ ಮೀಸಲು ಅರಣ್ಯ. ಆನಂತರ 1987ರಲ್ಲಿ ವನ್ಯಜೀವಿ ಅಭಯಾರಣ್ಯಕ್ಕೆ ಪಕ್ಕದ ದೊಡ್ಡಸಂಪಿಗೆ ಮೀಸಲು ಅರಣ್ಯವನ್ನೂ ಸೇರ್ಪಡೆ ಮಾಡಲಾಯಿತು. ಬಿ.ರಂ.ದೇ. ವನ್ಯಜೀವಿ ಅಭಯಾರಣ್ಯವನ್ನು 2011ರಲ್ಲಿ ಹುಲಿ ಮೀಸಲು ಪ್ರದೇಶ ಎಂದು ಘೋಷಿಸಲಾಯಿತು. ಹುಲಿ ಮೀಸಲು ಪ್ರದೇಶದ ಒಟ್ಟು ವಿಸ್ತಾರ 574.82 ಚ.ಕಿ.ಮೀ. ಹುಲಿ ಮೀಸಲು ಪ್ರದೇಶ ಚಾಮರಾಜನಗರ ಮತ್ತು ಯಳಂದೂರು ಈ ಎರಡು ಉಪ ವಿಭಾಗಗಳನ್ನು ಹೊಂದಿದೆ, ಮತ್ತು ಚಾಮರಾಜನಗರ (ಪ್ರಾದೇಶಿಕ), ಕೆ.ಗುಡಿ, ಪುಂಜಾನೂರು, ಯಳಂದೂರು, ಕೊಳ್ಳೇಗಾಲ ಮತ್ತು ಬೈಲೂರು ವನ್ಯಜೀವಿ ಈ ಆರು ವಲಯಗಳನ್ನು ಒಳಗೊಂಡಿದೆ. ಬಿರಂದೇ ಹುಲಿ ಮೀಸಲು ಪ್ರದೇಶದ ಅರಣ್ಯಗಳು ಮೂಲತಃ ಒಣ ಎಲೆಯುದುರುವ ಮಾದರಿಯವಾಗಿದ್ದು, ಭಿನ್ನ ಎತ್ತರದ ಪ್ರದೇಶಗಳಲ್ಲಿ ಅಲ್ಲಲ್ಲಿ ತೇವಾಂಶ ಭರಿತ ಎಲೆಯುದುರುವ, ಅರೆ ನಿತ್ಯಹಸಿರು, ನಿತ್ಯ ಹಸಿರು ಮತ್ತು ಶೋಲಾ ಕಾಡುಗಳು ಕಂಡುಬರುತ್ತವೆ. ಹುಲಿ, ಆನೆ, ಚಿರತೆ, ಕಾಡುನಾಯಿ, ಕಾಡುಕೋಣ, ಸಾಂಬಾರ, ಚುಕ್ಕೆ ಜಿಂಕೆ, ಬೊಗಳುವ ಜಿಂಕೆ, ನಾಲ್ಕು ಕೊಂಬಿನ ಜಿಂಕೆ, ಜೇನು ಕರಡಿ, ಕಾಡು ಹಂದಿ, ಲಂಗೂರ್‌, ಬಾನೆಟ್‌ ಕೋತಿ, ವಿವಿಧ ಸರೀಸೃಪಗಳು, ಹಕ್ಕಿಗಳು ಮುಂತಾದ ಪ್ರಾಣಗಳು ಹುಲಿ ಮೀಸಲು ಪ್ರದೇಶದಲ್ಲಿ ಕಂಡುಬರುತ್ತವೆ.

ಬಿಆರ್ ಟಿ ವನ್ಯಜೀವಿ ವಿಭಾಗದ ನಕ್ಷೆ

ಟೆಂಡರ್‌ಗಳು

ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ

ಸುದ್ದಿ ಮತ್ತು ನವೀಕರಣಗಳು