ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ
ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.:
(ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು
ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ;
(ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ
ವಿತರಣೆ ಮಾಡಲಾಗುತ್ತದೆ.
(ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ
ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
(ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ
ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ.
(ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ
ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು
(ಎಫ್) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.