ವಿಭಾಗದ ಮುಖ್ಯಸ್ಥರು

ವಿಭಾಗದ ಬಗ್ಗೆ

ಕಲಬುರ್ಗಿ ಅರಣ್ಯ ವಿಭಾಗ ಕರ್ನಾಟಕದ ಈಶಾನ್ಯ ವಲಯದಲ್ಲಿದೆ. ಈ ವಿಭಾಗದ ಗಡಿಗಳು ಕಲಬುರಗಿ ಜಿಲ್ಲೆಯ ಗಡಿಗಳೇ ಆಗಿವೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 44,419,36 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಸುಮಾರು 4.06 ಭೌಗೋಳಿಕ ಪ್ರದೇಶದ ವಿಸ್ತಾರವಾಗಿದೆ (10,954 ಚ.ಕಿ.ಮೀ.) ಕಲಬುರಗಿ ವಿಭಾಗ ಒಂದು ಕಲಬುರಗಿ ಉಪ ವಿಭಾಗ ಎನ್ನುವ ಒಂದು ಉಪ ವಿಭಾಗ ಹೊಂದಿದೆ ಮತ್ತು ಅಳಂದ, ಚಿತ್ತಾಪುರ, ಕಲಬುರಗಿ ಮತ್ತು ಚಿಂಚೋಳಿ (ವ.ಜೀ.) ಈ ನಾಲ್ಕು ವಲಯಗಳನ್ನು ಹೊಂದಿದೆ. ಅನುಕೂಲಕರ ಪ್ರದೇಶಗಳಲ್ಲಿ ಅಲ್ಲಲ್ಲಿ ಒಣ ಮಿಶ್ರ ಎಲೆಯುದುರುವ ಕಾಡುಗಳ ಜೊತೆಗೆ ಕಲಬುರಗಿ ವಿಭಾಗದ ಅರಣ್ಯಗಳು ಮುಖ್ಯವಾಗಿ ಕುರುಚಲು ಕಾಡುಗಳಾಗಿವೆ. ಚಿಂಚೋಳಿ ವನ್ಯಜೀವಿ ವಲಯದಲ್ಲಿ ಸಾಕಷ್ಟು ಪ್ರಮಾಣದ ಒಣ ಮಿಶ್ರ ಎಲೆಯುದುರುವ ಅರಣ್ಯಗಳು ಕಂಡುಬರುತ್ತವೆ. 13,488 ಹೆಕ್ಟೇರ್ಗಳಿರುವ ಚಿಂಚೋಳಿ ಕಾಡುಗಳನ್ನು 2011ರಲ್ಲಿ ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲಾಗಿದೆ.

ಕಲಬುರ್ಗಿ ವಿಭಾಗದ ನಕ್ಷೆ

ಟೆಂಡರ್‌ಗಳು

ಸುದ್ದಿ ಮತ್ತು ನವೀಕರಣಗಳು