ರಾಷ್ಟ್ರೀಯ ಅರಣ್ಯ ಕ್ರಿಯಾ ಯೋಜನೆ ಮತ್ತು ಬಿದಿರು ಮಿಷನ್ ಘಟಕ, ಕರ್ನಾಟಕ ಅರಣ್ಯ ಇಲಾಖೆಯ ಹಲವು ಕೇಂದ್ರ ಪುರಸ್ಕೃತ ಯೋಜನೆಗಳಾದಂತಹ ರಾಷ್ಟ್ರೀಯ ಅರಣ್ಯೀಕರಣ ಕಾರ್ಯಕ್ರಮವನ್ನು ಅರಣ್ಯ ಅಭಿವೃದ್ಧಿ ಸಂಸ್ಥೆಗಳ ಮೂಲಕ ಅನುಷ್ಟಾನ, ರಾಷ್ಟ್ರೀಯ ಕೃಷಿ ಅರಣ್ಯ, ಬಿದಿರು ಮಿಷನ್ ಯೋಜನೆ, ಗ್ರೀನ್ ಇಂಡಿಯಾ ಮಿಷನ್ ಮತ್ತು ಕಾಂಡ್ಲವನಗಳ ಸಂರಕ್ಷಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುತ್ತದೆ. ಇವುಗಳಲ್ಲದೆ ರಾಜ್ಯ ವಲಯ ಯೋಜನೆಗಳಾದ ರಸ್ತೆ ಮತ್ತು ಸೇತುವೆ, ಕಟ್ಟಡಗಳು, ವಸತಿ ಗೃಹಗಳ ನಿರ್ವಹಣೆ, ನದಿ ಸಂರಕ್ಷಣೆ ಕಾರ್ಯಕ್ರಮ ಮುಂತಾದ ಕಾರ್ಯಕ್ರಮಗಳನ್ನು ಸಹ ನಿರ್ವಹಿಸುತ್ತದೆ.