ಅರಣ್ಯ ಮತ್ತು ವನ್ಯಜೀವಿ ಮೇಲೆ ಹೆಚ್ಚುತ್ತಿರುವ ಒತ್ತಡ, ವಾಸಸ್ಥಳದ ವಿಸ್ತಾರ ಕಡಿಮೆಯಾಗುತ್ತಿರುವುದು, ಭೂಮಿ ಬಳಕೆ ಮತ್ತು ಭೂಮಿಯ ವ್ಯಾಪ್ತಿಯ ವಿಧಾನದಲ್ಲಿ ಬದಲಾವಣೆಗಳು, ವನ್ಯಜೀವಿಗಳ ಪರಿಣಾಮಕಾರಿ ಸಂರಕ್ಷಣೆ ಮತ್ತು ಸರ್ಕಾರ ಕೈಗೊಂಡ ಸಂರಕ್ಷಣಾ ಕ್ರಮಗಳ ಪರಿಣಾಮದಿಂದ ವನ್ಯಜೀವಿ ಸಂಖ್ಯೆಯಲ್ಲಿ ಹೆಚ್ಚಳ ಇವುಗಳಿಂದಾಗಿ ವನ್ಯಜೀವಿ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಮನುಷ್ಯ-ಪ್ರಾಣಿ ಸಂಘರ್ಷ ಹೆಚ್ಚಳವಾಗಿದೆ. ಮನುಷ್ಯ-ಪ್ರಾಣಿ ಸಂಘರ್ಷವನ್ನು ತಡೆಗಟ್ಟುವುದಕ್ಕೆ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಅದಾಗ್ಯೂ, ಆಗಾಗ ಹಲವಾರು ಸಂಘರ್ಷದ ಪ್ರಕರಣಗಳು ವರದಿಯಾಗುತ್ತಿರುತ್ತವೆ. ವನ್ಯಜೀವಿಗಳಿಂದ ಮನುಷ್ಯರಿಗೆ ಗಾಯ/ ಭಾಗಶಃ ಅಥವಾ ಶಾಶ್ವತ ವೈಕಲ್ಯ/ ಮನುಷ್ಯರ ಸಾವು ಸಂಭವಿಸಿದರೆ ಸಂಬಂಧಪಟ್ಟವರಿಗೆ ಸರ್ಕಾರ ಪರಿಹಾರ ಒದಗಿಸುತ್ತಿದೆ. ಪರಿಹಾರದ ಜೊತೆಗೆ, ಮನುಷ್ಯ-ಪ್ರಾಣಿ ಸಂಘರ್ಷದ ಕಾರಣದಿಂದ ಗಾಯಗೊಂಡ ವ್ಯಕ್ತಿಗಳಿಗೆ ಚಿಕಿತ್ಸೆ ಮಾಡಿಸಿಕೊಳ್ಳಲು ಸಿಜಿಎಚ್‌ಎಸ್‌ ದರದಲ್ಲಿ ವೈದ್ಯಕೀಯ ವೆಚ್ಚವನ್ನೂ ನೀಡಲಾಗುತ್ತದೆ. ಅಂಥ ಪ್ರಕರಣಗಳಲ್ಲಿ ಮಂಜೂರು ಮಾಡಲಾಗುವ ನಷ್ಟ ಪರಿಹಾರವನ್ನು [ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ಉಪವಿಭಾಗ-2 (36) ರಲ್ಲಿ ವ್ಯಾಖ್ಯಾನಿಸಿರುವಂತೆ ವನ್ಯಜೀವಿಗಳು] ವಿವಿಧ ಸರ್ಕಾರಿ ಆದೇಶಗಳ ಮೂಲಕ ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ ಮತ್ತು ನಿರ್ಧರಿಸಲಾಗುತ್ತದೆ. ವನ್ಯಜೀವಿಗಳಿಂದ ಉಂಟಾದ ಮನುಷ್ಯರ ಗಾಯ/ ಭಾಗಶಃ ಅಥವಾ ಶಾಶ್ವತ ವೈಕಲ್ಯ/ ಮನುಷ್ಯರ ಸಾವಿಗೆ ಸಂತ್ರಸ್ತರಿಗೆ/ ಸಂಬಂಧಪಟ್ಟವರಿಗೆ ಪರಿಹಾರ ಮಂಜೂರು ಮಾಡುವುದಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳು ಈ ಕೆಳಗಿನಂತಿವೆ: 1. ಸಆ ಸಂ.: ಎಫ್‌ಇಇ 143 ಎಫ್‌ಡಬ್ಲ್ಯುಎಲ್‌ 2010 ದಿನಾಂಕ: 30-04-2011 2. ಸಆ ಸಂ.: ಎಫ್‌ಇಇ 143 ಎಫ್‌ಡಬ್ಲ್ಯುಎಲ್‌ 2010 ದಿನಾಂಕ: 03-08-2011 3. ಸಆ ಸಂ.: ಎಫ್‌ಇಇ 109 ಎಫ್‌ಎಪಿ 2014 ದಿನಾಂಕ: 13-08-2014 4. ಸಆ ಸಂ.: ಎಫ್‌ಇಇ 128 ಎಫ್‌ಡಬ್ಲ್ಯುಎಲ್‌ 2013 ದಿನಾಂಕ: 15-09-2015 5. ಸಆ ಸಂ.: ಎಫ್‌ಇಇ 130 ಎಫ್‌ಡಬ್ಲ್ಯುಎಲ್‌ 2016 ದಿನಾಂಕ 19-09-2016 6. ಸಆ ಸಂ.: ಎಫ್‌ಇಇ 61 ಎಫ್‌ಎಪಿ 2018 ದಿನಾಂಕ: 16-10-2018


ಪದೇಪದೆ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ) ನೋಡಿ

 • ವನ್ಯಜೀವಿಗಳಿಂದ ಆಗುವ ಮನುಷ್ಯರ ಗಾಯ/ ಭಾಗಶಃ ವೈಕಲ್ಯ/ ಶಾಶ್ವತ ವೈಕಲ್ಯಕ್ಕಾಗಿ ನಷ್ಟ ಪರಿಹಾರ ಪಾವತಿಗೆ ಸಂಬಂಧಿಸಿದ ಸರ್ಕಾರಿ ಆದೇಶಗಳು ಯಾವುವು

  ಸರ್ಕಾರಿ ಆದೇಶ ಸಂಖ್ಯೆ ಎಫ್‌ಇಇ 143 ಎಫ್‌ಡಬ್ಲ್ಯುಎಲ್‌ 2010 ದಿನಾಂಕ 30-04-2011, ಸರ್ಕಾರಿ ಆದೇಶ ಸಂಖ್ಯೆ ಎಫ್‌ಇಇ 109 ಎಫ್‌ಎಡಬ್ಲು 2014 ದಿನಾಂಕ 13-08-2014 ಮತ್ತು ಸಆ ಸಂಖ್ಯೆ. ಎಫ್‌ಇಇ 130 ಎಫ್‌ಡಬ್ಲ್ಯುಎಲ್‌ 2016 ದಿನಾಂಕ: 19-09-2016 ಸಂತ್ರಸ್ತರು ವೈದ್ಯಕೀಯ ವೆಚ್ಚಗಳನ್ನು ಪಡೆಯುವುದಕ್ಕೂ ಅರ್ಹರಾಗಿರುತ್ತಾರೆ. ಪರಿಹಾರದ ಜೊತೆಗೆ, ಸಆ ಸಂಖ್ಯೆ: ಎಫ್‌ಇಇ 128 ಎಫ್‌ಡಬ್ಲ್ಯುಎಲ್‌ 2013 ದಿನಾಂಕ: 15-09/-2015

 • ವನ್ಯಜೀವಿಗಳಿಂದ ಮನುಷ್ಯರು ಸತ್ತರೆ ನಷ್ಟ ಪರಿಹಾರ ಪಾವತಿಗೆ ಸಂಬಂಧಿಸಿದ ಸರ್ಕಾರಿ ಆದೇಶಗಳು ಯಾವುವು

  ಸರ್ಕಾರಿ ಆದೇಶ ಸಂಖ್ಯೆ. ಎಫ್‌ಇಇ 143 ಎಫ್‌ಡಬ್ಲ್ಯುಎಲ್‌ 2010 ದಿನಾಂಕ: 30-04-2011, ಸಆ ಸಂಖ್ಯೆ: ಎಫ್‌ಇಇ 143 ಎಫ್‌ಡಬ್ಲ್ಯುಎಲ್‌ 2010 ದಿನಾಂಕ 30-04-2011 ಸರ್ಕಾರಿ ಆದೇಶ ಸಂಖ್ಯೆ ಎಫ್‌ಇಇ 109 ಎಫ್‌ಡಬ್ಲುಎಲ್ 2014 ದಿನಾಂಕ 13-08-2014 ಮತ್ತು ಸಆ ಸಂಖ್ಯೆ: ಎಫ್‌ಇಇ 128 ಎಫ್‌ಡಬ್ಲ್ಯುಎಲ್‌ 2013 ದಿನಾಂಕ: 15-09/-2015

 • ವನ್ಯಜೀವಿಗಳಿಂದ ಮನುಷ್ಯರಿಗೆ ಗಾಯ/ ಭಾಗಶಃ ವೈಕಲ್ಯ/ ಶಾಶ್ವತ ವೈಕಲ್ಯ ಉಂಟಾದರೆ ನಷ್ಟ ಪರಿಹಾರ ಪಡೆಯಲು ಯಾರು ಅರ್ಹರಾಗಿರುತ್ತಾರೆ

  ಸಂತ್ರಸ್ತ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರಲಿಲ್ಲ ಮತ್ತು ವನ್ಯಜೀವಿ ದಾಳಿ ಸಂದರ್ಭ ಅರಣ್ಯ ಪ್ರದೇಶದಲ್ಲಿ ಅತಿಕ್ರಮಿಸಿ ಅಡ್ಡಾಡುತ್ತಿರಲಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು, ವನ್ಯಜೀವಿಯಿಂದ ಗಾಯಗೊಂಡ ವ್ಯಕ್ತಿ ಪರಿಹಾರ ಪಡೆಯಲು ಅರ್ಹನಾಗಿರುತ್ತಾನೆ.

 • ವನ್ಯಜೀವಿಗಳಲ್ಲಿ ಯಾವುವು ಸೇರುತ್ತವೆ

  ವನ್ಯಜೀವಿ ಎನ್ನುವ ಶಬ್ದವನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ಉಪವಿಭಾಗ 2(36)ರಲ್ಲಿ ಒದಗಿಸಲಾಗಿರುವ ವ್ಯಾಖ್ಯಾನದ ಅನುಸಾರ ಅರ್ಥ ಮಾಡಿಕೊಳ್ಳಬೇಕು. ಈ ವಿವರಣೆಯ ಪ್ರಕಾರ ‘ಕಾಡು ಮೃಗ’ ಎಂದರೆ ಷೆಡ್ಯೂಲ್ I ರಿಂದ IV ರಲ್ಲಿ ನಿರ್ದಿಷ್ಟಪಡಿಸಿರುವ ಹಾಗೂ ಸ್ವಭಾವದಲ್ಲಿ ಕ್ರೂರವಾದುದೆಂದು ಕಂಡುಬರುವ ಯಾವುದೇ ಪ್ರಾಣಿ ಎಂದರ್ಥ.

 • ಮನುಷ್ಯರಿಗೆ ಗಾಯ/ ಶಾಶ್ವತ ಅಂಗವೈಕಲ್ಯ/ ಭಾಗಶಃ ಅಂಗವೈಕಲ್ಯ/ ಮನುಷ್ಯರ ಸಾವು ಸಂಭವಿಸಿದಲ್ಲಿ ಎಷ್ಟು ಪರಿಹಾರ ನೀಡಲಾಗುತ್ತದೆ

  ಮನುಷ್ಯರಿಗೆ ಗಾಯ/ ಶಾಶ್ವತ ಅಂಗವೈಕಲ್ಯ/ ಭಾಗಶಃ ಅಂಗವೈಕಲ್ಯ/ ಮನುಷ್ಯರ ಸಾವು ಸಂಭವಿಸಿದಲ್ಲಿ ನೀಡಲಾಗುವ ಪರಿಹಾರ ಈ ಕೆಳಗಿನಂತಿದೆ: ಎ. ಮನುಷ್ಯರಿಗೆ ಆದ ಗಾಯ: ರೂ. 30,000 ಗರಿಷ್ಟ (ಮೂವತ್ತು ಸಾವಿರ ರೂಪಾಯಿಯವರೆಗೆ) ಚಿಕಿತ್ಸೆಗಾಗಿ ಸಿಜಿಎಚ್‌ಎಸ್‌ ದರದಲ್ಲಿ ವೈದ್ಯಕೀಯ ವೆಚ್ಚಗಳು ಬಿ. ಬಿ. ಭಾಗಶಃ ವೈಕಲ್ಯ ಉಂಟಾಗಿದ್ದರೆ: ರೂ. 2,50,000 (ಎರಡು ಲಕ್ಷದ ಐವತ್ತು ಸಾವಿರ ರೂಪಾಯಿ) ಚಿಕಿತ್ಸೆಗಾಗಿ ಸಿಜಿಎಚ್‌ಎಸ್‌ ದರದಲ್ಲಿ ವೈದ್ಯಕೀಯ ವೆಚ್ಚಗಳು. ಸಿ. ಶಾಶ್ವತ ಅಂಗವಿಕಲತೆ ಉಂಟಾದಲ್ಲಿ: ರೂ. 5,00,000 (ಐದು ಲಕ್ಷ ರೂಪಾಯಿ) ಚಿಕಿತ್ಸೆಗಾಗಿ ಸಿಜಿಎಚ್‌ಎಸ್‌ ದರದಲ್ಲಿ ವೈದ್ಯಕೀಯ ವೆಚ್ಚಗಳು. ಡಿ. ಸಾವು ಸಂಭವಿಸಿದ್ದರೆ: ರೂ. 5,0,000 (ಐದು ಲಕ್ಷ ರೂಪಾಯಿ) (ಒಂದು ಬಾರಿಯ ಪರಿಹಾರ ಮೊತ್ತ) 5 ವರ್ಷಗಳವರೆಗೆ ಕಾನೂನುಬದ್ಧ ಉತ್ತರಾಧಿಕಾರಿಗೆ ರೂ. 2,000/- ಮಾಸಿಕ ಪಿಂಚಣಿ .

 • ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಪ್ರತಿಪಾದಿಸಲು ಅರ್ಜಿ ಸಲ್ಲಿಸಲು ಒಂದು ನಿಗದಿತ ನಮೂನೆ ಇದೆಯೇ

  ಸಲ್ಲಿಸಲು ಯಾವುದೇ ನಿಗದಿತ ನಮೂನು ಇರುವುದಿಲ್ಲ. ಆದಾಗ್ಯೂ, ಕಾನೂನುಬದ್ಧ ವಾರಸುದಾರನ ಸಹಿ ಅಥವಾ ಎಡಗೈ ಹೆಬ್ಬೆಟ್ಟಿನ ಗುರುತನ್ನು ಹೊಂದಿರುವ ಅರ್ಜಿಯನ್ನು ಓದಲು ಸಾಧ್ಯವಾಗುವಂತೆ ಖಾಲಿ ಕಾಗದದ ಮೇಲೆ ಸ್ಪಷ್ಟವಾಗಿ ಬರೆದಿರಬೇಕು ಅಥವಾ ಬೆರಳಚ್ಚು ಮಾಡಿರಬೇಕು.

 • ಕೃಪಾಧನ (ಎಕ್ಸ್-ಗ್ರೇಷಿಯಾ) ಪರಿಹಾರ ಪ್ರತಿಪಾದಿಸಲು ಯಾರಿಗೆ ಅರ್ಜಿ ಸಲ್ಲಿಸಬೇಕು

  ಅರ್ಜಿಯನ್ನು ಸಂಬಂಧಪಟ್ಟ ನ್ಯಾಯವ್ಯಾಪ್ತಿಗೆ ಒಳಪಡುವ ವಲಯ ಅರಣ್ಯಾಧಿಕಾರಿಗೆ ಸಲ್ಲಿಸಬೇಕು.

 • ನಷ್ಟ ಪರಿಹಾರ ಕೋರಲು ಸಲ್ಲಿಸಬೇಕಾದ ದಾಖಲೆಗಳು ಯಾವುವು

  • ಗಾಯ/ವೈಕಲ್ಯದ ಕಾರಣ ಮತ್ತು ಸ್ವರೂಪವನ್ನು ಖಚಿತಪಡಿಸುವುದಕ್ಕೆ ಜಿಲ್ಲಾ ಸರ್ಕಾರಿ ವೈದ್ಯರಿಂದ ವೈದ್ಯಕೀಯ ವರದಿಯನ್ನು ಪಡೆದುಕೊಳ್ಳಬೇಕು ಮತ್ತು ಉವಅಅ ಅಥವಾ ವಅಅ ಇವರಿಗೆ ಸಲ್ಲಿಸಬೇಕು. ಬಿ. ಸಾವಿನ ಕಾರಣವನ್ನು ಖಚಿತಪಡಿಸಿಕೊಳ್ಳುವುದಕ್ಕೆ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ಕಾನೂನುವ್ಯಾಪ್ತಿಗೆ ಸಂಬಂಧಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕರಿಂದ ಮಾಡಿಸಬೇಕು. ಸಿ. ಸಂತ್ರಸ್ತರ/ ಉತ್ತರಾಧಿಕಾರಿಯ ಆಧಾರ್‌ ಸಂಖ್ಯೆ ಡಿ. ಪರಿಹಾರ ಮೊತ್ತವನ್ನು ಪಾವತಿಸಬೇಕಾದ ಸಂತ್ರಸ್ತರ ಬ್ಯಾಂಕ್‌ ಖಾತೆ ವಿವರಗಳು

 • ಈ ಸೇವೆಯನ್ನು ಸಕಾಲದಡಿ ಪಟ್ಟಿ ಮಾಡಲಾಗಿದೆಯೇ

  ಹೌದು. ಈ ಸೇವೆಯನ್ನು ಸಕಾಲದಡಿ ಪಟ್ಟಿ ಮಾಡಲಾಗಿದೆ. ಸಕಾಲದಡಿ ಈ ಸೇವೆಯನ್ನು ಒದಗಿಸಲು ನಿಗದಿಪಡಿಸಲಾಗಿರುವ ಕಾಲ ಮಿತಿ 15 ಕೆಲಸದ ದಿನಗಳು.

 • ಈ ಸೇವೆಯನ್ನು ನಾನು ಸಕಾಲದಡಿ ಪಡೆಯುವುದು ಹೇಗೆ

  ನಷ್ಟ ಪರಿಹಾರಕ್ಕಾಗಿ ನೀವು ಅರ್ಜಿ ಸಲ್ಲಿಸುವ ಕಾನೂನುವ್ಯಾಪ್ತಿಯ ವಲಯ ಅರಣ್ಯ ಅಧಿಕಾರಿಯಲ್ಲಿ ನಿಮ್ಮ ಅರ್ಜಿಯನ್ನು ಸಕಾಲದಡಿ ನೋಂದಾಯಿಸಿಕೊಳ್ಳಲು ದಯವಿಟ್ಟು ಮನವಿ ಮಾಡಿ. ಸಕಾಲದಡಿ ನಿಮ್ಮ ಅರ್ಜಿಯನ್ನು ನೋಂದಾಯಿಸಿದ್ದಕ್ಕಾಗಿ ಒಂದು ಸ್ವೀಕೃತಿಯ ಮೂಲಕ ನಿಮಗೆ ಒಂದು ಜಿಎಸ್‌ಸಿ (ನಾಗರಿಕರಿಗೆ ಸೇವೆಗಳ ಖಾತ್ರಿ) ಸಂಖ್ಯೆಯನ್ನು ನೀಡಲಾಗುತ್ತದೆ. ಸಕಾಲ ಪೋರ್ಟಲ್ ಮೂಲಕ ನೀವು ನಿಮ್ಮ ಮನವಿಯ ಸ್ಥಿತಿಯ ಜಾಡು ಕಂಡುಹಿಡಿಯಬಹುದು. (http://www.sakala.kar.nic.in/gschome.aspx).

 • ಸಂಬಂಧಪಟ್ಟ ಪ್ರಾಧಿಕಾರದಿಂದ ಮಂಜೂರು ಮಾಡಿದ ಬಳಿಕ ನಷ್ಟ ಪರಿಹಾರ ಪಡೆಯಲು ಎಷ್ಟು ಸಮಯ ಬೇಕಾಗುತ್ತದೆ

  ನಷ್ಟ ಪರಿಹಾರದ ಬಿಡುಗಡೆ ನಿಧಿಗಳ ಲಭ್ಯಯನ್ನು ಅವಲಂಬಿಸಿದೆ. ನಷ್ಟ ಪರಿಹಾರವನ್ನು ಮಂಜೂರು ಮಾಡಿದ ಬಳಿಕ, ನಿಧಿ ಲಭ್ಯವಿದ್ದಾಗ ಅದನ್ನು ಬಿಡುಗಡೆ ಮಾಡಲಾಗುತ್ತದೆ.