ವಿಭಾಗದ ಮುಖ್ಯಸ್ಥರು

ಐ ಎಂ ನಾಗರಾಜ್

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ವನ್ಯಜೀವಿ ವಿಭಾಗ, ಶಿವಮೊಗ್ಗ, ಬಾಲರಾಜ್ ಅರಸ್ ರಸ್ತೆ, ಡಿ.ಸಿ. ಕಾಂಪೌಂಡ್, ಶಿವಮೊಗ್ಗ.
08182222983
dcfwlshimoga@gmail.com

ವಿಭಾಗದ ಬಗ್ಗೆ

ಶಿವಮೊಗ್ಗ ಅರಣ್ಯ ವಿಭಾಗ ಶಿವಮೊಗ್ಗ ವೃತ್ತದ ಕೇಂದ್ರ ಭಾಗದಲ್ಲಿದೆ. ಇದು ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕುಗಳ ಅರಣ್ಯ ಪ್ರದೇಶಗಳನ್ನು ಒಳಗೊಳ್ಳುತ್ತದೆ. ಈ ವಿಭಾಗ ಮೂರು ವನ್ಯಜೀವಿ ಅಭಯಾರಣ್ಯಗಳನ್ನು ಒಳಗೊಂಡಿದೆ, ಅವು ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ (395.60 ಚ.ಕಿ.ಮೀ.), ಶರಾವತಿ ವನ್ಯಜೀವಿ ಅಭಯಾರಣ್ಯ (431.23 ಚ.ಕಿ.ಮೀ.) ಮತ್ತು ಗುಡವಿ ಪಕ್ಷಿ ಧಾಮ (0.73 ಚ.ಕಿ.ಮೀ.). ಗುಡವಿ ಪಕ್ಷಿಧಾಮ ಸೊರಬ ತಾಲೂಕಿನಲ್ಲಿದೆ. ಶಿವಮೊಗ್ಗ ವನ್ಯಜೀವಿ ವಿಭಾಗ ಶಿವಮೊಗ್ಗ ವನ್ಯಜೀವಿ ಮತ್ತು ಕಾರ್ಗಿಲ್ ವನ್ಯಜೀವಿ ಎನ್ನುವ ಎರಡು ಉಪವಿಭಾಗಗಳನ್ನು ಹೊಂದಿದೆ, ಮತ್ತು ಹನಗೆರೆ, ಕಾರ್ಗಲ್, ಶಿವಮೊಗ್ಗ ಮತ್ತು ಸಕ್ರೆಬೈಲ್ ಈ ನಾಲ್ಕು ವಲಯಗಳನ್ನು ಹೊಂದಿದೆ. ಶರಾವತಿ ವನ್ಯಜೀವಿ ಅಭಯಾರಣ್ಯದ ಅರಣ್ಯಗಳು ಮುಖ್ಯವಾಗಿ ನಿತ್ಯಹಸಿರು ಮತ್ತು ಅರೆ ನಿತ್ಯಹಸಿರು ಮಾದರಿಯವು. ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯದ ಅರಣ್ಯಗಳು ಮುಖ್ಯವಾಗಿ ತೇವಾಂಶ ಭರಿತ ಎಲೆಯುದುರುವ ಮತ್ತು ಅರೆ ನಿತ್ಯ ಹಸಿರು ಮಾದರಿಯವು. ಅಭಯಾರಣ್ಯದ ಪೂರ್ವ ಭಾಗದಲ್ಲಿರುವ ಆನೆಸರ ಮತ್ತು ಪುರ್ದಾಲ್ನಂಥ ಪ್ರದೇಶದ ಅರಣ್ಯಗಳು ಒಣ ಎಲೆಯುದುರುವ ವಿಧದವು. ಶಿವಮೊಗ್ಗ ನಗರದ ಸಮೀಪ ಇರುವ ಅಭಯಾರಣ್ಯದ ಕಾಡುಗಳು ಜೈವಿಕ ಹಸ್ತಕ್ಷೇಪಗಳಿಂದಾಗಿ ಬಹಳಷ್ಟು ಕಳೆಗುಂದಿವೆ. ಶೆಟ್ಟಿಹಳ್ಳಿ ಮತ್ತು ಶರಾವತಿ ಅಭಯಾರಣ್ಯಗಳಲ್ಲಿ ಕಂಡುಬರುವ ವನ್ಯಜೀವಿಗಳಲ್ಲಿ ಹುಲಿ, ಚಿರತೆ, ಕಾಡು ನಾಯಿ, ಕಾಡು ಕೋಣ, ಆನೆ (ಕೆಲವೊಮ್ಮೆ), ಸಾಂಬಾರ, ಚುಕ್ಕೆ ಜಿಂಕೆ, ಬೊಗಳುವ ಜಿಂಕೆ, ಜೇನು ಕರಡಿ, ಕಾಡು ಹಂದಿ, ನರಿ, ಲಂಗೂರ್, ಬಾನೆಟ್ ಕೋತಿ, ವಿವಿಧ ಪ್ರಭೇದದ ಸರೀಸೃಪಗಳು, ಮತ್ತು ಪಕ್ಷಿಗಳು ಸೇರಿವೆ. ಗುಡವಿ ಪಕ್ಷಿಧಾಮ ಮುಂಗಾರು ಋತುವಿನಲ್ಲಿ ಸಂತಾನೋತ್ಪತ್ತಿಗಾಗಿ ಬರುವ ವಲಸೆ ಪಕ್ಷಿಗಳು ಸೇರಿದಂತೆ ವಿವಿಧ ಬಗೆಯ ಪಕ್ಷಿಗಳಿಗೆ ಪ್ರಸಿದ್ಧವಾಗಿದೆ. ಪಕ್ಷಿಧಾಮಕ್ಕೆ ಭೇಟಿ ನೀಡಲು ಉತ್ತಮ ಸಮಯ ಜೂನ್ನಿಂದ - ನವೆಂಬರ್.

ಶಿವಮೊಗ್ಗ ವನ್ಯಜೀವಿ ವಿಭಾಗದ ನಕ್ಷೆ