ಹುಲಿ ಮೀಸಲು

ಹುಲಿ ಮೀಸಲು ಪ್ರದೇಶವು ಭಾರತ ಸರ್ಕಾರದ ಸಮ್ಮತಿಯೊಂದಿಗೆ ರಾಜ್ಯ ಸರ್ಕಾರ ಅಧಿಸೂಚಿಸಿದ ಸಂರಕ್ಷಿತ ಪ್ರದೇಶವಾಗಿರುತ್ತದೆ. ಹುಲಿ ಮೀಸಲು ಪ್ರದೇಶ ಕೇಂದ್ರ ಪ್ರಾಯೋಜಿತ ಯೋಜನೆ (ಸಿ.ಎಸ್‌.ಎಸ್‌.) ‘ಹುಲಿ ಯೋಜನೆ’ಯಡಿ ನಿಧಿ ಸ್ವೀಕರಿಸಲು ಅರ್ಹವಾಗಿರುತ್ತದೆ. ಹುಲಿ ಮೀಸಲು ಪ್ರದೇಶದಲ್ಲಿ ನಡೆಸಲಾಗುವ ಚಟುವಟಿಕೆಗಳನ್ನು ಭಾರತ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌.ಟಿ.ಸಿ.ಎ.) ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಒಂದು ಹುಲಿ ಮೀಸಲು ಪ್ರದೇಶ ಸಾಮಾನ್ಯವಾಗಿ ರಾಷ್ಟ್ರೀಯ ಉದ್ಯಾನ ಅಥವಾ ಅಭಯಾರಣ್ಯ, ಅಥವಾ ಎರಡನ್ನೂ ಒಳಗೊಂಡಿರುತ್ತದೆ.

ನಮ್ಮ ಹುಲಿ ಮೀಸಲುಗಳನ್ನು ಅನ್ವೇಷಿಸಿ

ಪರಿಚಯ
ಸ್ಥಳ ಮತ್ತು ವಿಸ್ತಾರ
ಮಹತ್ವ
ಭೂದೃಶ್ಯ
ಬಂಡೀಪುರ ಹುಲಿ ಮೀಸಲು

ಈ ರಾಷ್ಟ್ರೀಯ ಉದ್ಯಾನವನ್ನು ದಿನಾಂಕ 19ನೇ ಫೆಬ್ರವರಿ 1941ರಲ್ಲಿನ ಅಂದಿನ ಸರ್ಕಾರದ ಅಧಿಸೂಚನೆ ಪ್ರಕಾರ ರಚಿಸಲಾಗಿದ್ದ ವೇಣುಗೋಪಾಲ ವನ್ಯಜೀವಿ ಉದ್ಯಾನದ ಬಹುತೇಕ ಅರಣ್ಯ ಭಾಗಗಳನ್ನು ಸೇರಿಸಿಕೊಂಡು ಈ ರಾಷ್ಟ್ರೀಯ ಉದ್ಯಾನವನ್ನು ರಚಿಸಲಾಯಿತು ಮತ್ತು ಈ ಪ್ರದೇಶವನ್ನು 1985ರಲ್ಲಿ 874.20 ಚ.ಕಿ.ಮೀ.ಗೆ ವಿಸ್ತರಿಸಿ ಬಂಡೀಪುರ ರಾಷ್ಟ್ರೀಯ ಉದ್ಯಾನ ಎಂದು ಮರುನಾಮಕರಣ ಮಾಡಲಾಯಿತು. ಈ ಮೀಸಲು ಪ್ರದೇಶವನ್ನು 1973ರಲ್ಲಿ ಹುಲಿಯೋಜನೆಯಡಿ ಸೇರಿಸಲಾಯಿತು. ನಂತರ ಅಕ್ಕಪಕ್ಕದ ಕೆಲವು ಮೀಸಲು ಅರಣ್ಯ ಪ್ರದೇಶಗಳನ್ನು ಇದಕ್ಕೆ ಸೇರಿಸಲಾಯಿತು ಮತ್ತು 880.02 ಚ.ಕಿ.ಮೀ.ಗೆ ವಿಸ್ತರಣೆ ಮಾಡಲಾಯಿತು. ಬಂಡೀಪುರ ಹುಲಿ ಮೀಸಲು ಪ್ರದೇಶದ ಪ್ರಸ್ತುತ ವ್ಯಾಪ್ತಿ 912.04 ಚ.ಕಿ.ಮೀ. 2007-07ರಲ್ಲಿ ಕೆ.ಎಫ್‌.ಡಿ.ಸಿ. ನೆಡುತೋಪು ಪ್ರದೇಶದ 39.80 ಚ.ಕಿ.ಮೀ. ಪ್ರದೇಶವನ್ನು ಇಲ್ಲಿಗೆ ಹಸ್ತಾಂತರಿಸಲಾಯಿತು. 2010-11ರಲ್ಲಿ, ನುಗು ವನ್ಯಜೀವಿ ಅಭಯಾರಣ್ಯವನ್ನು ವನ್ಯಜೀವಿ ವಿಭಾಗ, ಮೈಸೂರಿಗೆ ಹಸ್ತಾಂತರಿಸಲಾಯಿತು. ಬಂಡೀಪುರ, ನಾಗರಹೊಳೆ, ವಯನಾಡು, ಮುದುಮಲೈ ಮತ್ತು ಸತ್ಯಮಂಗಲ ಹುಲಿ ಭೂಪರಿಸರವು ಕರ್ನಾಟಕ (ಬಂಡೀಪುರ-ನಾಗರಹೊಳೆ), ತಮಿಳುನಾಡು (ಮುದುಮಲೈ-ಸತ್ಯಮಂಗಲಂ) ಮತ್ತು ಕೇರಳ (ವಯನಾಡು) ರಾಜ್ಯಗಳಲ್ಲಿ ವ್ಯಾಪಿಸಿದೆ. ದೀರ್ಘಾವಧಿ ಹುಲಿ ಸಂತತಿಗಳ ಸಂರಕ್ಷಣೆಗೆ ಅಂತರ್‌-ರಾಜ್ಯ ಹುಲಿ ಮೀಸಲುಗಳ ನಿರ್ವಹಣೆಗೆ ಇದು ಅತ್ಯುತ್ತಮ ಉದಾಹರಣೆಯಾಗಿದೆ. 2010-11ರಲ್ಲಿ, ತಮಿಳುನಾಡಿನ ಸೇಗೂರು ಪ್ರಸ್ಥಭೂಮಿ - ಮೋಯಾರ್‌ ಕಣಿವೆ- ಸತ್ಯಮಂಗಲಂ ಪ್ರದೇಶದಲ್ಲಿ ಕ್ಯಾಮರಾ ಟ್ರ್ಯಾಪ್‌ ಕಾರ್ಯಾಚರಣೆಯಿಂದ ಸ್ಥಳದಲ್ಲಿ ವಾಸಿಸಿದ್ದ ಹುಲಿ ಸಂತತಿ ಹಾಗೂ ಈ ಪ್ರದೇಶ ಮತ್ತು ಬಿ.ಆರ್‌.ಟಿ ಹುಲಿ ಮೀಸಲು ಹಾಗೂ ಎಂ.ಎಂ. ಹಿಲ್ಸ್‌ ಮತ್ತು ಕಾವೇರಿ ವನ್ಯಜೀವಿ ಅಭಯಾರಣ್ಯದ ನಡುವೆ ಹುಲಿಗಳ ಸಂಭಾವ್ಯ ಸಂಚಾರದ ಬಗ್ಗೆ ಸಾಕ್ಷ್ಯ ದೊರಕಿತು. 2006ರ ಅಖಿಲ ಭಾರತ ಹುಲಿ ಗಣತಿ ಕಾರ್ಯಕ್ಕೆ ಹೋಲಿಸಿದರೆ 2010ರಲ್ಲಿ ಈ ಭೂಪರಿಸರ ಒಟ್ಟಾರೆ ಹುಲಿ ಸಂಖ್ಯೆಯಲ್ಲಿ ಪ್ರಗತಿ ತೋರಿಸಿದೆ. ಕರ್ನಾಟಕದ ಭಾಗದ (ನಾಗರಹೊಳೆ, ಬಂಡೀಪುರ, ಬಿ.ಆರ್‌.ಟಿ. ಹುಲಿ ಮೀಸಲು, ಎಂ.ಎಂ. ಹಿಲ್ಸ್‌ ಮತ್ತು ಕಾವೇರಿ ವನ್ಯಜೀವಿ ಅಭಯಾರಣ್ಯ ಹಾಗೂ ಸುತ್ತಮುತ್ತಲ ಅರಣ್ಯ) ಹುಲಿ ಸಂತತಿಯನ್ನು 4,460 ಚ.ಕಿ.ಮೀ. ವಿಸ್ತಾರದ ಪ್ರದೇಶದಲ್ಲಿ 231 (214 -249) ಎಂದು ಅಂದಾಜು ಮಾಡಲಾಗಿದೆ. ಈ ಹುಲಿ ಸಂತತಿ ತಮಿಳುನಾಡಿನ ಮುದುಮಲೈ ಮತ್ತು ಕೇರಳದ ವಯನಾಡಿನ ಜೊತೆ ಪರಸ್ಪರ ಸಂಬಂಧ ಹೊಂದಿರುವುದರಿಂದ, ಮತ್ತು ರಾಜ್ಯದ ಗಡಿಗಳುದ್ದಕ್ಕೆ ಸಂಚರಿಸುವುದರಿಂದ, ಈ ಹುಲಿಗಳ ಸಂಖ್ಯೆ ಕೇವಲ ಕರ್ನಾಟಕಕ್ಕೆ ವಿಶಿಷ್ಟವಾಗಿಲ್ಲ, ಆದರೆ ರಾಜ್ಯಕ್ಕೆ ಸೂಚಕವಾಗಿದೆ. ನಾಗರಹೊಳೆ, ಮುದುಮಲೈ, ಸತ್ಯಮಂಗಲ ಮತ್ತು ವಯನಾಡು ಭೂಪರಿಸರದ ಉದ್ದಕ್ಕಿರುವ ಬಂಡೀಪುರ ಹುಲಿ ಮೀಸಲು ಪ್ರದೇಶ, ಅಂದಾಜು 382 (354-411) ಹುಲಿ ಸಂಖ್ಯೆಯೊಂದಿಗೆ ಪಶ್ಚಿಮ ಘಟ್ಟ ಭೂಪರಿಸರ ಸಂಕೀರ್ಣದ ಮೂಲ ಹುಲಿಸಂತತಿಯಾಗಿದ್ದು, ಜಗತ್ತಿನಲ್ಲೇ ಏಕೈಕ ಅತಿ ದೊಡ್ಡ ಹುಲಿಗಳ ಅರಣ್ಯ ಸಂತತಿಯಾಗಿದೆ (ಕಾಲ ಎಟ್ ಆಲ್ 2011). ಪ್ರಸ್ತುತ, ಪಶ್ಚಿಮ ಘಟ್ಟಗಳ ಒಟ್ಟು ಅರಣ್ಯದ 21 ಪ್ರದೇಶಗಳ 21,435 ಚ.ಕಿ.ಮೀ ವ್ಯಾಪ್ತಿಯಲ್ಲಿ ಹುಲಿ ಸಂತತಿ ಹೊಂದಿರುವ ಈ ಭೂಪರಿಸರ ಸಂಕೀರ್ಣ ವಿಶ್ವದ ಹುಲಿ ಸಂತತಿಯ 1/8 ಭಾಗದಷ್ಟು (ಭಾರತದ 1/4 ಹುಲಿ ಸಂಖ್ಯೆ) ಹುಲಿಗಳನ್ನು ಹೊಂದಿದೆ. ಅಂದರೆ, ಸುಮಾರು 534 ಹುಲಿಗಳು (500-568), 2006ರ ಅಂದಾಜು 412ಕ್ಕಿಂತ 29.6ರಷ್ಟು ಹೆಚ್ಚಳ (ಭಾರತ: ಹುಲಿ ಅಂದಾಜು 2010, ಪರಿಸರ ಮತ್ತು ಅರಣ್ಯ ಸಚಿವಾಲಯ).

ಸ್ಥಳ ಮತ್ತು ವಿಸ್ತಾರ

ಈ ಹುಲಿ ಮೀಸಲು ಪ್ರದೇಶ ದಕ್ಷಿಣ ಕರ್ನಾಟಕದ ಎರಡು ಕಂದಾಯ ಜಿಲ್ಲೆಗಳಾದ ಮೈಸೂರು (ನಂಜನಗೂಡು ಮತ್ತು ಎಚ್‌.ಡಿ.ಕೋಟೆ ತಾಲೂಕುಗಳು) ಹಾಗೂ ಚಾಮರಾಜನಗರ (ಗುಂಡ್ಲುಪೇಟೆ ತಾಲೂಕು)ಗಳ ಪರಸ್ಪರ ಸಂಬಂಧಿತ ಭೂಪ್ರದೇಶದಲ್ಲಿದೆ. ಇದು ಕರ್ನಾಟಕ, ತಮಿಳುನಾಡು ಮತ್ತು ಕೇರಳ ಮೂರು ರಾಜ್ಯಗಳ ಸಂಗಮ ಪ್ರದೇಶದ ವಿಶಿಷ್ಟ ಭೂಪ್ರದೇಶವಾಗಿದೆ. ದಕ್ಷಿಣ ಭಾರತದ ಕರ್ನಾಟಕದಲ್ಲಿ 110 35’ 34” ಮತ್ತು 110 55’ 02” ಉತ್ತರ ಅಕ್ಷಾಂಶ ಹಾಗೂ 760 12’ 17” ಮತ್ತು 760 51’ 32” ಪೂರ್ವ ರೇಖಾಂಶಗಳ ನಡುವೆ ಇದೆ. ಇದು ಮುದುಮಲೈ, ನಾಗರಹೊಳೆ ಹುಲಿ ಮೀಸಲು ಮತ್ತು ವಯನಾಡು ವನ್ಯಜೀವಿ ಅಭಯಾರಣ್ಯಗಳನ್ನು ಒಳಗೊಂಡ ಪಶ್ಚಿಮ ಘಟ್ಟ ಹುಲಿ ಭೂಪರಿಸರ ಭಾಗವಾಗಿದೆ. ಹುಲಿ ಮೀಸಲು ಪ್ರದೇಶದ ಈಶಾನ್ಯ ಭಾಗ, ಸತ್ಯಮಂಗಲಂ ಹುಲಿ ಮೀಸಲು ಪ್ರದೇಶದ ಮೂಲಕ ಪಕ್ಕದ ಬಿ.ಆರ್‌.ಟಿ. ಹುಲಿ ಮೀಸಲು, ಎಂ.ಎಂ. ಹಿಲ್ಸ್ ಮತ್ತು ಕಾವೇರಿ ವನ್ಯಜೀವಿ ಅಭಯಾರಣ್ಯಕ್ಕೆ ಸಂಪರ್ಕಿತವಾಗಿದೆ.

ಮಹತ್ವ

ಭಾರತದ ಅಳಿವಿನಂಚಿನಲ್ಲಿರುವ ಅನೇಕ ಪ್ರಭೇದಗಳನ್ನು ಸಂರಕ್ಷಿಸಲು ಬಂಡೀಪುರ ರಾಷ್ಟ್ರೀಯ ಉದ್ಯಾನ ನೆರವು ನೀಡುತ್ತದೆ ಹಾಗೂ ಆತಂಕ ಎದುರಿಸುತ್ತಿರುವ ಇತರ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳಿಗೆ ಆಶ್ರಯ ಒದಗಿಸುತ್ತದೆ. ಬಂಡೀಪುರ ಇವುಗಳು ಸೇರಿದಂತೆ ವಿಶಾಲ ಶ್ರೇಣಿಯ ಮರಗಳನ್ನು ಹೊಂದಿದೆ: ತೇಗ (ಟೆಕ್ಟೊನಾ ಗ್ರಾಂಡಿಸ್‌), ಬೀಟೆ (ದಲ್ಬೆರ್ಜಿಯಾ ಲ್ಯಾಟಿಫೊಲಿಯಾ), ಶ್ರೀಗಂಧ (ಸಂತಾಲಮ್‌ ಆಲ್ಬಮ್‌), ಇಂಡಿಯನ್‌ ಲಾರೆಲ್‌(ಟರ್ಮಿನೇಲಿಯಾ ಟೊಮೆಂಟೊಸಾ), ಇಂಡಿಯನ್‌ ಕಿನೋ (ಟೆರೊಕಾರ್ಪಸ್‌ ಮಾರ್ಸುಪಿಯಮ್‌), ಬೃಹತ್‌ ಬಿದಿರು (ಡೆಂಡ್ರೊಕಲಾಮಸ್‌ ಸ್ಟ್ರಿಕ್ಟಸ್), ಬಿದಿರು (ಬ್ಯಾಂಬುಸಾ ಅರಂಡಿನೇಸಿಯಾ) ಮತ್ತು ಗ್ರೆವಿಯಾ ಟಿಲಿಯಾಫೊಲಿಯಾ. ಇವುಗಳು ಸೇರಿದಂತೆ ಅನೇಕ ಹೂ ಮತ್ತು ಹಣ್ಣು ಬಿಡುವ ಮರಗಳೂ ಇವೆ: ಕದಮ್ ಮರ (ಅಡಿನಾ ಕಾರ್ಡಿಫೊಲಿಯಾ), ಭಾರತೀಯ ನೆಲ್ಲಿಕಾಯಿ (ಎಂಬ್ಲಿಕಾ ಆಫಿಸಿಯನಾಲಿಸ್‌), ಕ್ರೇಪ್‌ ಮಿರ್ಟಲ್‌(ಲೇಜರ್‌ಸ್ಟ್ರೊಮಿಯಾ ಲ್ಯಾಸಿಯೊಲಟಾ), ಆಕ್ಸಲ್‌ ವುಡ್‌(ಅನೊಜೀಸಸ್‌ ಲ್ಯಾಟಿಫೊಲಿಯಾ), ಬ್ಲ್ಯಾಕ್‌ ಮಿರೊಬಲನ್‌(ಟರ್ನಿನೇಲಿಯಾ ಚಿಬುಲಾ), ಸ್ಲೀಚೆರಾ ಟ್ರಿಜುಗಾ, ಒಡಿನಾ ವೊಡಿಯರ್‌, ಫ್ಲೇಮ್‌ ಆಫ್‌ ದಿ ಫಾರೆಸ್ಟ್ (ಬ್ಯುಟಿಯಾ ಮೊನೊಸ್ಪರ್ಮಾ), ಗೋಲ್ಡನ್‌ ಶವರ್‌ ಮರ (ಕೇಸಿಯಾ ಫಿಸ್ತುಲಾ), ಸ್ಯಾಟಿನ್‌ ವುಡ್‌(ಕ್ಲೋರೊಕ್ಸಿಲಾನ್‌ಸ್ವೀಟೆನಿಯಾ), ಬ್ಲ್ಯಾಕ್‌ ಕಚ್‌(ಅಕೇಶಿಯಾ ಕ್ಯಾಟೇಚು), ಶೋರಿಯಾ ತಲುರಾ (ಇ), ಇಂಡಿಗೋಬೆರ್ರಿ (ರಾಂಡಿಯಾ ಅಲಿಜಿನೊಸಾ). ಬಂಡೀಪುರದಲ್ಲಿ ಅಳಿವಿನಂಚಿನಲ್ಲಿರುವ ಮತ್ತು ಆತಂಕದಲ್ಲಿರುವ ಪ್ರಭೇದಗಳಾದ ಭಾರತೀಯ ಆನೆ, ಜಿಂಕೆ, ಹುಲಿ, ಜೇಣು ಕರಡಿ, ಮಗ್ಗರ್‌ಗಳು, ಭಾರತೀಯ ಹೆಬ್ಬಾವು, ನಾಲ್ಕು ಕೊಂಬಿನ ಜಿಂಕೆ, ನರಿಗಳು ಮತ್ತು ಧೋಲ್‌ಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಹೊಂದಿದೆ. ಸಾರ್ವಜನಿಕರು ಅಡ್ಡಾಡುವ ರಸ್ತೆಗಳ ಬದಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಸ್ತನಿಗಳೆಂದರೆ ಚಿತಾಲ್‌, ಕಂದು ಲಂಗೂರ್‌, ಭಾರತೀಯ ಬೃಹತ್‌ ಅಳಿಲು ಮತ್ತು ಆನೆ. 1997ರಲ್ಲಿ ಪ್ರಕಟಣೆಯಾಗದ ಗಣತಿ ಪಟ್ಟಿಯಲ್ಲಿ ಮಧ್ಯಮದಿಂದ ದೊಡ್ಡ ಗಾತ್ರದ ಸಸ್ತನಿಗಳ ಪಟ್ಟಿಯನ್ನು ನೀಡಲಾಗಿದೆ.

ಭೂದೃಶ್ಯ

ಬಂಡೀಪುರ ಹುಲಿ ಮೀಸಲು ಪ್ರದೇಶಕ್ಕೆ ಗಡಿಯಲ್ಲಿರುವ ನೀಲಗಿರಿ ಪರ್ವತ ಸರಣಿಗಳ ಜೊತೆಗೆ ಸಣ್ಣ ಬೆಟ್ಟ ಶ್ರೇಣಿಗಳನ್ನು ಹೊಂದಿರುವ ನೀಲಗಿರಿ ಬೆಟ್ಟದ ಪ್ರದೇಶ ಅಕಾಯಿನ್‌ ಮೆಟಾಮಾರ್ಫಿಕ್‌ ಬಂಡೆಯನ್ನು ಹೊಂದಿದ್ದು, ಇದು ಚಾರ್ನೊಕೈಟ್, ಬಯೊಟೈಟಿಕ್‌, ಮಾಗ್ನೈಟ್‌, ಕ್ವಾರ್ಟ್ಜೈಟ್‌, ಹಾರ್ನ್‌ಬ್ಲೆಂಡ್‌, ಪೆಗ್ಮಾಟೈಟ್‌ ಮತ್ತು ಡೊಲರೈಟ್‌ ಹಾಗೂ ಕ್ವಾರ್ಟ್ಸ್ ವೀನ್ಸ್‌ಗಳನ್ನು ಒಳಗೊಂಡಿದೆ. ಚಾರ್ನೊಕೈಟ್‌ನ ತೀವ್ರವಾದ ಪದರಗಳು ಗಡಿಭಾಗದ ಮುದುಮಲೈ ಹುಲಿ ಮೀಸಲು ಪ್ರದೇಶದಲ್ಲಿ ಬಂಡೆಗಳನ್ನು ರಚಿಸಿದ್ದು, ಇದು ಬಂಡಿಪುರ ಹುಲಿ ಮೀಸಲು ಪ್ರದೇಶಕ್ಕೂ ವಿಸ್ತರಿಸಿದೆ. ಈ ಹೈಪರ್‌ಸ್ತೆನೆಸ್‌ ಹೊಂದಿರುವ ನೀಲಿಕಂಡು ಬಂಡೆ ಅತ್ಯುನ್ನತ ದರ್ಜೆಯ ಮೆಟಾಮಾರ್ಫಿಕ್‌ ಪ್ರದೇಶದ ಅಡಿಪಾಯವನ್ನು ನಿರ್ಮಿಸಿದೆ. ಚಾರ್ನಿಕೈಟ್‌ ಗ್ರಾನೊಲಿಥಿಕ್‌ ವಿನ್ಯಾಸ ಹೊಂದಿದೆ ಮತ್ತು ಕ್ವಾರ್ಟ್ಜ್‌, ಫೆಲ್ಡ್ಸ್‌ಫಾರ್‌, ಹೈಪರ್‌ ಸ್ತೆನೆಸ್‌ಗಾರ್ನೆಟ್‌, ಹಾರ್ನ್‌ಬ್ಲೆಂಡ್‌, ಬಯೋಟೂಟ್‌, ಅಪಾಟೈಟ್‌ ಮತ್ತು ಜಿರ್ಕಾನ್‌ಗಳನ್ನು ಉಪ ಖನಿಜಗಳಾಗಿ ಹೊಂದಿದೆ. ಹಾರ್ನ್‌ಬ್ಲೆಂಡ್‌ ಖನಿಜ ನಿಕ್ಷೇಪಗಳನ್ನು ಬಂಡೀಪುರ ಹುಲಿ ಮೀಸಲು ಪ್ರದೇಶಕ್ಕೆ ಮುಂದುವರಿದ ವಯನಾಡು ಗಡಿಯುದ್ದಕ್ಕೆ ಕಾಣಬಹುದು. ಇಲ್ಲಿರುವ ಬಂಡೆಗಳು ಮುಖ್ಯವಾಗಿ ಮೆಟಾಮಾರ್ಫಿಕ್‌ ಫಾರ್ಮೇಶನ್‌ಗೆ ಸೇರಿದ್ದು, ನೀಸ್‌, ಕ್ವಾರ್ಟ್ಜೈಟ್, ಮೈಕಾ, ಹಾರ್ನ್‌ಬ್ಲೆಂಡ್‌ ಮತ್ತು ಸಿಸ್ಟ್‌ ಸಾಮಾನ್ಯವಾಗಿ ಎಲ್ಲ ಕರೆ ಕಂಡುಬರುತ್ತವೆ. ಈ ಪ್ರದೇಶದಲ್ಲಿ ರೂಪುಗೊಂಡಿರುವ ಬಂಡೆಗಳಾದ, ಗ್ರಾನೈಟ್ ಮತ್ತು ಚಾರ್ನೊಕೈಟ್‌ಗಳು ಮೆಟಾಮಾರ್ಫಿಕ್‌ ಬಂಡೆಗಳ ನಡುವೆ ಕಂಡುಬರುತ್ತವೆ, ಎತ್ತರದ ಪ್ರದೇಶಗಳಲ್ಲಿ ಮತ್ತು ನದಿಪಾತ್ರದಲ್ಲಿ ಇವು ಕಾಣಿಸುತ್ತವೆ. ಕನಿಯಾನಪುರ ಬ್ಲಾಕ್‌ II ಮತ್ತು III, ಮೋಯಾರ್‌ ಭಾಗದ ಮೀಸಲು ಪ್ರದೇಶದ ಈಶಾನ್ಯ ತುದಿಯಲ್ಲಿ ಕ್ವಾರ್ಟ್ಜ್‌ ಬಂಡೆಗಳ ರಚನೆಯ ಮುಖ್ಯ ಭಾಗವಾಗಿದೆ ಮತ್ತು ಯಲಚೆಟ್ಟಿ ಸಮೀಪ ಗ್ರಾನೈಟ್‌ ಶಿಲೆಗಳ ಪುಡಿಯಾಗುವಿಕೆಯ ಲಕ್ಷಣಕ್ಕೆ ಕ್ವಾರ್ಟ್ಜ್‌ಕಣಗಳೊಂದಿಗೆ ಮಿಶ್ರಣವಾಗಿದ್ದೇ ಮುಖ್ಯ ಕಾರಣವಾಗಿದೆ. ಹೆಬ್ಬಳ್ಳ, ಹೊನ್ನುರಹಟ್ಟಿ ಮತ್ತು ಅರೆಕಾಡು ಹಳ್ಳ ನದಿಪಾತ್ರದಲ್ಲಿ ಗುಲಾಬಿ ಕಂದು ಬಣ್ಣದ ವಿವಿಧ ಗ್ರಾನೈಟ್‌ಗಳು ಕಂಡುಬರುತ್ತವೆ (ಡಾ. ಕಾದಂಬಿ). ಎರಡು ಮುಖ್ಯ ವಿಧದ ಮಣ್ಣುಗಳು— ಜೇಡಿ ಮಣ್ಣು, ಸಾಮಾನ್ಯವಾಗಿ ಆಳದಲ್ಲಿದ್ದು ಏರು ತಗ್ಗಿನ ಜಾಗದಲ್ಲಿ ಸುಣ್ಣದ ಕಲ್ಲಿನ ಮಿಶ್ರಣದಿಂದ ಕೂಡಿದೆ. ಇಳಿಜಾರು ಮತ್ತು ಇತರ ನೀರುಹರಿಯುವ ಪ್ರದೇಶಗಳಲ್ಲಿ ಕಂದು ಅಥವಾ ಕೆಂಪು ಮರಳುಮಿಶ್ರಿತ ಮಣ್ಣು. ಬೆಟ್ಟದ ತುದಿಯಲ್ಲಿ ಮಣ್ಣು ಆಳವಿಲ್ಲ ಕಣಿವೆಗಳಲ್ಲಿ ಆಳವಾಗಿದೆ. ಮಣ್ಣಿನ ಪದರಗಳು ಸಾಮಾನ್ಯವಾಗಿ ಬಿಳಿ, ಮೃದು ಸುಲಭವಾಗಿ ವಿಭಜನೆಯಾಗುವ ಬಂಡೆಚೂರುಗಳಾಗಿದ್ದು ಫೆಲ್ಡ್‌ಸ್ಪಾರ್‌ ಬಹಳಷ್ಟು ಮಟ್ಟಿಗೆ ಇದೆ. ಕಳಿ ಮಣ್ಣು ತಗ್ಗುಪ್ರದೇಶಗಳಲ್ಲಿ ಅಲ್ಲಲ್ಲಿ ಕಂಡುಬರುತ್ತದೆ. ಕಳಿಮಣ್ಣಿನ ಪದರಗಳು ಸಾಮಾನ್ಯವಾಗಿ ಮೆಟಾಮಾರ್ಫಿಕ್‌ ರಚನೆಗಳನ್ನು ಒಳಗೊಂಡಿದ್ದು ಇವು ಅಧಿಕ ಪ್ರಮಾಣದಲ್ಲಿ ಕಬ್ಬಿಣದ ಆಕ್ಸೈಡ್‌ ಹೊಂದಿವೆ. ಈ ಫೆರುಜಿನಿಯಸ್‌ ಬಂಡೆಗಳ ಹವಾಮಾನಕ್ಕೆ ತಕ್ಕಂತೆ ಬದಲಾಗುವ ಪ್ರಕ್ರಿಯೆಯಿಂದ ಕೆಂಪು ಕಳಿ ಮಣ್ಣು ಸೃಷ್ಟಿಯಾಗಿದೆ. ಆಳವಾದ ಸಾಕಷ್ಟು ನೀರು ಹರಿಯುವ ಕಳಿ ಮಣ್ಣಿನಲ್ಲಿ ಅತ್ಯುತ್ತಮ ಅರಣ್ಯ ಬೆಳವಣಿಗೆಯಾಗಿದೆ. ಒಂದಿಷ್ಟು ಖನಿಜಗಳು ಮತ್ತು ಉಪ್ಪು ಒಳಗೊಂಡಿರುವ ಪುಡಿಯಾದ ಕ್ವಾರ್ಟ್ಜ್‌ಮಿಶ್ರಣದ ಶೇಲ್‌ ಶಿಲೆಗಳು ಅಲ್ಲಲ್ಲಿ ಕಂಡುಬರುತ್ತವೆ ಇವು ವನ್ಯಜೀವಿಗಳಿಗೆ ನೈಸರ್ಗಿಕ ಉಪ್ಪು ಒದಗಿಸುತ್ತವೆ. ಉಪ್ಪುನೀರಹಳ್ಳದಲ್ಲಿರುವ ಒಂದು ಶಿಲೆ ಮತ್ತು ಚಮ್ಮನಹಳ್ಳ ರಸ್ತೆ ಬಳಿ ಇರುವ ಕೆಲವು ಶಿಲೆ ಇದಕ್ಕೆ ಉತ್ತಮ ಉದಾಹರಣೆ.

ESZ.

ಪರಿಸರ (ಸಂರಕ್ಷಣಾ) ಕಾಯ್ದೆ, 1986 (1986ರ 29)ರ ಉಪನಿಯಮ (1) ಹಾಗೂ ಪರಿಸರ (ಸಂರಕ್ಷಣಾ) ಕಾಯ್ದೆ, 1986ರ ವಿಭಾಗ (3) ಮತ್ತು ಉಪನಿಯಮ (3)ರ ಉಪವಿಭಾಗ ಕ್ಲಾಸ್ (v) ಮತ್ತು ಕ್ಲಾಸ್ (xiv)ರ ಜೊತೆ ಇರುವ ನಿಯಮಗಳ ಅನುಸಾರ ದಿನಾಂಕ 2012 ಅಕ್ಟೋಬರ್‌ 4ರ ಅಧಿಸೂಚನೆ ಸಂಖ್ಯೆ ಎಸ್‌ಒ 2364 (ಇ) ಮೂಲಕ ಕೇಂದ್ರ ಸರ್ಕಾರ, 597.45 ಚ. ಕಿಮೀ ಭೌಗೋಳಿಕ ವಿಸ್ತಾರದ ಬಂಡೀಪುರ ಹುಲಿ ಮೀಸಲು ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಅನುಸೂಚಿತಗೊಳಿಸಿತು, ಇದರಲ್ಲಿ 123 ಹಳ್ಳಿಗಳು ಸೇರಿವೆ.

ವಿಸಿಟರ್ ಕಾರ್ನರ್

ಮಾಡಬೇಕಾದ ಕೆಲಸಗಳುನೋಡಿ

1.ಜೀಪ್‌ ಸಫಾರಿ 2. ಹಿಮವದ್‌ಗೋಪಾಲ ಸ್ವಾಮಿ ದೇಗುಲ ದರ್ಶನ

ತಲುಪುವುದು ಹೇಗೆನೋಡಿ

ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿದೆ, ಇದು ಉದ್ಯಾನದಿಂದ 255 ಕಿ.ಮೀ. ದೂರದಲ್ಲಿದೆ. ಬಂಡೀಪುರ ತಲುಪಲು ಬೆಂಗಳೂರಿನಿಂದ ಸಾಕಷ್ಟು ಕಾರುಗಳು ಮತ್ತು ಬಸ್‌ಗಳು ಲಭ್ಯವಿವೆ. ಕೊಯಂಬತ್ತೂರು ವಿಮಾನ ನಿಲ್ದಾಣ ಉದ್ಯಾನದಿಂದ ಕೇವಲ 84 ಕಿ.ಮೀ. ದೂರದಲ್ಲಿದೆ. ಸಮೀಪದ ರೈಲ್ವೆ ನಿಲ್ದಾಣ ಮೈಸೂರಿನಲ್ಲಿದ್ದು ನಗರದಿಂದ ಕೇವಲ 80 ಕಿ.ಮೀ. ದೂರದಲ್ಲಿದೆ. ರೈಲ್ವೆ ಮೂಲಕ ಬಂಡಿಪುರ ಅನೇಕ ನಗರಗಳು ಮತ್ತು ರಾಜ್ಯಗಳೊಂದಿಗೆ ಸಂಪರ್ಕ ಹೊಂದಿದೆ. ರೈಲ್ವೆ ನಿಲ್ದಾಣದಿಂದ, ಬಂಡಿಪುರ ಉದ್ಯಾನ ತಲುಪಲು ಕ್ಯಾಬ್‌ಗಳು ಅಥವಾ ಬಸ್‌ಗಳನ್ನು ಅವಲಂಬಿಸಬಹುದು. ಕರ್ನಾಟಕ ಮತ್ತು ತಮಿಳುನಾಡಿನ ಬಹುತೇಕ ಪ್ರಮುಖ ನಗರಗಳಿಂದ ಖಾಸಗಿ ಮತ್ತು ಸರ್ಕಾರಿ ಬಸ್‌ಗಳು ಬಂಡಿಪುರಕ್ಕೆ ಸಂಪರ್ಕ ಕಲ್ಪಿಸುತ್ತವೆ. ಬಂಡೀಪುರ ತಲುಪಲು ಯಾವುದೇ ಮುಖ್ಯ ನಗರದಿಂದ ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆಯಬಹುದು. ಮಂಡ್ಯ ಮತ್ತು ರಾಮನಗರದಿಂದ ನಾಲ್ಕು ಪಥಗಳ ಉತ್ತಮ ರಸ್ತೆ ಸಂಪರ್ಕವಿದೆ. ಕನಕಪುರ ಮತ್ತು ಮಳವಳ್ಳಿಯಿಂದ ಡಬಲ್‌ ರಸ್ತೆಯ ಮಾರ್ಗವಿದೆ. ಮೈಸೂರಿನಿಂದ ಆರು ಪಥಗಳ ಬೈಪಾಸ್‌ ರಸ್ತೆ ಸಂಪರ್ಕವಿದೆ. ಇದು ಅತಿ ಹೆಚ್ಚು ಉತ್ತಮವಾದ ರಸ್ತೆ. ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಪ್ರಮುಖ ನಗರಗಳ ನಡುವಿನ ದೂರ ಮೈಸೂರು ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ- 80 ಕಿ.ಮೀ. ಬೆಂಗಳೂರು ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ- 220 ಕಿ.ಮೀ. ಊಟಿ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ- 80 ಕಿ.ಮೀ. ಕೊಡಗು ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ- 200 ಕಿ.ಮೀ. ವಯನಾಡು ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ- 80 ಕಿ.ಮೀ. ಕ್ಯಾಲಿಕಟ್ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ- 140 ಕಿ.ಮೀ. ಕಬಿನಿಯಾಂಡ್ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ- 94 ಕಿ.ಮೀ.

ಭೇಟಿ ನೀಡಬಹುದಾದ ಸಮಯನೋಡಿ

---

ಶುಲ್ಕಗಳು ಮತ್ತು ಅನುಮತಿಗಳುನೋಡಿ

ಪ್ರಸ್ತುತ ಸಂದರ್ಶಕರಿಗಾಗಿ ಈ ವಸತಿ ಸೌಲಭ್ಯಗಳು ಬಂಡೀಪುರ ಕ್ಯಾಂಪಸ್‌ನಲ್ಲಿ ಲಭ್ಯ ಇವೆ. ಎ) ವಿ.ಐ.ಪಿ ಅತಿಥಿ ಗೃಹ 4 ಸೂಟ್‌ಗಳಿರುವ 01 ವಿ.ಐ.ಪಿ ಅತಿಥಿ ಗೃಹವಿದೆ ಬಿ) ಕಾಟೇಜ್‌ಗಳು 19 ಸೂಟ್‌ಗಳಿರುವ 09 ಕಾಟೇಜ್‌ಗಳಿವೆ ಸಿ) ಡಾರ್ಮಿಟರಿಗಳು 45 ಬೆ‌‌ಡ್‌ಗಳಿರುವ 04 ಕಾಟೇಜ್‌ಗಳಿವೆ ಡಿ) ವಸತಿ ದರ ಕ್ರ.ಸಂ. ಕಾಟೇಜ್‌ಹೆಸರು ದರಗಳು 1 ಗಜೇಂದ್ರ I 2500 2 ಗಜೇಂದ್ರ II 2000 3 ಗಜೇಂದ್ರ III 1600 4 ಗಜೇಂದ್ರ IV 1600 5 ಕುಟೀರ 1600 6 ವನಶ್ರೀ I 1600 7 ವನಶ್ರೀ II 1600 8 ವನಶ್ರೀ III 1600 9 ವನಶ್ರೀ IV 1600 10 ವನಶ್ರೀ V 3200 11 ಚಿತಾಲ್ I 1600 12 ಚಿತಾಲ್ II 1600 13 ಹರಿಣಿ I1600 14 ಹರಿಣಿ II1600 15 ಕೋಕಿಲ I1600 16 ಕೋಕಿಲ I1600 17 ಪಪೀಹ I 1600 18 ಪಪೀಹ II1600 19 ಮಯೂರ I 1600 20 ಮಯೂರ II 1600 21 ಡಾರ್ಮಿಟರಿ (20 ಹಾಸಿಗೆ) 4000 22 ಡಾರ್ಮಿಟರಿ (10 ಹಾಸಿಗೆ) 2000 23 ಡಾರ್ಮಿಟರಿ (9 ಹಾಸಿಗೆ) 1800 24 ಡಾರ್ಮಿಟರಿ (6 ಹಾಸಿಗೆ) 1200 25 ವನರಂಜಿನಿ I 1600 26 ವನರಂಜಿನಿ II 1600 27 ವನಸುಮ 1600 ವನ್ಯಜೀವಿ ಸಫಾರಿ ಪ್ರಸ್ತುತ ಇಡೀ ಪ್ರವಾಸೋದ್ಯಮ ಪ್ರದೇಶವನ್ನು ಒಂದು ಘಟಕವಾಗಿ ಪರಿಗಣಿಸಿ ಸಫಾರಿ ಚಟುವಟಿಕೆ ನಡೆಸಲಾಗುತ್ತಿದೆ. ಇಲಾಖೆಯ 08 ಸಫಾರಿ ಬಸ್‌ಗಳು ಮತ್ತು 05 ಜಿಪ್ಸಿಗಳು (ಉದ್ಯಾನ ಪ್ರವೇಶ ಶುಲ್ಕದ ಜೊತೆ ರೂ. 3000/ ಟ್ರಿಪ್‌ಗೆ) ಬಂಡೀಪುರ ಹುಲಿ ಮೀಸಲು ಪ್ರದೇಶದ ಪರಿಸರ ಪ್ರವಾಸಕ್ಕೆ ಸಂದರ್ಶಕರನ್ನು ಕರೆದೊಯ್ಯುತ್ತವೆ. a. ಸಫಾರಿ ದರ ಉದ್ಯಾನ ಪ್ರವೇಶ ಶುಲ್ಕ ಜಂಗಲ್‌ಸಫಾರಿ ವಾಕ್‌-ಇನ್ ಸಫಾರಿ ಬಸ್‌ ವಯಸ್ಕರು ರೂ. ರೂ. 250/- ರೂ. ರೂ. 100/- ರೂ. 350/- ಮಕ್ಕಳು ರೂ. ರೂ. 125/- ರೂ. ರೂ. 50/- ರೂ. 175/- b. ಸಫಾರಿ ಸಮಯ c. ಬಸ್‌ಗಳಿಗೆ ಸೆಷನ್‌1ನೇ ಟ್ರಿಪ್‌ ಆರಂಭ ಸಮಯ 1ನೇ ಟ್ರಿಪ್ ಮುಕ್ತಾಯ ಸಮಯ 2ನೇ ಟ್ರಿಪ್ ಆರಂಭ ಸಮಯ 2ನೇ ಟ್ರಿಪ್‌ ಮುಕ್ತಾಯ ಸಮಯ 3ನೇ ಟ್ರಿಪ್‌ ಆರಂಭ ಸಮಯ 3ನೇ ಟ್ರಿಪ್‌ ಮುಕ್ತಾಯ ಸಮಯ ಬೆಳಗ್ಗೆ 6:15 7:45 7:45 9:30 ಮಧ್ಯಾಹ್ನ 2:30 4:00 4:00 5:30 5:30 6:45 ಜಿಪ್ಸಿಗಳಿಗೆ ಸೆಷನ್‌1ನೇ ಟ್ರಿಪ್‌ ಆರಂಭ ಸಮಯ 1ನೇ ಟ್ರಿಪ್ ಮುಕ್ತಾಯ ಸಮಯ 2ನೇ ಟ್ರಿಪ್ ಆರಂಭ ಸಮಯ 2ನೇ ಟ್ರಿಪ್‌ ಮುಕ್ತಾಯ ಸಮಯ ಬೆಳಗ್ಗೆ 6:15 08:00 08:00 09:45 ಮಧ್ಯಾಹ್ನ 02:30 04:30 04:30 06:30 ಪಾರ್ಕಿಂಗ್‌ ಹಗಲು ಪಾರ್ಕಿಂಗ್‌ ಶೋ ಎಂಟ್ರೀಸ್‌ ಸರ್ಚ್‌: ವಾಹನ ಪಾರ್ಕಿಂಗ್‌ ಶುಲ್ಕ ಜಿಎಸ್‌ಟಿ (18) ಒಟ್ಟು ಕಾರು/ ಜೀಪ್‌ರೂ. 50/- ರೂ. 9/- ರೂ. 59/- ಎಲ್‌ಸಿವಿ 100/- ರೂ. 18/- ರೂ. 118/- ಬಸ್‌/ ಟ್ರಕ್‌ರೂ. 150/- ರೂ. 27/- ರೂ. 177/- ರಾತ್ರಿ ಪಾರ್ಕಿಂಗ್‌ ಶೋ ಎಂಟ್ರೀಸ್‌ ಸರ್ಚ್‌: ವಾಹನ ಪಾರ್ಕಿಂಗ್‌ ಶುಲ್ಕ ಜಿಎಸ್‌ಟಿ (18) ಒಟ್ಟು ಕಾರು/ ಜೀಪ್‌ರೂ. 100/- ರೂ. 18/- ರೂ. 118/- ಎಲ್‌ಸಿವಿ 200/- ರೂ. 36/- ರೂ. 236/- ಬಸ್‌/ ಟ್ರಕ್‌ರೂ. 300/- ರೂ. 54/- ರೂ. 354/- ಕ್ಯಾಂಟೀನ್‌ಸಮಯ ಬೆಳಗಿನ ಉಪಾಹಾರ 8.30 ರಿಂದ 9.30 ಮಧ್ಯಾಹ್ನದ ಊಟ 1.30ರಿಂದ 2.30 ರಾತ್ರಿ ಊಟ 8.00ರಿಂದ 9.00

ಬುಕಿಂಗ್ / ಕಾಯ್ದಿರಿಸುವಿಕೆನೋಡಿ

---

ಹವಾಮಾನನೋಡಿ

ಮೀಸಲು ಪ್ರದೇಶದಲ್ಲಿ ಮೂರು ಋತುಗಳನ್ನು ಗಮನಾರ್ಹವಾಗಿ ಕಾಣಬಹುದು, ಒಣ, ಒದ್ದೆ ಮತ್ತು ಚಳಿ. ಚಳಿಗಾಲ ನವೆಂಬರ್‌ನಲ್ಲಿ ಆರಂಭವಾಗುತ್ತದೆ ಮತ್ತು ಫೆಬ್ರವರಿ ಮಧ್ಯ ಭಾಗದವರೆಗೆ ಮುಂದುವರಿಯುತ್ತದೆ ನಂತರ ಬೇಸಿಗೆ ಆರಂಭವಾಗಿ ಜೂನ್‌ ಮಧ್ಯಭಾಗದವರೆಗೆ ಇರುತ್ತದೆ. ಡಿಸೆಂಬರ್‌ ಮತ್ತು ಜನವರಿ ಅತಿ ತಣ್ಣಗಿನ ತಿಂಗಳುಗಳಾಗಿದ್ದು ಮಾರ್ಚ್‌ ಮತ್ತು ಏಪ್ರಿಲ್‌ ಅತಿ ಬಿಸಿಲಿನ ಅವಧಿಯಾಗಿರುತ್ತವೆ. ಒದ್ದೆ ಋತು ಜೂನ್‌ ಮಧ್ಯಭಾಗದಲ್ಲಿ ಆರಂಭವಾಗುತ್ತದೆ ಅದಕ್ಕಿಂತ ಮುಂಚೆ ಮಾನ್ಸೂನ್‌ಪೂರ್ವದ ಸಣ್ಣ ಮಳೆ ಏಪ್ರಿಲ್‌ಮತ್ತು ಮೇನಲ್ಲಿ ಬರುತ್ತದೆ. ಮಳೆಗಾಲ ಸೆಪ್ಟೆಂಬರ್‌ ಅಂತ್ಯದವರೆಗೆ ಇರುತ್ತದೆ. ಈಶಾನ್ಯ ಮಾನ್ಸೂನ್‌ ಅಕ್ಟೋಬರ್‌ ಮಧ್ಯಭಾಗದಲ್ಲಿ ಆರಂಭವಾಗಿ ನವೆಂಬರ್‌ ಮಧ್ಯಭಾಗದವರೆಗೆ ಇರುತ್ತದೆ. ಬೇಸಿಗೆಯಲ್ಲಿ ವಾತಾವರಣ ಬಿಸಿಲು ಮತ್ತು ಒಣಗಿದ್ದು ಆಗಾಗಾ ಮಾನ್ಸೂನ್‌ಪೂರ್ವದ ಹನಿಮಳೆ ಸುರಿಯುತ್ತದೆ. ನೈರುತ್ಯ ಭಾಗದ ಬೀರಂಬಾಡಿ, ಐನೂರಮಾರಿಗುಡಿ ಮತ್ತು ಬೇಗೂರು ಪ್ರದೇಶಗಳನ್ನು ಹೊರತುಪಡಿಸಿ ಒಟ್ಟಾರೆಯಾಗಿ ಹವಾಮಾನ ಸಾಮಾನ್ಯವಾಗಿ ಹಿತಕರವಾಗಿರುತ್ತದೆ.

ಇಂಟರ್ನೆಟ್ ಮತ್ತು ಮೊಬೈಲ್ ಸಂಪರ್ಕನೋಡಿ

ಕೇವಲ ಬಿ.ಎಸ್‌.ಎನ್‌.ಎಲ್‌. ಸಂಪರ್ಕ ಮಾತ್ರ ಲಭ್ಯವಿದೆ.

ಪದೇಪದೆ ಕೇಳಲಾಗುವ ಪ್ರಶ್ನೆಗಳುನೋಡಿ

---

ಶಿಷ್ಟಾಚಾರ ಪಾಲನೆ ಮತ್ತು ನಿಷಿದ್ಧ ಚಟುವಟಿಕೆಗಳು ನೋಡಿ

ಮಾಡಿರಿ

1. ಪ್ರದೇಶದ ಮಾಹಿತಿ ಕೈಪಿಡಿ, ಹಕ್ಕಿಗಳು ಮತ್ತು ಪ್ರಾಣಿಗಳ ಗುರುತಿಸುವಿಕೆ ಪುಸ್ತಕ, ಕ್ಯಾಮರಾ, ಬೈನಾಕ್ಯುಲರ್‌ಮುಂತಾದ ಪ್ರಮುಖ ಸಂಬಂಧಿತ ಸಾಹಿತ್ಯ ಮತ್ತು ಇತರ ಸಲಕರಣೆಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ, 2. ವಾಹನಗಳನ್ನು ನಿಧಾನವಾಗಿ ಚಾಲನೆ ಮಾಡಿ. 3. ಕಸದ ಡಬ್ಬಿಗಳನ್ನು ಬಳಸಿ. 4. ಅರಣ್ಯ ಅಧಿಕಾರಿಗಳ ಸೂಚನೆಗಳು ಮತ್ತು ನಿಮಗೆ ಒದಗಿಸಿದ ಕೈಪಿಡಿಗಳಲ್ಲಿರುವ ಮಾಹಿತಿಯನ್ನು ಪಾಲಿಸಿ. 5. ಸ್ಥಳೀಯ ಸಿಬ್ಬಂದಿ ಜೊತೆಗಿನ ಮುಂಚಿನ ಮಾತುಕತೆ ನಿಮ್ಮ ಭೇಟಿ ಮತ್ತು ವಾಸ್ತವ್ಯವನ್ನು ಹೆಚ್ಚು ಹಿತಕರ ಹಾಗೂ ಮಾಹಿತಿಯುಕ್ತವಾಗಿಸುತ್ತದೆ. 6. ವನ್ಯಜೀವಿಯನ್ನು ವೀಕ್ಷಿಸಲು ಹೊರಗೆ ತೆರಳುವಾಗಿ, ಖಾಕಿ ಅಥವಾ ಆಲಿವ್‌ ಹಸಿರು ಅಥವಾ ಕಂದು ಬಣ್ಣದ ಉಡುಪುಗಳು ಸೂಕ್ತವಾಗಿರುತ್ತವೆ. ಬಿಳಿ ಅಥವಾ ಪ್ರಕಾಶಮಾನ ಬಣ್ಣಗಳು ಎದ್ದುಕಾಣುತ್ತವೆ ಮತ್ತು ಪ್ರಾಣಿಗಳಿಗೆ ಭಯ ಹುಟ್ಟಿಸುತ್ತವೆ. ಉದ್ದನೆಯ ಪ್ಯಾಂಟ್ ಸಾಮಾನ್ಯವಾಗಿ ಧರಿಸಿ. 7. ಸ್ಪೋರ್ಟ್ಸ್‌ ಶೂ ನಂಥ ಆರಾಮದಾಯಕ ವಾಕಿಂಗ್ ಶೂಗಳನ್ನು ಧರಿಸಿ. 8. ನಿಮ್ಮ ಕಸಗಳನ್ನು ಯಾವಾಗಲೂ ಜೊತೆಗೆ ಕೊಂಡೊಯ್ಯಿರಿ. 9. ನೋಂದಾಯಿತ ಗೈಡ್‌ನೊಂದಿಗೆ ಸಂಚರಿಸಿ. 10. ಬಯೋಡಿ ಗ್ರೇಡೆಬಲ್‌ ವಸ್ತುಗಳನ್ನು ಬಳಸಿ. 11. ಕೊಠಡಿ ಸಿಗದ ನಿರಾಶೆಯನ್ನು ತಪ್ಪಿಸಿಕೊಳ್ಳಲು ಅರಣ್ಯ ವಿಶ್ರಾಂತಿ ಗೃಹಗಳಲ್ಲಿ ಮುಂಚಿತವಾಗಿ ಬುಕ್‌ಮಾಡಿ.

ಮಾಡಬೇಡಿರಿ

1. ಪ್ರಾಣಿಗಳಿಗೆ ಆಹಾರ ತಿನ್ನಿಸಬೇಡಿ. 2. ಪ್ರಾಣಿಗಳನ್ನು ಕಿಚಾಯಿಸಬೇಡಿ. 3. ಧೂಮಪಾನ ಮಾಡಬೇಡಿ. 4. ಮದ್ಯಪಾನಕ್ಕೆ ಅವಕಾಶ ಇಲ್ಲ. 5. ವಾಹನಗಳನ್ನು ನಿಲ್ಲಿಸಬೇಡಿ. 6. ಹಾರ್ನ್‌ಮಾಡಬೇಡಿ. 7. ಓವರ್‌ಟೇಕ್‌ ಮಾಡಬೇಡಿ. 8. ವೇಗದ ಮಿತಿಯನ್ನು ಮೀರಬೇಡಿ. 9. ಫೊಟೊಗಳನ್ನು ತೆಗೆದುಕೊಳ್ಳಬೇಡಿ. 10. ಕಸ ಹಾಕಬೇಡಿ. ಗಮನಿಸಿ: ಇವುಗಳಲ್ಲಿ ಯಾವುದೇ ನಿಯಮ ಉಲ್ಲಂಘಿಸಿದಲ್ಲಿ ರೂ. 1000/- ದಂಡ ತೆರಬೇಕಾಗುತ್ತದೆ.