ವೃಕ್ಷ ಉದ್ಯಾನವನ ಎಂಬುದು ಗಿಡಮೂಲಿಕೆಗಳು, ಪೊದೆಗಳು, ಬಳ್ಳಿಗಳು ಇತ್ಯಾದಿಗಳೊಂದಿಗೆ ಮುಖ್ಯವಾಗಿ ನೈಸರ್ಗಿಕ ಮತ್ತು ನೆಟ್ಟ ಮರಗಳ ಬೆಳವಣಿಗೆಯ ಪ್ರದೇಶವಾಗಿದೆ. ನಗರ ಸ್ಥಳಗಳಲ್ಲಿ ಅಥವಾ ಹತ್ತಿರದಲ್ಲಿ ವೃಕ್ಷ ಉದ್ಯಾನವನಗಳನ್ನು ರಚಿಸುವ ಉದ್ದೇಶವು ನಗರವಾಸಿಗಳಿಗೆ ಪ್ರವೇಶಿಸಬಹುದಾದ ದೂರದಲ್ಲಿ ಪ್ರಕೃತಿಯನ್ನು ಅನುಭವಿಸುವ ಅವಕಾಶವನ್ನು ಒದಗಿಸುವುದು. ವೃಕ್ಷ ಉದ್ಯಾನವನಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕಾಲ್ನಡಿಗೆಯ ಪಥ, ಪ್ರಕೃತಿ ಹಾದಿಗಳು, ಕುಡಿಯುವ ನೀರಿನ ಸೌಲಭ್ಯಗಳು, ಮಕ್ಕಳ ಆಟದ ಪ್ರದೇಶ, ಶೌಚಾಲಯಗಳು ಮುಂತಾದ ಮೂಲಭೂತ ಸಾರ್ವಜನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ.
ವೃಕ್ಷ ಉದ್ಯಾನವನ ಯೋಜನೆಯು ನಗರವಾಸಿಗಳಿಗೆ ಪ್ರವೇಶಿಸಬಹುದಾದ ದೂರದಲ್ಲಿ ನೈಸರ್ಗಿಕ ಪರಿಸರವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ನಗರಗಳು / ಪಟ್ಟಣಗಳ ಬಳಿ ವೃಕ್ಷ ಉದ್ಯಾನವನಗಳನ್ನು ಸ್ಥಾಪಿಸಲಾಗಿದೆ. ಇದರಿಂದ ನಗರವಾಸಿಗಳು ಪ್ರಕೃತಿಯನ್ನು ಅನುಭವಿಸಬಹುದು ಪ್ರಕೃತಿ ಜೊತೆಗೆ ವಾಕಿಂಗ್, ಜಾಗಿಂಗ್, ಸೈಕ್ಲಿಂಗ್, ಯೋಗ, ಧ್ಯಾನ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಹುದು. ಇದು ಅವರ ಆರೋಗ್ಯ ಮತ್ತು ಸಾಮಾನ್ಯ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಹೆಚ್ಚಿನ ಮರದ ಉದ್ಯಾನವನಗಳಲ್ಲಿ ಮಕ್ಕಳ ಆಟದ ಪ್ರದೇಶಗಳನ್ನು ಅವರ ಸಂತೋಷ ಮತ್ತು ದೈಹಿಕ ಚಟುವಟಿಕೆಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ.