ಸರ್ಕಾರದ ಆದೇಶ ಸಂಖ್ಯೆ. ಅ.ಪ.ಜೀ. 88 ಎಫ್.ಎ.ಪಿ. 2015 ದಿನಾಂಕ: 15-07-2015 ರಲ್ಲಿ ಚಿಣ್ಣರ ವನದರ್ಶನ ಎಂಬ ಹೊಸ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದ್ದು ರಾಜ್ಯದ ಎಲ್ಲ ಹೈಸ್ಕೂಲ್ ಶಾಲಾ ವಿದ್ಯಾರ್ಥಿಗಳನ್ನು ( 9ನೇ ತರಗತಿ ವಿಧ್ಯಾರ್ಥಿಗಳು) ಪರಿಸರ ಜಾಗೃತರನ್ನಾಗಿ ಮಾಡುವುದು ಮತ್ತು ಅರಣ್ಯಗಳ / ವನ್ಯಜೀವಿ ಸಂಕುಲಗಳ ಸಂರಕ್ಷಣೆ ಕುರಿತು ಅವರ ದೃಷ್ಟಿಕೋನ ಸಂವೇದನೆ ಜಾಗೃತಗೊಳಿಸಿ, ಅರಣ್ಯಗಳ ಉಳಿವು ಮತ್ತು ಅಭಿವೃದ್ಧಿಯಲ್ಲಿ ಅವರನ್ನು ಪಾಲುದಾರರನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಆದೇಶ ಸಂಖ್ಯೆ ಅ.ಪ.ಜೀ 33 ಎಫ್.ಎ.ಪಿ. 2017 ದಿನಾಂಕ: 22-02-2017ರಲ್ಲಿ ಆರು, ಏಳು ಹಾಗೂ ಎಂಟನೇ ತರಗತಿ ಪ್ರೌಡ ಶಾಲಾ ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸಲು ಸರ್ಕಾರದ ಅನುಮೋದನೆ ನೀಡಲಾಗಿದೆ.