ವಿಭಾಗದ ಬಗ್ಗೆ
ಕೇಂದ್ರ ಸರ್ಕಾರ, ರಾಷ್ಟ್ರೀಯ ಅರಣ್ಯ ಕ್ರಿಯಾ ಯೋಜನೆ ಮತ್ತು ಬಿದಿರು ಅಭಿಯಾನ ಎಂಬ ಹೊಸ ಯೋಜನೆಯನ್ನು ಶೇ. 100 ರಷ್ಟು ಅನುದಾನದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯನ್ನಾಗಿ ಪ್ರಾರಂಭಿಸಿರುತ್ತದೆ. ಈ ಯೋಜನೆಯನ್ನು ಅರಣ್ಯ ಭವನದ ಅಪರ ಪ್ರಾಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಬಿದಿರು ಮಿಷನ್) ರವರ ಪರಿವೀಕ್ಷಣೆಯಲ್ಲಿ ಇಲಾಖೆಯ ಕ್ಷೇತ್ರ ಘಟಕಗಳು ಅನುಷ್ಠಾನಗೊಳಿಸುತ್ತವೆ. ರಾಷ್ಟ್ರೀಯ ಅರಣ್ಯ ಕ್ರಿಯಾ ಯೋಜನೆ ಮತ್ತು ಬಿದಿರು ಅಭಿಯಾನ ಘಟಕದ ಜವಾಬ್ದಾರಿಗಳು ಈ ಕೆಳಗಿ ನಂತಿವೆ. • ಅರಣ್ಯ ಅಭಿವೃದ್ಧಿ ಸಂಸ್ಥೆಗಳ, ಬಿದಿರುಅಭಿಯಾನ ವಾರ್ಷಿಕ ಅನುದಾನಕ್ಕೆ ಅನುಗುಣವಾಗಿ ಕ್ರಿಯಾ ಯೋಜನೆಯನ್ನು ತಯಾರಿಸಿ ರಾಜ್ಯ ಅರಣ್ಯ ಅಭಿವೃದ್ಧಿ ಸಂಸ್ಥೆ ಹಾಗೂ ರಾಜ್ಯ ಮಟ್ಟದ ಬಿದಿರು ಚಾಲನಾ ಸಮಿತಿಯ ಅನುಮೋದನೆಯನ್ನು ಪಡೆಯುವುದು. • ಅರಣ್ಯ ಅಭಿವೃದ್ಧಿ ಸಂಸ್ಥೆ, ಬಿದಿರು ಅಭಿಯಾನದ ಪರಿವೀಕ್ಷಣೆ ಮತ್ತು ಮೇಲ್ವಿಚಾರಣೆ, • ಪ್ರಗತಿ ವರದಿಗಳನ್ನು ಲಕ್ಕಪರಿಶೋಧಕ ವರದಿಗಳನ್ನು, ಬಳಕೆ ಪ್ರಮಾಣ ಪತ್ರಗಳನ್ನು, ಭಾರತ ಸರ್ಕಾರಕ್ಕೆ ಸಲ್ಲಿಸುವುದು, • ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಸಮೀಕ್ಷೆ ಸಭೆಗಳಿಗೆ ಹಾಜರಾಗುವುದು • ರಾಜ್ಯ ಮಟ್ಟದ ಬಿದಿರು ಚಾಲನಾ ಸಮಿತಿ ಹಾಗೂ ಕಾರ್ಯಕಾರಿ ಸಮಿತಿಯ ಸಭೆಗಳನ್ನು ನಡೆಸಿ ಅವರು ಸೂಚಿಸಿದ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವುದು.