A- A A+
ಮೈಸೂರಿನ ಶ್ರೀ ಶಮಂತ್ ಗೊರೂರು ಅವರನ್ನು ೨೦೨೩ ನೇ ಸಾಲಿನ ಜನವರಿ ಮಾಹೆಯಲ್ಲಿ ಹಮ್ಮಿಕೊಂಡ ಲೋಗೋ ಸ್ಪರ್ಧೆಯ ವಿಜೇತರೆಂದು ಘೋಷಿಸಲಾಗಿದೆ. ಅಭಿನಂದನೆಗಳು! 2022-23 ನೇ ಸಾಲಿನಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರರು, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ ವೃಂದದ ಸಿಬ್ಬಂದಿಗಳ ಕಂಟಿಂಜೆಂಟ್‌ ಸ್ಥಳ ನಿಯುಕ್ತಿಗಾಗಿ ಅಧಿಸೂಚನೆ, ದಿನಾಂಕ: 21-03-2023. ಅರಣ್ಯ ಇಲಾಖೆಯಲ್ಲಿ 2022-23 ನೇ ಸಾಲಿನ ನೇರ ನೇಮಕಾತಿ ಮೂಲಕ ಆನೆ ಕಾವಾಡಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಕುರಿತು ಅಧಿಸೂಚನೆ, ವೇಳಾಪಟ್ಟಿ ಮತ್ತು ಅರ್ಜಿ ನಮೂನೆ. 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 18-03-2023 ಅರಣ್ಯ ವ್ಯವಸ್ಥಾಪನಾಧಿಕಾರಿ (Forest Settlement Officer) ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಗರಿಷ್ಠ ಎರಡು ವರ್ಷಗಳ ಅವಧಿಗೆ ನೇಮಕಾತಿಯ ಕುರಿತು
ರಾಜ್ಯ ವಲಯದ ‘ಮಗುವಿಗೊಂದು ಮರ ಶಾಲೆಗೊಂದು ವನ’ ಯೋಜನೆಯ ಉದ್ದೇಶ ಮಕ್ಕಳಲ್ಲಿ ಪರಿಸರ ಮತ್ತು ವಾತಾವರಣದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸ್ವಯಂಪ್ರೇರಿತವಾಗಿ ಗಿಡಗಳನ್ನು ನೆಡಲು ಅವರನ್ನು ಉತ್ತೇಜಿಸುವುದು. ತಮ್ಮ ಶಾಲಾ ಆವರಣದಲ್ಲಿ ಮತ್ತು ತಮ್ಮ ಮನೆಯ ಸುತ್ತಮುತ್ತಲ ಖಾಲಿ ಜಾಗದಲ್ಲಿ ನೆಡಲು ಸಸಿಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಪೂರೈಸಲಾಗುತ್ತದೆ. ಶಿಕ್ಷಣ ಇಲಾಖೆ ಸಹಯೋಗದೊಂದಿಗೆ, ರಾಜ್ಯಾದ್ಯಂತ ಪ್ರಾಥಮಿಕ ಶಾಲಾ ಹಂತದಿಂದ ಕಾಲೇಜು ವಿದ್ಯಾರ್ಥಿಗಳವರೆಗೆ ಎಲ್ಲರೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಶಾಲೆಗಳಲ್ಲಿ ಗಿಡ ನೆಡುವ ಪರಿಕಲ್ಪನೆಗೆ ಹೆಚ್ಚಿನ ಗಮನ ನೀಡುವ ಸಲುವಾಗಿ, ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ಶಾಲಾ ಅರಣ್ಯ ನಿರ್ಮಿಸುವ ಗುರಿಯೊಂದಿಗೆ “ತಾಲೂಕಿಗೊಂದು ಹಸಿರು ಶಾಲಾ ವನ” ಎನ್ನುವ ಹೊಸ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.

ಪದೇಪದೆ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ) ನೋಡಿ

 • ಮಗುವಿಗೊಂದು ಮರ ಕಾರ್ಯಕ್ರಮದ ಉದ್ದೇಶ ಏನು?

  ಪರಿಸರ ಮತ್ತು ವಾತಾವರಣದ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಮತ್ತು ಅವರು ಸ್ವಯಂಪ್ರೇರಿತವಾಗಿ ಗಿಡ ನೆಡಲು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಮನೆಗಳ ಸುತ್ತಮುತ್ತಲ ಖಾಲಿ ಜಾಗ ಮತ್ತು ಕೃಷಿ ಭೂಮಿಯಲ್ಲಿ ನೆಡಲು ಸಾರ್ವಜನಿಕರು ಮತ್ತು ರೈತರಿಗೆ ಸಸಿಗಳನ್ನು ಪೂರೈಕೆ ಮಾಡಲಾಗುತ್ತದೆ. ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ, ರಾಜ್ಯಾದ್ಯಂತದ ಪ್ರಾಥಮಿಕದಿಂದ ಹಿಡಿದು ಕಾಲೇಜಿನವರೆಗೆ ವಿವಿಧ ಹಂತಗಳ ವಿದ್ಯಾರ್ಥಿಗಳು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

 • ನಾವು ಹೆಚ್ಚು ಗಿಡಗಳನ್ನು ಯಾಕೆ ನೆಡಬೇಕು

  ಮರಗಳು ಇಂಗಾಲವನ್ನು ಹೀರಿಕೊಳ್ಳುತ್ತವೆ, ಈ ಮೂಲಕ ಕಾರ್ಬನ್ ಡೈ ಆಕ್ಸೈಡ್ ಮತ್ತು ಇತರ ಹಸಿರುಮನೆ ಅನಿಲಗಳನ್ನು ಗಾಳಿಯಿಂದ ನಿವಾರಿಸಲು ನೆರವಾಗುತ್ತವೆ, ಇದರಿಂದ ಭೂಮಿ ತಂಪಾಗುತ್ತದೆ. ಪರಿಸರ ಸಮತೋಲನವನ್ನು ಮರುಸ್ಥಾಪಿಸಲು ಮತ್ತು ಮಾಲಿನ್ಯ ರಹಿತ ಗಾಳಿ ಮತ್ತು ವಾತಾವರಣವನ್ನು ನಾಗರಿಕರಿಗೆ ಒದಗಿಸಲು ಮತ್ತು ಹಸಿರನ್ನು ಹೆಚ್ಚಿಸಲು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಡಬೇಕು.

 • ಮರಗಳು ನಮ್ಮ ಬದುಕಿನಲ್ಲಿ ಯಾಕೆ ಮುಖ್ಯ?

  ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಿಕೆ ಮತ್ತು ಮಾಲಿನ್ಯ ನಿವಾರಿಸುವುದಕ್ಕೆ ಮರಗಳು ಅತ್ಯವಶ್ಯಕವಾಗಿವೆ. ಅವು ನಮಗೆ ಆಮ್ಲಜನಕ ನೀಡುತ್ತವೆ, ಇಂಗಾಲವನ್ನು ದಾಸ್ತಾನು ಮಾಡುತ್ತವೆ, ಮಣ್ಣನ್ನು ಸ್ಥಿರಗೊಳಿಸುತ್ತವೆ ಮತ್ತು ವನ್ಯಜೀವಿಗಳಿಗೆ ಆಶ್ರಯ ಒದಗಿಸುತ್ತವೆ. ಸಲಕರಣೆಗಳು ಮತ್ತು ಆವಾಸಕ್ಕೆ ಬೇಕಾದ ಸಾಮಗ್ರಿಗಳನ್ನೂ ಕೂಡ ಮರಗಳು ಒದಗಿಸುತ್ತವೆ. ಮನುಷ್ಯರಿಗೆ ನೆರಳು ಮತ್ತು ಆಶ್ರಯ ಹಾಗೂ ಪಕ್ಷಿಗಳಿಗೆ ಆಹಾರವನ್ನು ಮರಗಳು ಒದಗಿಸುತ್ತವೆ.

 • ಮರ ನಮಗೆ ಹೇಗೆ ಸಹಾಯ ಮಾಡುತ್ತದೆ

  ಗಾಳಿಯಿಂದ ಧೂಳು ಮತ್ತು ಪರಾಗವನ್ನು ತಡೆಯಲು ಮತ್ತು ಹೊಗೆಯನ್ನು ಹೀರಲು ಮರಗಳು ನೆರವಾಗುತ್ತವೆ. ಪಕ್ಷಿ ಮತ್ತು ಇತರೆ ಪ್ರಾಣಿಗಳಿಗೆ ಆವಾಸಸ್ಥಾನವಾಗಿ ಮತ್ತು ಅವುಗಳಿಗೆ ಇಂಗಾಲದ ಆಹಾರ ಒದಗಿಸಲು ಮರಗಳು ಒಂದು ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತವೆ. ಮರಗಳು ಗಾಳಿಯಿಂದ ಇಂಗಾಲ ಡೈ ಆಕ್ಸೈಡ್ ಮತ್ತು ರಂಜಕ ಡೈ ಆಕ್ಸೈಡ್, ಇಂಗಾಲ ಮೊನಾಕ್ಸೈಡ್ನಂಥ ಸಂಭಾವ್ಯ ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳುತ್ತವೆ ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಮರಗಳು ಮಣ್ಣಿನ ಸವಕಳಿ ತಡೆಗಟ್ಟಲೂ ಸಹ ನೆರವಾಗುತ್ತವೆ. ಅಂತರ್ಜಲಕ್ಕೆ ನೀರು ಮರು ಪೂರೈಕೆಯನ್ನು ಮಾಡುತ್ತದೆ.

 • ನಾವು ಮರಗಳನ್ನು ಹೇಗೆ ಉಳಿಸಬಹುದು

  ಸೂಕ್ತ ರಕ್ಷಣೆ ಒದಗಿಸುವುದರಿಂದ ಮರಗಳಿಗೆ ಸೂಕ್ತ ರಕ್ಷಣೆ ನೀಡುವುದರಿಂದ, ಅದಕ್ಕಾಗಿ ಕಾವಲುಗಾರರನ್ನು ನೇಮಿಸಿ ರಕ್ಷಣೆ ಒದಗಿಸುವುದರಿಂದ, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರಿಂದ, ತಮ್ಮ ತಮ್ಮ ಸಳ್ಥಗಳ್ಲಲಿ ಶಾಲೆ, ಕಾಲೇಜು ಆವರಣದಲ್ಲಿ ಸಂಸ್ಥೆಯ ಭೂಮಿ, ಸಾರ್ವಜನಿಕ ಸ್ಥಳ ಇತ್ಯಾದಿ ಪ್ರದೇಶಗಳಲ್ಲಿ ಗಿಡ ನೆಟ್ಟು ಬೆಳಸುವಂತೆ ಸಾರ್ವಜನಿಕರಿಗೆ, ಶಾಲಾ- ಕಾಲೇಜು, ವಿಧ್ಯಾಥಿ೵ಗಳಿಗೆ ಅರಿವು ಮತ್ತು ಪ್ರೋತ್ಸಾಹ ನೀಡಿ ಅವರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ನಾವು ಮರಗಳನ್ನು ಉಳಿಸಿ ಬೆಳಸಬಹುದು.