ವೃತ್ತದ ಮುಖ್ಯಸ್ಥರು

ಡಾ. ಸುನೀಲ್ ಪಂವಾರ್, ಭಾ.ಅ.ಸೇ. ಭಾ.ಅ.ಸೇ.

ಅರಣ್ಯ ಸಂರಕ್ಷಣಾಧಿಕಾರಿಗಳು
ಚಿಕ್ಕಮಗಳೂರು ವೃತ್ತ, ಅರಣ್ಯ ಕ್ಯಾಂಪಸ್, ಬೋಳ ರಾಮೇಶ್ವರ ದೇವಸ್ಥಾನದ ಹತ್ತಿರ, ಕೆ.ಎಂ.ರೋಡ್, ಚಿಕ್ಕಮಗಳೂರು -577101
08262229161
ccfckm@gmail.com

ವೃತ್ತದ ಬಗ್ಗೆ

ಚಿಕ್ಕಮಗಳೂರು ವೃತ್ತದಲ್ಲಿ ಭದ್ರಾ ಹುಲಿ ಮೀಸಲು ಪ್ರದೇಶ, ಚಿಕ್ಕಮಗಳೂರು ಮತ್ತು ಕೊಪ್ಪ ಅರಣ್ಯ ವಿಭಾಗಗಳು ಮತ್ತು ಚಿಕ್ಕಮಗಳೂರು ಸಾ.ಅ. ವಿಭಾಗಗಳು ಇವೆ. ಚಿಕ್ಕಮಗಳೂರು ಮತ್ತು ಕೊಪ್ಪ ಅರಣ್ಯ ವಿಭಾಗಗಳು ಸಂಪೂರ್ಣವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿವೆ. ಭದ್ರಾ ಹುಲಿ ಮೀಸಲು ಪ್ರದೇಶದ ಪ್ರಮುಖ ಭಾಗ ಕೂಡ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ, ಇದರ ಒಂದು ಸಣ್ಣ ಭಾಗ ಗಡಿ ಭಾಗದ ಶಿವಮೊಗ್ಗ ಜಿಲ್ಲೆಯಲ್ಲಿದೆ. ಈ ವೃತ್ತದ ಒಟ್ಟು ಭೌಗೋಳಿಕ ಪ್ರದೇಶದ ವಿಸ್ತಾರ 5,586.12 ಚದರ ಕಿ.ಮೀ. ಈ ವೃತ್ತದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 2,544 ಚದರ ಕಿ.ಮೀ. ಈ ವೃತ್ತ ಸಮುದ್ರ ಮಟ್ಟದಿಂದ 600 ಮತ್ತು 1923 ಮೀ. ಎತ್ತರದ ನಡುವೆ ಇದೆ. ಕರ್ನಾಟಕ ರಾಜ್ಯದಲ್ಲಿ ಅತಿ ಎತ್ತರದ ಶಿಖರವಾಗಿರುವ ಮುಳ್ಳಯ್ಯನಗಿರಿ ಬೆಟ್ಟ ಶ್ರೇಣಿ ಚಿಕ್ಕಮಗಳೂರು ವೃತ್ತದಲ್ಲಿದೆ. ನಿತ್ಯ ಹಸಿರು, ಶೋಲಾ, ಅರೆ ನಿತ್ಯ ಹಸಿರು, ತೇವಾಂಶದ-ಎಲೆ ಉದುರುವ, ಒಣ ಎಲೆ ಉದುರುವ, ಮುಳ್ಳು ಕಾಡು ಮುಂತಾದ ವಿವಿಧ ವಿಧಗಳ ಕಾಡುಗಳನ್ನು ಈ ವೃತ್ತದಲ್ಲಿ ಕಾಣಬಹುದು. ಈ ವೃತ್ತದಲ್ಲಿ ಹುಲಿ, ಆನೆ, ಚಿರತೆ, ಕಾಡೆಮ್ಮೆ, ಸಾಂಬಾರ, ಜಿಂಕೆ, ಇಲಿ ಜಿಂಕೆ, ಕರಡಿ, ಕಾಡು ನಾಯಿ, ಹೆಬ್ಬಾವು, ಕಾಳಿಂಗ ಸರ್ಪ, ನಾಗರಹಾವು ಮುಂತಾದ ವನ್ಯಜೀವಿಗಳು ಇವೆ.

ಚಿಕ್ಕಮಗಳೂರು ವೃತ್ತದ ನಕ್ಷೆ

ಟೆಂಡರ್‌ಗಳು

ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ