A- A A+
(ಇಲ್ಲಿ ಕ್ಲಿಕ್‌ ಮಾಡಿರಿ) ಮಾನವ - ಆನೆ ಸಂಘರ್ಷ ನಿರ್ವಹಣೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ- 2024 ಅಪೆಕ್ಸ್‌ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD dated: 06/07-06-2024 ಗೆ ಪೂರಕ ಅಧಿಸೂಚನೆ [II] ದಿನಾಂಕ: 08-07-2024 ಅಪೆಕ್ಸ್‌ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD dated: 06/07-06-2024 & ಪೂರಕ ಅಧಿಸೂಚನೆ ದಿನಾಂಕ: 02-07-2024 ರನ್ವಯ ಜರಗುವ ಸಾಮಾನ್ಯ ವರ್ಗಾವಣೆಯ ತಾತ್ಕಾಲಿಕ ವೇಳಾಪಟ್ಟಿ ಮತ್ತು ಇತರೆ ಪ್ರಮುಖ ಸೂಚನೆಗಳು.- ಪರಿಷ್ಕೃತ ಪಟ್ಟಿ- ದಿನಾಂಕ: 05-07-2024 ರಂತೆ 2024-25 ನೇ ಸಾಲಿನ ಸಾಮಾನ್ಯ ವರ್ಗಾವಣೆ/ಸ್ಥಳ ನಿಯುಕ್ತಿಗಾಗಿ ಜರುಗಿದ ಸಮಾಲೋಚನೆಯಲ್ಲಿ ಜಾರಿ ಮಾಡಲಾದ ಆದೇಶ/ಹಿಂಬರಹಗಳನ್ನು ವೀಕs್ಷಿಸಲು ಇಲ್ಲಿ ಕ್ಲಿಕ್‌ ಮಾಡಿರಿ
(ಇಲ್ಲಿ ಕ್ಲಿಕ್‌ ಮಾಡಿರಿ) ಮಾನವ - ಆನೆ ಸಂಘರ್ಷ ನಿರ್ವಹಣೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ- 2024
ಕೇಂದ್ರ ಅರಣ್ಯ ಗ್ರಂಥಾಲಯವನ್ನು 24.4.1984ರಂದು ಸ್ಥಾಪನೆ ಮಾಡಲಾಯಿತು. ಇದು ಬೆಂಗಳೂರು, ಮಲ್ಲೇಶ್ವರ, 18ನೇ ಅಡ್ಡರಸ್ತೆಯ ಅರಣ್ಯಭವನದ ನೆಲಮಹಡಿಯಲ್ಲಿದೆ. ಇದು ಅರಣ್ಯ ಮತ್ತು ಸಂಬಂಧಿತ ಪರಿಕಲ್ಪನೆಗಳ ಸಂಗ್ರಹವನ್ನು ಹೊಂದಿದೆ, ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಪುಸ್ತಕಗಳು ಮತ್ತು ನಿಯತಕಾಲಿಕೆಗಳಿಗೆ ರಾಜ್ಯದಲ್ಲಿರುವ ಅತ್ಯುತ್ತಮ ಕೇಂದ್ರಗಳ ಪೈಕಿ ಒಂದಾಗಿದೆ. ಈ ಗ್ರಂಥಾಲಯದಲ್ಲಿ ಪುಸ್ತಕಗಳು, ನಿಯತಕಾಲಿಕೆಗಳ ಹಲವು ಸಂಪುಟಗಳು, ವಿರಳ ಪುಸ್ತಕಗಳು, ತಂತ್ರಜ್ಞಾನ ವರದಿಗಳು, ಕಾರ್ಯಯೋಜನೆಗಳು, ಉಪನ್ಯಾಸ ಟಿಪ್ಪಣಿಗಳು, ವೀಡಿಯೋ ಟೇಪ್‌ಗಳು, ಸಿಡಿ ರಾಮ್‌ಗಳು ಮತ್ತು ಕೈಪಿಡಿಗಳು ಮುಂತಾದವುಗಳ ಸಂಗ್ರಹ ಇದೆ. ತನ್ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ತಜ್ಞರು ಮತ್ತು ಪರಿಸರವಾದಿಗಳು, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು, ನಾಗರಿಕ ಸೇವಾ ಪರೀಕ್ಷಾರ್ಥಿಗಳು, ಹೊರಗಿನ ಸದಸ್ಯರು ಮತ್ತು ಸಂದರ್ಶಕರ ಅಗತ್ಯಗಳನ್ನು ಈ ಗ್ರಂಥಾಲಯ ಪೂರೈಸುತ್ತದೆ.

ಒಪ್ಯಾಕ್‌ (ಆನ್‌ಲೈನ್‌ ಪಬ್ಲಿಕ್‌ ಆಕ್ಸೆಸ್‌ ಕ್ಯಾಟಲಾಗ್‌)

ಆನ್‌ಲೈನ್‌ ಪಬ್ಲಿಕ್‌ ಆಕ್ಸೆಸ್‌ ಕ್ಯಾಟಲಾಗ್‌ (ಸಾಮಾನ್ಯವಾಗಿ ಒಪ್ಯಾಕ್‌ ಅಥವಾ ಸರಳವಾಗಿ ಲೈಬ್ರರಿ ಕ್ಯಾಟಲಾಗ್‌ ಎನ್ನಲಾಗುತ್ತದೆ) ಗ್ರಂಥಾಲಯ ಅಥವಾ ಗ್ರಂಥಾಲಯಗಳ ಸಮೂಹ ಹೊಂದಿರುವ ಸಾಮಗ್ರಿಗಳ ಡೇಟಾಬೇಸ್‌ ಆಗಿದೆ. ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳು ಮತ್ತು ಇತರ ಸಾಮಗ್ರಿಗಳನ್ನು ಹುಡುಕುವುದಕ್ಕಾಗಿ ಬಳಕೆದಾರರು ಗ್ರಂಥಾಲಯ ಕ್ಯಾಟಲಾಗ್‌ ಅನ್ನು ಹುಡುಕುತ್ತಾರೆ. ಸರಳವಾಗಿ ಹೇಳುವುದಾದರೆ, ಇದು ಕಾರ್ಡ್‌ ಕ್ಯಾಟಲಾಗ್‌ನ ಇಲೆಕ್ಟ್ರಾನಿಕ್‌ ಆವೃತ್ತಿ. ಒಪ್ಯಾಕ್‌ ಎನ್ನುವುದು ಗ್ರಂಥಾಲಯದಲ್ಲಿರುವ ಸಂಗ್ರಹಕ್ಕೆ ಹೆಬ್ಬಾಗಿಲು.
Click here to go to OPAC site >>

ಕೇಂದ್ರ ಅರಣ್ಯ ಗ್ರಂಥಾಲಯದಲ್ಲಿರುವ ಸಂಗ್ರಹಗಳು

ಕ್ರ.ಸಂ. ಹೆಸರು
1 ಪುಸ್ತಕಗಳು
2 ನಿಯತಕಾಲಿಕೆಗಳ ಸಂಪುಟಗಳು
3 ಕಾರ್ಯಯೋಜನೆ
4 ವರದಿಗಳು
5 ತಾಂತ್ರಿಕ ವರದಿಗಳು
6 ಅರಣ್ಯದ ಕುರಿತ ವಿರಳ ಪುಸ್ತಕಗಳು
7 ಉಪನ್ಯಾಸ ಟಿಪ್ಪಣಿಗಳು
8 ಕೈಪಿಡಿಗಳು
9 ಪದಕೋಶಗಳು
10 ಎನ್‌ಸೈಕ್ಲೊಪೀಡಿಯಾಗಳು
11 ಸಾಮಾನ್ಯ
ಕನ್ನಡ ಸಾಹಿತ್ಯ, ಕಥೆ ಪುಸ್ತಕಗಳು, ಕಾನೂನು ಪುಸ್ತಕಗಳು, ಮ್ಯಾನೇಜ್‌ಮೆಂಟ್‌ ಪುಸ್ತಕಗಳು, ಇತ್ಯಾದಿ
12 ಇ-ಸಂಗ್ರಹಗಳು
ವೀಡಿಯೋಟೇಪ್‌ಗಳು, ಸಿಡಿ-ರಾಮ್‌ಗಳು, ಡಿವಿಡಿಗಳು, ನಕ್ಷೆಗಳು ಇತ್ಯಾದಿ.

ನಿಯತಕಾಲಿಕೆಗಳು

ಕ್ರ.ಸಂ. ನಿಯತಕಾಲಿಕೆಯ ಹೆಸರು ಪ್ರಕಟಣೆಯ ಅವಧಿ
1 ಮೈ ಫಾರೆಸ್ಟ್
ಅರಣ್ಯ ಸಂರಕ್ಷಕರು, ಸಂಶೋಧನೆ, ಮೊದಲನೆ ಅಡ್ಡರಸ್ತೆ, ಅರಕೆರೆ ಮೈಕೊ ಲೇಔಟ್, ದೊರೆಸಾನಿಪಾಳ್ಯ, ಅರಣ್ಯ ಕಾಂಪಸ್‌, ಬೆಂಗಳೂರು - 560076
ತ್ರೈಮಾಸಿಕ
2 ಇಂಡಿಯನ್‌ ಫಾರೆಸ್ಟರ್‌
ಫಾರೆಸ್ಟ್‌ ರೀಸರ್ಚ್‌ ಇನ್ಸ್‌ಟಿಟ್ಯೂಟ್‌, ಪಿ.ಒ. ನ್ಯೂ ಫಾರೆಸ್ಟ್, ಡೆಹ್ರಾ ಡೂನ್‌ -248001
ಮಾಸಿಕ
3 ಸ್ಯಾಂಕ್ಚುವರಿ ಏಷ್ಯಾ
602, ಮೇಕರ್‌ ಚೇಂಬರ್ಸ್ V, ನರಿಮನ್‌ ಪಾಯಿಂಟ್‌, ಮುಂಬೈ - 400021
ದ್ವೈಮಾಸಿಕ
4 ವನ ವಿಕಾಸ
ಕರ್ನಾಟಕ ನಿವೃತ್ತ ಅರಣ್ಯ ಅಧಿಕಾರಿಗಳ ಸಂಘಟನೆ, ವನ ವಿಕಾಸ ಮಲ್ಲೇಶ್ವರಂ, 18ನೇ ಅಡ್ಡರಸ್ತೆ, ಬೆಂಗಳೂರು-03
ತ್ರೈಮಾಸಿಕ
5 ಅಡಿಕೆ ಪತ್ರಿಕೆ ಮಾಸಿಕ

ಮ್ಯಾಗಜಿನ್‌ಗಳು

ಕ್ರ.ಸಂ. ವಲಯದ ಹೆಸರು ಪ್ರಕಟಣೆಯ ಅವಧಿ
1 ರೀಡರ್ಸ್ ಡೈಜೆಸ್ಟ್ ಮಾಸಿಕ
2 ಕಾಂಪಿಟೀಶನ್‌ ಸಕ್ಸೆಸ್‌ ರಿವ್ಯೂ ಮಾಸಿಕ
3 ಸಂಜೀವಿನಿ ಮಾಸಿಕ
4 ಆರೋಗ್ಯ ಮಾಸಿಕ
5 ಗೃಹಶೋಭಾ ಮಾಸಿಕ
6 ಸುಧಾ ಸಾಪ್ತಾಹಿಕ
7 ತರಂಗ ಸಾಪ್ತಾಹಿಕ

ಗ್ರಂಥಾಲಯ ಸಂಪರ್ಕಿಸಿ

  • ಶ್ರೀಮತಿ. ಎಸ್ ಉಷಾ ಕುಮಾರಿ ಗ್ರಂಥಪಾಲಕರು
  •   ಕೇಂದ್ರ ಅರಣ್ಯ ಗ್ರಂಥಾಲಯ, ನೆಲಮಹಡಿ, ಅರಣ್ಯ ಭವನ ,18 ನೇ ಕ್ರಾಸ್ , ಮಲ್ಲೇಶ್ವರಂ - 560003
  •   kfdcfl@gmail.com
  •   080 23565734