ವಿಭಾಗದ ಬಗ್ಗೆ
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಇ.ಡಬ್ಲ್ಯೂ.ಪಿ.ಆರ್.ಟಿ. ಮತ್ತು ಸಿ.ಸಿ.) ರವರು ಮೌಲ್ಯಮಾಪನ, ಕಾರ್ಯ ಯೋಜನೆ, ಸಂಶೋಧನೆ ಮತ್ತು ತರಬೇತಿ ವಿಭಾಗಗಳ ಮುಖ್ಯಸ್ಥರಾಗಿರುತ್ತಾರೆ. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಕಾರ್ಯ ಯೋಜನೆ), ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಮತ್ತು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮಾನವ ಸಂಪನ್ಮೂಲ) ರವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಇ.ಡಬ್ಲ್ಯೂ.ಪಿ.ಆರ್.ಟಿ. ಮತ್ತು ಸಿ.ಸಿ.)ರವರ ಅಧಿನದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಕಾರ್ಯ ಯೋಜನೆ ವಿಭಾಗವು ಇಲಾಖೆಯ ಆಡಳಿತ ನಿಯಂತ್ರಣದಲ್ಲಿರುವ ಅರಣ್ಯಗಳ ಸುಸ್ಥಿರ ನಿರ್ವಹಣೆಯ ಉದ್ದೇಶದಿಂದ 10 ವರ್ಷಗಳ ಆವರ್ತಕತೆಯೊಂದಿಗೆ ಅರಣ್ಯ ವಿಭಾಗಗಳ ಕಾರ್ಯ ಯೋಜನೆಗಳನ್ನು ಸಿದ್ಧಪಡಿಸುವ ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತದೆ. ಮೀಸಲು ಅರಣ್ಯಗಳು, ಸಂರಕ್ಷಿತ ಅರಣ್ಯಗಳು, ಕರ್ನಾಟಕ ಅರಣ್ಯ ಕಾಯ್ದೆ 1963 ರ ಸೆಕ್ಷನ್ 4 ರ ಅಡಿಯಲ್ಲಿ ಅಧಿಸೂಚನೆಗೊಳಗಾದ ಪ್ರದೇಶಗಳು ಮತ್ತು ಕರ್ನಾಟಕ ಅರಣ್ಯ ಕಾಯ್ದೆ- 1963 ರ ಸೆಕ್ಷನ್ 4 ರ ಅಡಿಯಲ್ಲಿ ಅಧಿಸೂಚನೆಗಾಗಿ ಗುರುತಿಸಲಾದ ಪ್ರದೇಶಗಳು ಮತ್ತು ಅರಣ್ಯ ಪ್ರದೇಶಗಳ ಅಧಿಸೂಚನೆಯನ್ನು ಪ್ರಕ್ರಿಯೆಗೊಳಿಸುವ ಜವಾಬ್ದಾರಿಯನ್ನೂ ಸಹ ಹೊಂದಿರುತ್ತದೆ. ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ಇ.ಡಬ್ಲ್ಯೂ.ಪಿ.ಆರ್.ಟಿ. ಮತ್ತು ಸಿ.ಸಿ.)ರವರಿಗೆ ವರದಿ ಮಾಡುವ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ ಮತ್ತು ಬಳಕೆ)ರವರ ಆಡಳಿತ ನಿಯಂತ್ರಣದಲ್ಲಿ ಸಂಶೋಧನೆ ಮತ್ತು ಬಳಕೆಯ ವಿಭಾಗವು ಕಾರ್ಯ ನಿರ್ವಹಿಸುತ್ತದೆ. ಅರಣ್ಯ ಸಂಶೋಧನೆಯು ವಿಲಕ್ಷಣ ಜಾತಿ ಸಸ್ಯಗಳ ಪ್ರಯೋಗಗಳು, ಸಸ್ಯಕ್ಷೇತ್ರಗಳಿಗೆ ಸಂಬಂಧಿಸಿದಂತೆ ತಂತ್ರಾಂಶಗಳು, ಪ್ಲಸ್ ಮರಗಳ ಅಧ್ಯಯನ, ಕ್ಲೋನಲ್ ಸೀಡ್ ಆರ್ಚರ್ಡ್ ಗಳ ಸ್ಥಾಪನೆ, ಸೀಡ್ಲಿಂಗ್ ಸೀಡ್ ಆರ್ಚರ್ಡ್ ಗಳ ನಿರ್ವಹಣೆ, ಕ್ಲೋನಲ್ / ಜೀವಾಣು ಪ್ಲಾಸ್ಮ ಬ್ಯಾಂಕುಗಳ ಸ್ಥಾಪನೆ, ಮೂಲ ಪ್ರಯೋಗಗಳು, ಸಂತತಿಯ ಪ್ರಯೋಗಗಳು, ಅಂಗಾಂಶಗಳ ಮೂಲಕ ಸಸ್ಯಗಳ ಪ್ರಸರಣ, ಕ್ಷೇತ್ರ ಪ್ರಯೋಗಗಳು, ಸೀಡ್-ಸ್ಟ್ಯಾಂಡ್ಗಳ ಗುರುತಿಸುವಿಕೆ, ಬೀಜ ತಂತ್ರಜ್ಞಾನ, ಔಷಧೀಯ ಸಸ್ಯಗಳ ಕೃಷಿ, ಕೃಷಿ-ಅರಣ್ಯ ಸಂಶೋಧನೆ ಮತ್ತು ಪ್ರಚಾರ ಮತ್ತು ವಿಸ್ತರಣೆ ಮುಂತಾದ ಕಾರ್ಯಗಳನ್ನು ನಿರ್ವಹಿಸುತ್ತದೆ. ಕಾಲಕಾಲಕ್ಕೆ ಸೇವೆಯಲ್ಲಿರುವ ಅಧಿಕಾರಿಗಳಿಗೆ ಆಡಳಿತಾತ್ಮಕ ತರಬೇತಿ ನೀಡುವುದರೊಂದಿಗೆ ವಲಯ ಅರಣ್ಯ ಅಧಿಕಾರಿ (ವ.ಅ.ಅ), ಉಪ ವಲಯ ಅರಣ್ಯ ಅಧಿಕಾರಿ ಹಾಗೂ ಮೋಜಿಣದಾರರು (ಉ.ಅ.ಅ.& ಮೋ.), ಅರಣ್ಯ ರಕ್ಷಕರು ಹಾಗೂ ಅರಣ್ಯ ವೀಕ್ಷಕರ ನೀಮಕಾತಿಯನ್ನು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮಾನವ ಸಂಪನ್ಮೂಲ) ರವರ ಆಡಳಿತ ನಿಯಂತ್ರಣದಲ್ಲಿ ಕೈಗೊಳ್ಳಲಾಗುತ್ತದೆ