ವಿಭಾಗದ ಬಗ್ಗೆ
ಎ.ಪಿ.ಸಿ.ಸಿ.ಎಫ್. (ಪ್ರಚಾರ ಮತ್ತು ಐಸಿಟಿ) ಪ್ರಚಾರ ವಿಭಾಗ, ಸಾಂಖ್ಯಿಕ ವಿಭಾಗ, ಅರಣ್ಯ ಸಂಪನ್ಮೂಲ ನಿರ್ವಹಣೆ ವಿಭಾಗ (ಎಫ್.ಆರ್.ಎಂ), ಕಾನೂನು ಕೋಶ, ಕೇಂದ್ರ ಗ್ರಂಥಾಲಯ ಮತ್ತು ಐಸಿಟಿಯ ಉಸ್ತುವಾರಿ ವಹಿಸಿಕೊಂಡಿರುತ್ತಾರೆ. ಎ.ಪಿ.ಸಿ.ಸಿ.ಎಫ್. (ಪ್ರಚಾರ ಮತ್ತು ಐಸಿಟಿ) ಮಾಹಿತಿ ಹಕ್ಕು ಕಾಯ್ದೆಯ (ಆರ್ಟಿಐ) ನೋಡಲ್ ಅಧಿಕಾರಿಯಾಗಿರುತ್ತಾರೆ. ಇಲಾಖೆಯ ಪ್ರಚಾರ ವಿಭಾಗವು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. ಈ ಕಾರ್ಯಕ್ರಮಗಳು ಡಿಜಿಟಲ್ ಮಾಧ್ಯಮ, ರೇಡಿಯೋ ಚಾನೆಲ್ಗಳು, ಟಿವಿ ಚಾನೆಲ್ಗಳು, ಸಿನಿಮಾ ಚಿತ್ರಮಂದಿರಗಳು ಮತ್ತು ಸಾರ್ವಜನಿಕ ಮಳಿಗೆಗಳು ಸೇರಿದಂತೆ ವಿವಿಧ ಮಾಧ್ಯಮಗಳನ್ನು ಬಳಸುತ್ತವೆ. ಸಾಂಖ್ಯಿಕ ವಿಭಾಗವು ವಾರ್ಷಿಕ ವರದಿ, ವಾರ್ಷಿಕ ಆಡಳಿತ ವರದಿ, ಮುಖ್ಯ ಅರಣ್ಯ ಉತ್ಪನ್ನ ಮತ್ತು ಚೌಬೀನೇತರ ಉತ್ಪನ್ನ, ರಾಜ್ಯ ಸರ್ಕಾರಿ ಸೇವೆಯಲ್ಲಿ ಎಸ್.ಸಿ/ಎಸ್.ಟಿ ನೌಕರರ ಪ್ರಾತಿನಿಧ್ಯ ಕುರಿತ ಅಂಕಿಅಂಶ, ಅರಣ್ಯ ಅಂಕಿಅಂಶಗಳನ್ನು ಸಂಗ್ರಹಿಸುತ್ತದೆ. ಆರ್ಟಿಐ ಅಡಿಯಲ್ಲಿ ಫಾರ್ಮ್-1 ಮತ್ತು ಫಾರ್ಮ್-2 ವರದಿಗಳನ್ನು ಕ್ರೋಢಿಕರಿಸುವ ಕಾರ್ಯವನ್ನು ನೆರೆವೇರಿಸುತ್ತದೆ.