A- A A+
(ಇಲ್ಲಿ ಕ್ಲಿಕ್‌ ಮಾಡಿರಿ) ಮಾನವ - ಆನೆ ಸಂಘರ್ಷ ನಿರ್ವಹಣೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ- 2024 ಅಪೆಕ್ಸ್‌ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD dated: 06/07-06-2024 ಗೆ ಪೂರಕ ಅಧಿಸೂಚನೆ [II] ದಿನಾಂಕ: 08-07-2024 ಅಪೆಕ್ಸ್‌ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD dated: 06/07-06-2024 & ಪೂರಕ ಅಧಿಸೂಚನೆ ದಿನಾಂಕ: 02-07-2024 ರನ್ವಯ ಜರಗುವ ಸಾಮಾನ್ಯ ವರ್ಗಾವಣೆಯ ತಾತ್ಕಾಲಿಕ ವೇಳಾಪಟ್ಟಿ ಮತ್ತು ಇತರೆ ಪ್ರಮುಖ ಸೂಚನೆಗಳು.- ಪರಿಷ್ಕೃತ ಪಟ್ಟಿ- ದಿನಾಂಕ: 05-07-2024 ರಂತೆ 2024-25 ನೇ ಸಾಲಿನ ಸಾಮಾನ್ಯ ವರ್ಗಾವಣೆ/ಸ್ಥಳ ನಿಯುಕ್ತಿಗಾಗಿ ಜರುಗಿದ ಸಮಾಲೋಚನೆಯಲ್ಲಿ ಜಾರಿ ಮಾಡಲಾದ ಆದೇಶ/ಹಿಂಬರಹಗಳನ್ನು ವೀಕs್ಷಿಸಲು ಇಲ್ಲಿ ಕ್ಲಿಕ್‌ ಮಾಡಿರಿ
(ಇಲ್ಲಿ ಕ್ಲಿಕ್‌ ಮಾಡಿರಿ) ಮಾನವ - ಆನೆ ಸಂಘರ್ಷ ನಿರ್ವಹಣೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ- 2024
ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಮಾಡುವ ಸಂದರ್ಭದಲ್ಲಿ ದೇಶಾದ್ಯಂತ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಮುಂಚೂಣಿ ಸಿಬ್ಬಂದಿಯ ಶೌರ್ಯ ಮತ್ತು ಮಾಡಿದ ಅಪ್ರತಿಮ ತ್ಯಾಗಗಳನ್ನು ಸ್ಮರಿಸುವ ಸಲುವಾಗಿ, ಪರಿಸರ ಮತ್ತು ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಸೆಪ್ಟೆಂಬರ್ 11ನೇ ತಾರೀಕನ್ನು “ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ”ವನ್ನಾಗಿ ಘೋಷಣೆ ಮಾಡಿದೆ.
ಕೇಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಕೇಜ್ರಿ ಮರಗಳನ್ನು ಕಡಿಯುವುದನ್ನು ವಿರೋಧಿಸಿದ ಬಿಷ್ಣೋಯಿ ಸಮುದಾಯದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 363 ಮಂದಿಯನ್ನು ಸೆಪ್ಟೆಂಬರ್ 11,1730 ರಲ್ಲಿ ಜೋಧಪುರದ ಅಂದಿನ ಮಹಾರಾಜ ಅಭಯ ಸಿಂಗ್ ನ ಸೈನಿಕರು ಕೊಂದಿದ್ದರು.ಅವರು ಮಾಡಿದ ಮಹಾನ್ ತ್ಯಾಗವನ್ನು ಸ್ಮರಿಸುವ ಸಲುವಾಗಿ, ಪರಿಸರ ಮತ್ತು ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಸೆಪ್ಟೆಂಬರ್ 11ನೇ ತಾರೀಕನ್ನು ಅರಣ್ಯ ಹುತಾತ್ಮರ ದಿನವನ್ನಾಗಿ ಘೋಷಿಸಿದೆ.
ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಅಪ್ರತಿಮ ತ್ಯಾಗ ಮಾಡಿದ ಅರಣ್ಯ ಅಧಿಕಾರಿಗಳು ಮತ್ತು ಮುಂಚೂಣಿ ಅರಣ್ಯ ಸಿಬ್ಬಂದಿಯನ್ನು ಅರಣ್ಯ ಹುತಾತ್ಮರ ದಿನದಂದು ಸ್ಮರಿಸಿಕೊಳ್ಳಲಾಗುತ್ತದೆ. ವನ್ಯಜೀವಿ ಮತ್ತು ಅರಣ್ಯಗಳ ಸಂರಕ್ಷಣೆಗಾಗಿ ಅವರು ಮಾಡಿದ ಅಪ್ರತಿಮ ಪ್ರಯತ್ನಗಳು, ಶೌರ್ಯದ ಕಾರ್ಯಗಳು ಮತ್ತು ಮಹಾನ್ ತ್ಯಾಗಗಳು, ಮುಂದಿನ ಜನಾಂಗಕ್ಕೆ ಬಹಳ ಸ್ಫೂರ್ತಿದಾಯಕ ಮತ್ತು ಪ್ರೇರಕವಾಗಿವೆ.
ದಿವಂಗತ ಶ್ರೀ ಪಿ. ಶ್ರೀನಿವಾಸ್, ಭಾ.ಅ.ಸೇ., ಉಪ ಅರಣ್ಯ ಸಂರಕ್ಷಣಾಧಿಕಾರಿ, ಇವರು ಅಂಥ ಸ್ಫೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರು. ಅವರು “ಅರಣ್ಯಕ್ಕಾಗಿ ಹುಟ್ಟು, ಅರಣ್ಯಕ್ಕಾಗಿ ಬದುಕು, ಅರಣ್ಯಕ್ಕಾಗಿ ಸಾವು” ಎನ್ನುವ ಆದರ್ಶವನ್ನು ಅನುಸರಿಸಿದರು. “ಕರ್ನಾಟಕ ಅರಣ್ಯ ಇಲಾಖೆಯ ಅಭಿಮನ್ಯು” ಎಂದು ಪ್ರಸಿದ್ಧರಾಗಿದ್ದ ಅವರು, ಕುಖ್ಯಾತ ಕಾಡುಗಳ್ಳ ವೀರಪ್ಪನ್ ನಿಂದ ನವೆಂಬರ್ 10,1991 ರಂದು ದಾರುಣವಾಗಿ ಹತ್ಯೆಗೆ ಒಳಗಾದರು. ಶ್ರೀ ಪಿ. ಶ್ರೀನಿವಾಸ್ ಅವರು ದೇಶಕ್ಕಾಗಿ ಸಲ್ಲಿಸಿದ ಪ್ರಾಮಾಣಿಕ ಮತ್ತು ಶೌರ್ಯದ ಸೇವೆಗಳಿಗಾಗಿ ಭಾರತ ಸರ್ಕಾರ ಅವರಿಗೆ ಮರಣೋತ್ತರ ಕೀರ್ತಿ ಚಕ್ರ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಯಿತು.
ವೀರಪ್ಪನ್ನಿಂದ ಕೊಲೆಗೀಡಾದ ಮತ್ತೊರ್ವ ಅರಣ್ಯ ರಕ್ಷಕ, ಶ್ರೀ ಬಿ.ಸಿ. ಮೋಹನಯ್ಯ ಅವರ ಬದ್ಧತೆ ಮತ್ತು ಶೌರ್ಯವನ್ನೂ ಎಂದೆಂದಿಗೂ ಸ್ಮರಿಸಲಾಗುತ್ತದೆ. ಶಿರಸಿಯ ಮರಗಳ್ಳರಿಂದ ಕೊಲೆಗೀಡಾದ ಶ್ರೀ ಅರವಿಂದ ಹೆಗಡೆಯವರ ಅಪ್ರತಿಮ ತ್ಯಾಗವನ್ನು ಎಂದೆಂದಿಗೂ ಸ್ಮರಿಸಲಾಗುತ್ತದೆ.
ಅರಣ್ಯಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸುವ ತಮ್ಮ ಕರ್ತವ್ಯ ನಿರ್ವಹಿಸುವಾಗ ಕರ್ನಾಟಕದಲ್ಲಿ ಒಟ್ಟಾರೆ 47 ಅರಣ್ಯ ಅಧಿಕಾರಿಗಳು/ ಮುಂಚೂಣಿ ಸಿಬ್ಬಂದಿ ತಮ್ಮ ಬಲಿದಾನ ನೀಡಿದ್ದಾರೆ.
ದಿನಾಂಕ: 30/03/2018 ರಂದು ಹುಣಸೂರಿನ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ ಕ್ಷೇತ್ರ ನಿರ್ದೇಶಕರಾದ ಶ್ರೀ ಎಸ್. ಮಣಿಕಂಠನ್ ಭಾ.ಅ.ಸೇ., ಇವರು ಬೆಂಕಿ ತಡೆ ಕ್ರಮಗಳ ಪರಿಶೀಲನೆ ಮಾಡುತ್ತಿದ್ದಾಗ ಆನೆ ದಾಳಿಯಿಂದ ಆಕಸ್ಮಿಕ ಮರಣಕ್ಕೊಳಗಾದರು. ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಅವರು ಸಲ್ಲಿಸಿದ ಅಪ್ರತಿಮ ಸೇವೆಗಾಗಿ, ಭಾರತ ಸರ್ಕಾರ ಶ್ರೀ ಎಸ್. ಮಣಿಕಂಠನ್ ಅವರಿಗೆ ದಿನಾಂಕ: 12.08.2019ರ ವಿಶ್ವ ಪರಿಸರ ದಿನದಂದು ಆನೆ ಯೋಧ ಪ್ರಶಸ್ತಿ 2018 ನ್ನು ಮರಣೋತ್ತರವಾಗಿ ಪ್ರದಾನ ಮಾಡುವ ಮೂಲಕ ಗೌರವಿಸಿತು.
ಅರಣ್ಯಗಳು ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಅರಣ್ಯ ಅಧಿಕಾರಿಗಳು/ ಸಿಬ್ಬಂದಿ ತೋರಿದ ಶೌರ್ಯ, ಮಾಡಿದ ಬಲಿದಾನಗಳನ್ನು ಸ್ಮರಿಸುವ ಮತ್ತು ನೆನಪಿಟ್ಟುಕೊಳ್ಳುವ ಸಲುವಾಗಿ, ರಾಜ್ಯದ ಕೇಂದ್ರ ಕಚೇರಿ ಮತ್ತು ಪ್ರತಿ ಜಿಲ್ಲಾ ಕೇಂದ್ರ ಕಚೇರಿಗಳಲ್ಲಿ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ.
ಹುತಾತ್ಮರ ಕುಟುಂಬಗಳಿಗೆ ನೆರವು ಒದಗಿಸುವ ಸಲುವಾಗಿ, ಅರಣ್ಯ ಹುತಾತ್ಮರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗೆ ವಿವಿಧ ವೃತ್ತಗಳು ಮತ್ತು ವ್ಯಕ್ತಿಗಳು ದೇಣಿಗೆಗಳನ್ನು ನೀಡುತ್ತಾರೆ. ಸಂಗ್ರಹವಾದ ಹಣವನ್ನು ಹುತಾತ್ಮರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಕ್ಕೆ, ಅವರ ಮಕ್ಕಳ ಶಿಕ್ಷಣಕ್ಕೆ ಮತ್ತು ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದಕ್ಕೆ ಹಾಗೂ ಇತ್ಯಾದಿ ಕಾರ್ಯಗಳಿಗೆ ಬಳಸಲಾಗುತ್ತದೆ.
ಶ್ರೀ. ಕಿಶೋರ್ ಕುಮಾರ. ಸಿ ಅರಣ್ಯ ವೀಕ್ಷಕರು

ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರ ಕಛೇರಿ, ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ

ಹುತಾತ್ಮ ದಿನ 27-07-2022

ಇನ್ನಷ್ಟು ತಿಳಿಯಿರಿ
ಶ್ರೀ. ಜಿ. ಗುರುರಾಜ್ ಅರಣ್ಯ ವೀಕ್ಷಕರು

ದೊಡ್ಡಹಳ್ಳ ಗಸ್ತು, ನಾಗರಹೊಳೆ ವನ್ಯಜೀವಿ ವಲಯ

ಹುತಾತ್ಮ ದಿನ 24-12-2020

ಇನ್ನಷ್ಟು ತಿಳಿಯಿರಿ
ಎಲ್.ಎನ್. ಅಣೇಗೌಡ ಅರಣ್ಯ ವೀಕ್ಷಕರು

ಸೀಗೇಗುಡ್ಡ, ಹಾಸನ ವಲಯ, ಹಾಸನ ವಿಭಾಗ, ಹಾಸನ ವೃತ್ತ.

ಹುತಾತ್ಮ ದಿನ 23-07-2019

ಇನ್ನಷ್ಟು ತಿಳಿಯಿರಿ
ಚಿಕ್ಕೀರಯ್ಯ ದಿನಗೂಲಿ ನೌಕರ

ಸಾತನೂರು ವಲಯ, ರಾಮನಗರ ವಿಭಾಗ.

ಹುತಾತ್ಮ ದಿನ 26-05-2018

ಇನ್ನಷ್ಟು ತಿಳಿಯಿರಿ
ಎಸ್. ಮಣಿಕಂದನ್ ಅರಣ್ಯ ಸಂರಕ್ಷಣಾಧಿಕಾರಿಗಳು

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ, ಹುಣಸೂರು.

ಹುತಾತ್ಮ ದಿನ 03-03-2018

ಇನ್ನಷ್ಟು ತಿಳಿಯಿರಿ
ದೊಡ್ಡಶೆಟ್ಟಿ ಅರಣ್ಯ ವೀಕ್ಷಕರು

ದೂಂತೂರು ಗಸ್ತು, ದೊಡ್ಡ ಆಲಹಳ್ಳಿ ಶಾಖೆ, ಸಂಗಮ ವನ್ಯಜೀವಿ ವಲಯ.

ಹುತಾತ್ಮ ದಿನ 03-11-2016

ಇನ್ನಷ್ಟು ತಿಳಿಯಿರಿ
ರಾಮಯ್ಯ ಅರಣ್ಯ ವೀಕ್ಷಕರು

ತಟ್ಟೆಕೆರೆ ಎ ಗಸ್ತು ಆನೇಕಲ್ ವನ್ಯಜೀವಿ ವಲಯ.

ಹುತಾತ್ಮ ದಿನ 14-07-2015

ಇನ್ನಷ್ಟು ತಿಳಿಯಿರಿ
ನಾಗರಾಜ ಅರಣ್ಯ ವೀಕ್ಷಕರು

ಕನ್ನಂಗಿ ಗಸ್ತು, ಕನ್ನಂಗಿ ಶಾಖೆ, ಮಂಡಗದ್ದೆ ವಲಯ.

ಹುತಾತ್ಮ ದಿನ 20-04-2014

ಇನ್ನಷ್ಟು ತಿಳಿಯಿರಿ
ಬಿ. ಪ್ರಭಾಕರ್ ಉಪ ವಲಯ ಅರಣ್ಯಾಧಿಕಾರಿಗಳು

ಪೊರ್ಕಳ ಶಾಖೆ ಉಪ್ಪಿನಂಗಡಿ ವಲಯ ಮಂಗಳೂರು ವಿಭಾಗ ಮಂಗಳೂರು ವೃತ್ತ.

ಹುತಾತ್ಮ ದಿನ 09-02-2011

ಇನ್ನಷ್ಟು ತಿಳಿಯಿರಿ
ಹೆಚ್.ಸಿ ನಾರಾಯಣ್ ಅರಣ್ಯ ವೀಕ್ಷಕರು

ಆಯನೂರು ವಲಯ, ಶಿವಮೊಗ್ಗ

ಹುತಾತ್ಮ ದಿನ 07-04-2007

ಇನ್ನಷ್ಟು ತಿಳಿಯಿರಿ
ಕಾಳೇಗೌಡ ಅರಣ್ಯ ರಕ್ಷಕರು

ಚಿಕ್ಕಮಗಳೂರು

ಹುತಾತ್ಮ ದಿನ 21-08-2002

ಇನ್ನಷ್ಟು ತಿಳಿಯಿರಿ
ವೀರಭದ್ರಪ್ಪ ಅರಣ್ಯ ವೀಕ್ಷಕರು

ಶಿವಮೊಗ್ಗ ವನ್ಯಜೀವಿ ವಿಭಾಗ

ಹುತಾತ್ಮ ದಿನ 26-10-1999

ಇನ್ನಷ್ಟು ತಿಳಿಯಿರಿ
ಎಂ.ವಿ ರಂಗನಗೌಡರ್ ವಲಯ ಅರಣ್ಯಾಧಿಕಾರಿಗಳು

ಬೆಳಗಾವಿ

ಹುತಾತ್ಮ ದಿನ 20-03-1999

ಇನ್ನಷ್ಟು ತಿಳಿಯಿರಿ
ಪಿ.ಎ ಪೊನ್ನಪ್ಪ ಅರಣ್ಯ ರಕ್ಷಕರು

ಹುನಸೂರು ವನ್ಯಜೀವಿ

ಹುತಾತ್ಮ ದಿನ 23-12-1997

ಇನ್ನಷ್ಟು ತಿಳಿಯಿರಿ
ಎಲ್. ಲೋಕೇಶ್ ಅರಣ್ಯ ರಕ್ಷಕರು

ಸಾಗರ

ಹುತಾತ್ಮ ದಿನ 12-10-1997

ಇನ್ನಷ್ಟು ತಿಳಿಯಿರಿ
ಕೆ.ಎಸ್ ವಿಠ್ಠಲ್ ಅರಣ್ಯ ರಕ್ಷಕರು

ವಿರಾಜಪೇಟೆ

ಹುತಾತ್ಮ ದಿನ 14-05-1997

ಇನ್ನಷ್ಟು ತಿಳಿಯಿರಿ
ಪಿ. ಶ್ರೀನಿವಾಸ್ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು

ಚಾಮಾರಾಜನಗರ

ಹುತಾತ್ಮ ದಿನ 10-11-1991

ಇನ್ನಷ್ಟು ತಿಳಿಯಿರಿ
ಬಿ.ಸಿ ಮೋಹನಯ್ಯ ಅರಣ್ಯ ರಕ್ಷಕರು

ಕೊಳ್ಳೇಗಾಲ

ಹುತಾತ್ಮ ದಿನ 04-08-1989

ಇನ್ನಷ್ಟು ತಿಳಿಯಿರಿ
ಅರವಿಂದ್ ಡಿ ಹೆಗ್ಡೆ ವಲಯ ಅರಣ್ಯಾಧಿಕಾರಿಗಳು

ಸಿರಸಿ

ಹುತಾತ್ಮ ದಿನ 19-04-1988

ಇನ್ನಷ್ಟು ತಿಳಿಯಿರಿ
ಕೆ.ಎಂ ಪೃತುಕುಮಾರ್ ಅರಣ್ಯ ವೀಕ್ಷಕರು

ತಿತಿಮತಿ ಸಂಶೋಧನಾ ವಲಯ, ತಿತಿಮತಿ.

ಹುತಾತ್ಮ ದಿನ 27-08-1983

ಇನ್ನಷ್ಟು ತಿಳಿಯಿರಿ
ಜಿ.ಐ ಹಂಪಯ್ಯ ಅರಣ್ಯ ರಕ್ಷಕರು

ಬೆಳಗಾವಿ

ಹುತಾತ್ಮ ದಿನ 30-08-1982

ಇನ್ನಷ್ಟು ತಿಳಿಯಿರಿ
ಹುಚ್ಚ ಶೆಟ್ಟಿ ಅರಣ್ಯ ರಕ್ಷಕರು

ಚಾಮರಾಜನಗರ

ಹುತಾತ್ಮ ದಿನ 09-11-1976

ಇನ್ನಷ್ಟು ತಿಳಿಯಿರಿ
ಅಬ್ದುಲ್ ಅಹಮದ್ ಉಪ ವಲಯ ಅರಣ್ಯಾಧಿಕಾರಿಗಳು

ಕೊಳ್ಳೆಗಾಲ

ಹುತಾತ್ಮ ದಿನ 19-01-1971

ಇನ್ನಷ್ಟು ತಿಳಿಯಿರಿ
ಜೋಗೇಗೌಡ ಉಪ ವಲಯ ಅರಣ್ಯಾಧಿಕಾರಿಗಳು

ಚಾಮರಾಜನಗರ

ಹುತಾತ್ಮ ದಿನ 29-12-1966

ಇನ್ನಷ್ಟು ತಿಳಿಯಿರಿ
ಶ್ರೀ. ಪುಟ್ಟರಾಜು ವಿ. ಅರಣ್ಯ ರಕ್ಷಕರು

ಆಲ್ದೂರು ವಲಯ, ಚಿಕ್ಕಮಗಳೂರು ವಿಭಾಗ

ಹುತಾತ್ಮ ದಿನ 07-05-2021

ಇನ್ನಷ್ಟು ತಿಳಿಯಿರಿ
ಶ್ರೀ. ಶಿವನಂನಜಯ್ಯ ದಿನಗೂಲಿ ನೌಕರ

ಶಿಂಷಾ ಗಸ್ತು, ಶಿಂಷಾ ಶಾಖೆ, ಹಲಗೂರು ವನ್ಯಜೀವಿ ವಲಯ, ಕಾವೇರಿ ವನ್ಯಜೀವಿ ವಿಭಾಗ

ಹುತಾತ್ಮ ದಿನ 06-08-2020

ಇನ್ನಷ್ಟು ತಿಳಿಯಿರಿ
ಹಲಗ ಅರಣ್ಯ ವೀಕ್ಷಕರು

ನಾಗಮಲೈ ಕಳ್ಳಬೇಟೆ ತಡೆ ಶಿಬಿರದ ಇಂಡಿಗನತ್ತ ಗಸ್ತು, ಗೋಪಿನಾಥಂ ಶಾಖೆ, ಗೋಪಿನಾಥಂ ವನ್ಯಜೀವಿ ವಲಯ.

ಹುತಾತ್ಮ ದಿನ 21-05-2019

ಇನ್ನಷ್ಟು ತಿಳಿಯಿರಿ
ಮಹದೇವ ಅರಣ್ಯ ವೀಕ್ಷಕರು

ಸೊಲಬ ಕಳ್ಳಬೇಟೆ ತಡೆ ಶಿಬಿರ, ಬ್ಯಾಡರಹಳ್ಳಿ ಗಸ್ತು, ಮುತ್ತತ್ತಿ ಶಾಖೆ, ಹಲಗೂರು ವನ್ಯಜೀವಿ ವಲಯ.

ಹುತಾತ್ಮ ದಿನ 26-04-2018

ಇನ್ನಷ್ಟು ತಿಳಿಯಿರಿ
ಮುರುಗೆಪ್ಪ ತಮ್ಮನಗೊಳ್ ಅರಣ್ಯ ರಕ್ಷಕರು

ಕಲ್ಕೆರೆ ವನ್ಯಜೀವಿ ವಲಯ, ಬಂಡಿಪುರ ಹುಲಿ ಸಂರಕ್ಷಣೆ ವಿಭಾಗ.

ಹುತಾತ್ಮ ದಿನ 18-02-2017

ಇನ್ನಷ್ಟು ತಿಳಿಯಿರಿ
ಪಂಚಲಿಂಗಯ್ಯ ಅರಣ್ಯ ವೀಕ್ಷಕರು

ರಾಮನಗರ ವಿಭಾಗ

ಹುತಾತ್ಮ ದಿನ 09-09-2016

ಇನ್ನಷ್ಟು ತಿಳಿಯಿರಿ
ಎಂ.ಡಿ ಶಿರಹಟ್ಟಿ ಅರಣ್ಯ ರಕ್ಷಕರು

ಗದಗ

ಹುತಾತ್ಮ ದಿನ 23-01-2015

ಇನ್ನಷ್ಟು ತಿಳಿಯಿರಿ
ದಬ್ಬಣ್ಣ ಅರಣ್ಯ ವೀಕ್ಷಕರು

ತಮ್ಮನಾಯಕನಹಳ್ಳಿ, ಆನೇಕಲ್ ವನ್ಯಜೀವಿ ವಲಯ.

ಹುತಾತ್ಮ ದಿನ 09-08-2012

ಇನ್ನಷ್ಟು ತಿಳಿಯಿರಿ
ಮಂಜುನಾಥಪ್ಪ ಅರಣ್ಯ ರಕ್ಷಕರು

ಭದ್ರಾವತಿ ವಿಭಾಗ

ಹುತಾತ್ಮ ದಿನ 07-06-2010

ಇನ್ನಷ್ಟು ತಿಳಿಯಿರಿ
ರಾಜಶೇಖರಪ್ಪ ಅರಣ್ಯ ರಕ್ಷಕರು

ತುಮಕೂರು

ಹುತಾತ್ಮ ದಿನ 14-03-2006

ಇನ್ನಷ್ಟು ತಿಳಿಯಿರಿ
ಅಣ್ಣಪ್ಪ ಮಲ್ಲಪ್ಪ ಮುಗಳಖೋಡ ಅರಣ್ಯ ರಕ್ಷಕರು

ಹಳಿಯಾಳ

ಹುತಾತ್ಮ ದಿನ 26-07-2002

ಇನ್ನಷ್ಟು ತಿಳಿಯಿರಿ
ಶ್ರೀನಿವಾಸಯ್ಯ ಅರಣ್ಯ ವೀಕ್ಷಕರು

ತುಮಕೂರು

ಹುತಾತ್ಮ ದಿನ 24-07-1999

ಇನ್ನಷ್ಟು ತಿಳಿಯಿರಿ
ಜಿ.ಕೆ ರಾಮ ಅರಣ್ಯ ವೀಕ್ಷಕರು

ಹುಣಸೂರು ವಣ್ಯಜೀವಿ

ಹುತಾತ್ಮ ದಿನ 30-07-1998

ಇನ್ನಷ್ಟು ತಿಳಿಯಿರಿ
ವೈ ಹನುಮಂತಪ್ಪ ಉಪ ವಲಯ ಅರಣ್ಯಾಧಿಕಾರಿಗಳು

ಸಾಗರ

ಹುತಾತ್ಮ ದಿನ 28-11-1997

ಇನ್ನಷ್ಟು ತಿಳಿಯಿರಿ
ಎಸ್.ಟಿ ಗಣೇಶ್ ದಿನಗೂಲಿ ನೌಕರ

ಸಾಗರ

ಹುತಾತ್ಮ ದಿನ 12-10-1997

ಇನ್ನಷ್ಟು ತಿಳಿಯಿರಿ
ಮಲ್ಲಪ್ಪ ರಾಜಪ್ಪ ಪೂಜಾರ ಅರಣ್ಯ ರಕ್ಷಕರು

ಧಾರವಾಡ

ಹುತಾತ್ಮ ದಿನ 14-06-1995

ಇನ್ನಷ್ಟು ತಿಳಿಯಿರಿ
ಹೆಚ್. ಬಸವಣ್ಣೆ ಅರಣ್ಯ ರಕ್ಷಕರು

ಸಾಗರ

ಹುತಾತ್ಮ ದಿನ 06-11-1989

ಇನ್ನಷ್ಟು ತಿಳಿಯಿರಿ
ಬಿ.ಡಿ ಖಾನಾಪುರಿ ಉಪ ವಲಯ ಅರಣ್ಯಾಧಿಕಾರಿಗಳು

ಬೆಳಗಾವಿ

ಹುತಾತ್ಮ ದಿನ 19-04-1988

ಇನ್ನಷ್ಟು ತಿಳಿಯಿರಿ
ಹೆಚ್.ಎ. ಹನುಮಂತಪ್ಪ ವಲಯ ಅರಣ್ಯಾಧಿಕಾರಿಗಳು

ಚಿಕ್ಕಮಗಳೂರು

ಹುತಾತ್ಮ ದಿನ 26-11-1985

ಇನ್ನಷ್ಟು ತಿಳಿಯಿರಿ
ಎನ್.ಎ ಬಸರಿಕಟ್ಟಿ ಅರಣ್ಯ ರಕ್ಷಕರು

ಬೆಳಗಾವಿ

ಹುತಾತ್ಮ ದಿನ 25-03-1983

ಇನ್ನಷ್ಟು ತಿಳಿಯಿರಿ
ಕೆ.ಎನ್ ರಂಗರಾಜ ಅರಸ್ ವಲಯ ಅರಣ್ಯಾಧಿಕಾರಿಗಳು

ಹಾಸನ

ಹುತಾತ್ಮ ದಿನ 05-07-1978

ಇನ್ನಷ್ಟು ತಿಳಿಯಿರಿ
ಅಹಮದ್ ಖಾನ್ ಅರಣ್ಯ ರಕ್ಷಕರು

ಕೊಳ್ಳೆಗಾಲ

ಹುತಾತ್ಮ ದಿನ 30-01-1971

ಇನ್ನಷ್ಟು ತಿಳಿಯಿರಿ
ಮಾದಾನಾಯ್ಕ ಅರಣ್ಯ ರಕ್ಷಕರು

ಚಾಮರಾಜನಗರ

ಹುತಾತ್ಮ ದಿನ 29-12-1966

ಇನ್ನಷ್ಟು ತಿಳಿಯಿರಿ
ಶಂಕರ್ ಮೂಡಲಗಿ ಅರಣ್ಯ ರಕ್ಷಕರು

ಬೆಳಗಾವಿ

ಹುತಾತ್ಮ ದಿನ 13-08-1966

ಇನ್ನಷ್ಟು ತಿಳಿಯಿರಿ