ಅರಣ್ಯ ಸಂರಕ್ಷಣಾ ಘಟಕವು ಮುಖ್ಯವಾಗಿ ನಿಯಂತ್ರಣ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂದ ಯಾವುದೇ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವುದಿಲ್ಲ. ಅರಣ್ಯ ಭೂಮಿಗಳನ್ನು ಅರಣ್ಯೇತರ ಉದ್ದೇಶಗಳ ಬಳಕೆಗಾಗಿ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಪರಿಶೀಲನೆ ಮಾಡುವುದು ಮತ್ತು ಒಂದು ವೇಳೆ ಶಿಫಾರಸಿಗೆ ಸೂಕ್ತ ಎಂದು ಪರಿಗಣಿಸಿದಲ್ಲಿ, ಅನುಮೋದನೆಗಾಗಿ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಇದರ ಪ್ರಮುಖ ಕಾರ್ಯವಾಗಿದೆ. ಅರಣ್ಯ ಭೂಮಿ ಮಂಜೂರಾತಿ ಸಮಯದಲ್ಲಿ ನಿಗದಿಪಡಿಸಲಾಗಿರುವ ಷರತ್ತುಗಳನ್ನು ಬಳಕೆದಾರರು ಅನುಷ್ಠಾನಗೊಳಿಸುತ್ತಿವೆಯೇ ಎನ್ನುವುದರ ಮೇಲ್ವಿಚಾರಣೆ ನಡೆಸುವುದು ಕೂಡ ಇದರ ಜವಾಬ್ದಾರಿಯಾಗಿದೆ.