ವಿಭಾಗದ ಮುಖ್ಯಸ್ಥರು

ಶ್ರೀ ಮರಿಯ ಕ್ರಿಸ್ತು ರಾಜ ಡಿ. ಭಾಅಸೇ

ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು
ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು, ಕಾಳಿ ಹುಲಿ ಸಂರಕ್ಷಿತ ಪ್ರದೇಶ ದಾಂಡೇಲಿ, ದಾಂಡೇಲಿ ತಾಲ್ಲೂಕು, ಜಿಲ್ಲೆ ಉತ್ತರ ಕನ್ನಡ-581325
08284231585
directordatr@gmail.com

ವಿಭಾಗದ ಬಗ್ಗೆ

ಈ ಹಿಂದೆ ದಾಂಡೇಲಿ-ಅಣಶಿ ಹುಲಿ ಮೀಸಲು ಪ್ರದೇಶ ಎಂದು ಗುರುತಿಸಲ್ಪಟ್ಟಿದ್ದ ಕಾಳಿ ಹುಲಿ ಮೀಸಲು ಪ್ರದೇಶ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕೇಂದ್ರ ಭಾಗದಲ್ಲಿದೆ. ಇದು ಹಳಿಯಾಳ ಮತ್ತು ಕಾರವಾರ ಅರಣ್ಯ ವಿಭಾಗಗಳ ನಡುವೆ ಇದೆ, ಮತ್ತು ಹಳಿಯಾಳ, ಕಾರವಾರ ಮತ್ತು ಜೋಯಿಡಾ ತಾಲೂಕುಗಳ ಭಾಗಗಳನ್ನು ಒಳಗೊಳ್ಳುತ್ತದೆ. ಹುಲಿ ಮೀಸಲು ಪ್ರದೇಶ ಎರಡು ಪ್ರಮುಖ ಸಂರಕ್ಷಿತ ಪ್ರದೇಶಗಳಾದ ದಾಂಡೇಲಿ ವನ್ಯಜೀವಿ ಅಭಯಾರಣ್ಯ (475.018 ಚ.ಕಿ.ಮೀ.) ಮತ್ತು ಅಣಶಿ ರಾಷ್ಟ್ರೀಯ ಉದ್ಯಾನ (339.866 ಚ.ಕಿ.ಮೀ.) ವನ್ನು ಒಳಗೊಂಡಿದೆ. ಈ ಎರಡು ಸಂರಕ್ಷಿತ ಪ್ರದೇಶಗಳು ಒಂದಕ್ಕೊಂದು ಸಂಪರ್ಕ ಹೊಂದಿವೆ ಮತ್ತು ಪಶ್ಚಿಮ ಘಟ್ಟಗಳ ಜೈವಿಕ ಸೂಕ್ಷ್ಮ ಪ್ರದೇಶದಲ್ಲಿ ಸಂರಕ್ಷಿತ ಪ್ರದೇಶದ ಒಂದೇ ಕಾಲುಹಾದಿ ನಿರ್ಮಿಸುತ್ತವೆ. ಈ ಎರಡು ಸಂರಕ್ಷಿತ ಪ್ರದೇಶಗಳನ್ನು 2007ರಲ್ಲಿ ದಾಂಡೇಲಿ- ಅಣಶಿ ಹುಲಿ ಮೀಸಲು ಪ್ರದೇಶ (ದಾ.ಅಂ.ಹು.ಮೀ.) ಇದರಡಿ ಆಡಳಿತಾತ್ಮಕವಾಗಿ ಏಕೀಕೃತಗೊಳಿಸಲಾಗಿದೆ. ಹುಲಿ ಮೀಸಲು ಪ್ರದೇಶಕ್ಕೆ ಅರಣ್ಯ ಸಂರಕ್ಷಣಾಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ. ಇಲ್ಲಿ ದಾಂಡೇಲಿ ಮತ್ತು ಅಣಶಿ ವನ್ಯಜೀವಿ ಎನ್ನುವ ಎರಡು ಉಪ ವಿಭಾಗಗಳಿವೆ, ಮತ್ತು ಕುಳಗಿ, ಫಣಸೋಲಿ, ಗುಂದ, ಕುಂಬಾರವಾಡಾ, ಅಣಶಿ ಮತ್ತು ಕ್ಯಾಸಲ್‌ರಾಕ್‌ ವನ್ಯಜೀವಿ ಎನ್ನುವ ಆರು ವಲಯಗಳನ್ನು ಹೊಂದಿದೆ. ಈ ಹುಲಿ ಮೀಸಲು ಪ್ರದೇಶದಲ್ಲಿ 31 ಸೆಕ್ಷನ್‌ಗಳು ಮತ್ತು 85 ಬೀಟ್‌ಗಳಿವೆ. ಹುಲಿ ಮೀಸಲು ಪ್ರದೇಶದ ಅರಣ್ಯಗಳು ಮೂಲತಃ ತೇವಾಂಶ ಭರಿತ ಎಲೆಯುದುರುವ ಮತ್ತು ಅರೆ ನಿತ್ಯಹಸಿರು ಕಾಡುಗಳಾಗಿವೆ, ಪಶ್ಚಿಮದ ತುತ್ತತುದಿ ಮತ್ತು ಆಳದ ಕಣಿವೆಗಳಲ್ಲಿ ಅಲ್ಲಲ್ಲಿ ಅದ್ಭುತ ನಿತ್ಯ ಹಸಿರು ಅರಣ್ಯಗಳು ಕಂಡುಬರುತ್ತವೆ. ಹುಲಿ ಮೀಸಲು ಪ್ರದೇಶದಲ್ಲಿ ಕಂಡುಬರುವ ಪ್ರಾಣಿಗಳಲ್ಲಿ ಹುಲಿ, ಚಿರತೆ, ಆನೆ, ಕಾಡುಕೋಣ, ಕಾಡು ನಾಯಿ ಸಾಂಬಾರ, ಚುಕ್ಕೆ ಜಿಂಕೆ, ಜೇನು ಕರಡಿ, ಕಾಡು ಹಂದಿ, ಹನುಮಾನ್‌ ಲಂಗೂರ್‌, ಬಾನೆಟ್‌ ಕೋತಿ, ವಿವಿಧ ಪ್ರಭೇದದ ಸರೀಸೃಪಗಳು ಮತ್ತು ಹಕ್ಕಿಗಳು ಕಂಡುಬರುತ್ತವೆ.

ಕಾಳಿ ಹುಲಿ ಮೀಸಲು ವಿಭಾಗದ ನಕ್ಷೆ

--%>

ಉಪ ವಿಭಾಗಗಳು