ವಿಭಾಗದ ಮುಖ್ಯಸ್ಥರು

ಶ್ರೀ. ಬಾಲಕೃಷ್ಣ.ಎಸ್

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಾವೇರಿ, ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರದ ಎದುರು, ಕರ್ಜಗಿ ರಸ್ತೆ ಹಾವೇರಿ. 581110
08375298936
dcfhaveri@gmail.com

ವಿಭಾಗದ ಬಗ್ಗೆ

ಹಾವೇರಿ ಅರಣ್ಯ ವಿಭಾಗ ಕರ್ನಾಟಕ ರಾಜ್ಯದ ಮಧ್ಯ ವಲಯದಲ್ಲಿದೆ. ಹಾವೇರಿ ಅರಣ್ಯ ವಿಭಾಗದ ಗಡಿಗಳು ಹಾವೇರಿ ಜಿಲ್ಲೆಯ ಗಡಿಗಳೇ ಆಗಿವೆ. ವಿಭಾಗದ ದಾಖಲಿಸಿಕೊಂಡಿರುವ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 43,280 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ ವಿಸ್ತಾರದ (4,823 ಚ.ಕಿ.ಮೀ) ಸುಮಾರು 8.97 ರಷ್ಟಿದೆ. ಈ ವಿಭಾಗದಲ್ಲಿ ಹಾವೇರಿ, ಹಾನಗಲ್‌ ಮತ್ತು ರಾಣೇಬೆನ್ನೂರು ಈ ಮೂರು ಉಪ ವಿಭಾಗಗಳಿವೆ, ಮತ್ತು ಬ್ಯಾಡಗಿ, ಧುನ್ಶಿ, ಹಾನಗಲ್‌, ಹಾವೇರಿ ಹಿರೇಕೆರೂರು, ರಾಣೆಬೆನ್ನೂರು, ರಾಣೆಬೆನ್ನೂರು (ವನ್ಯಜೀವಿ) ಈ ಏಳು ವಲಯಗಳಿವೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಅರಣ್ಯ ವಿಭಾಗದ ಜೊತೆ ಗಡಿ ಹೊಂದಿರುವ ಹಾವೇರಿ ವಿಭಾಗದ ಪಶ್ಚಿಮ ಭಾಗದಲ್ಲಿ ಮುಖ್ಯವಾಗಿ ತೇಗದ ಮರಗಳಿರುವ ಒಣ ಎಲೆಯುದುರುವ ವಿಧದ ಕಾಡುಗಳಿವೆ. ಈ ಅರಣ್ಯಗಳು ಸಾಕಷ್ಟು ಉತ್ತಮ ಪರಿಸ್ಥಿತಿಯಲ್ಲಿವೆ. ಈ ಅರಣ್ಯಗಳನ್ನು ಹೊರತುಪಡಿಸಿ, ವಿಭಾಗದಲ್ಲಿರುವ ಉಳಿದ ಬಹುತೇಕ ಅರಣ್ಯಗಳು ಮುಳ್ಳುಕಂಟಿ ಪ್ರಭೇದಗಳೊಂದಿಗೆ ಸಾಕಷ್ಟು ಅವನತಿ ಹೊಂದಿವೆ. ಇಲ್ಲಿ ರಾಣೆಬೆನ್ನೂರು ತಾಲೂಕಿನ ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯವಿದೆ. ಇದನ್ನು ಕೃಷ್ಣ ಮೃಗಗಳ ಸಂರಕ್ಷಣೆಗಾಗಿ 1974ರಲ್ಲಿ ಸ್ಥಾಪನೆ ಮಾಡಲಾಯಿತು. ಇದು 119 ಹೆಕ್ಟೇರ್‌ ಪ್ರದೇಶವನ್ನು ವ್ಯಾಪಿಸಿದೆ.

ಹಾವೇರಿ ವಿಭಾಗದ ನಕ್ಷೆ

--%>

ಉಪ ವಿಭಾಗಗಳು