ವಿಭಾಗದ ಬಗ್ಗೆ
ಅಪ್ರಮುಅಸ(ಪ್ರಚಾರ ಮತ್ತು ಐಸಿಟಿ) ಇವರು ಅರಣ್ಯ ಇಲಾಖೆಯ ಪ್ರಚಾರ ಕಾರ್ಯಗಳ ಉಸ್ತುವಾರಿ ವಹಿಸುತ್ತಾರೆ ಹಾಗೂ ಇವರು ಅಂಕಿ ಅಂಶಗಳ ಶಾಖೆ ಮತ್ತು ಕೇಂದ್ರ ಗ್ರಂಥಾಲಯಕ್ಕೆ ಕೂಡ ಉಸ್ತುವಾರಿ ವಹಿಸುತ್ತಾರೆ. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ಇಲಾಖಾ ಚಟುವಟಿಕೆಗಳ ಪ್ರಚಾರವನ್ನು ಕೈಗೊಳ್ಳಲಾಗುತ್ತದೆ. ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ರೇಡಿಯೋ ಚಾನಲ್ಗಳು, ಟಿವಿ ಚಾನಲ್ಗಳು, ಸಿನಿಮಾ ಥಿಯೇಟರ್ಗಳು ಮತ್ತು ಸಾರ್ವಜನಿಕ ಔಟ್ ಲೆಟ್ ಗಳಂತಹ ವಿವಿಧ ಸಾಮಾಜಿಕ ಮಾಧ್ಯಮ, ಹ್ಯಾಂಡಲ್ಗಳ ಮೂಲಕ ಮಾಹಿತಿ ಮತ್ತು ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತದೆ.