ಚಕ್ರಾದ ಚಕ್ರ ತರಬೇತಿ ಕೇಂದ್ರ ಹೊಸನಗರ ತಾಲೂಕಿನಿಂದ 25 ಕಿ.ಮೀ. ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 93 ಕಿ.ಮೀ. ದೂರದಲ್ಲಿದೆ. 2017ರಲ್ಲಿ ಇದನ್ನು ಸ್ಥಾಪನೆ ಮಾಡಲಾಯಿತು ಮತ್ತು ಪಶ್ಚಿಮ ಘಟ್ಟಗಳಲ್ಲಿ ಇರುವ ಈ ಕೇಂದ್ರ ನಿತ್ಯಹಸಿರು ಅರಣ್ಯಗಳಿಂದ ಆವೃತವಾಗಿದೆ. ಕಟ್ಟಡಗಳ ಮಾಲೀಕತ್ವ ಮೂಲತಃ ಕೆ.ಪಿ.ಸಿ.ಎಲ್ ಬಳಿಯಿತ್ತು ಮತ್ತು ಕೆಲವು ವರ್ಷಗಳ ಹಿಂದೆ ಇದನ್ನು ತರಬೇತಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು. ತರಬೇತಿ ಕೇಂದ್ರದ ಒಟ್ಟು ವಿಸ್ತಾರ 126 ಎಕರೆಗಳು ಮತ್ತು ಇದು ನಗರ ವಲಯದ ಸಾಗರ ವಿಭಾಗದಡಿ ಬರುತ್ತದೆ. ಕೇಂದ್ರದಲ್ಲಿರುವ ಸೌಲಭ್ಯಗಳಲ್ಲಿ ಆಡಳಿತ ಬ್ಲಾಕ್ ಮತ್ತು 55 ಪರೀಕ್ಷಾರ್ಥಿಗಳ ಸಾಮರ್ಥ್ಯದ ಒಂದು ತರಗತಿ ಕೋಣೆ ಮತ್ತು ಒಂದು ಕಂಪ್ಯೂಟರ್ ಲ್ಯಾಬ್, 6 ಕೋಣೆಗಳ ಪರೀಕ್ಷಾರ್ಥಿಗಳ ಹಾಸ್ಟೆಲ್, 2 ಡಾರ್ಮಿಟರಿಗಳು, ವಿಶಾಲವಾದ ಮೀಟಿಂಗ್ ಹಾಲ್, ಟಿ.ವಿ. ಹಾಲ್, ಅಡುಗೆ ಮನೆ, ಊಟದ ಹಾಲ್ ಮತ್ತು ಮೆಸ್, ಒಳಾಂಗಣ ಹಾಲ್ ಮತ್ತು ಬಹು ಉದ್ದೇಶದ ಹಾಲ್, ಆಟದ ಮೈದಾನ ಮತ್ತು ಸಿಬ್ಬಂದಿ ವಸತಿಗೃಹಗಳು ಸೇರಿವೆ. ಈ ತರಬೇತಿ ಸಂಸ್ಥೆಯನ್ನು ಪ್ರ.ಮು.ಅ.ಸಂ. (ಅ.ಪ.ಮು.), ಕರ್ನಾಟಕ ಇವರು 07.05.2018 ರಂದು ಅಧಿಕೃತವಾಗಿ ಉದ್ಘಾಟನೆ ಮಾಡಿದರು.ಈವರೆಗೆ, 49 ಪರೀಕ್ಷಾರ್ಥಿಗಳ ಅರಣ್ಯ ರಕ್ಷಕರ 1 ಬ್ಯಾಚ್ ಗೆ 01.03.2018 ರಿಂದ 30.11.2018 ರವರೆಗೆ ಇಲ್ಲಿ ತರಬೇತಿ ನೀಡಲಾಗಿದೆ. ಜೂನ್ 10, 2019 ರಿಂದ 62 ಪರೀಕ್ಷಾರ್ಥಿಗಳ ಅರಣ್ಯ ರಕ್ಷಕರ 2ನೇ ಬ್ಯಾಚ್ ಗೆ ನೇಮಕಾತಿ ತರಬೇತಿ ನೀಡಲಾಗುತ್ತಿದೆ. ಈ ತರಬೇತಿ ಕೇಂದ್ರಕ್ಕೆ ಸಹಾಯಕ ಅರಣ್ಯ ಸಂರಕ್ಷಕರು ಮುಖ್ಯಸ್ಥರಾಗಿದ್ದಾರೆ ಮತ್ತು 2 ವಲಯ ಅರಣ್ಯ ಅಧಿಕಾರಿಗಳು, 2 ಉಪ ವಲಯ ಅರಣ್ಯ ಅಧಿಕಾರಿಗಳು ಮತ್ತು ಅದರ ಆಡಳಿತಕ್ಕಾಗಿ ಸಚಿವಾಲಯ ಸಿಬ್ಬಂದಿ ನೆರವು ನೀಡುತ್ತಿದ್ದಾರೆ..

ಸೌಲಭ್ಯಗಳು

ವಾಲಿಬಾಲ್ ಗ್ರೌಂಡ್
ಜೆಂಟ್ಸ್ ಹಾಸ್ಟೆಲ್
ಒಳಾಂಗಣ ಹಾಲ್

ಸ್ಥಳ

ಸಂಪರ್ಕ ವಿವರಗಳು
  • ಶ್ರೀ. ನಂದಗೋಪಾಲ್  
    ವಲಯ ಅರಣ್ಯಾಧಿಕಾರಿಗಳು
  •   ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಚಕ್ರ ತರಬೇತಿ ಕೇಂದ್ರ, ಚಕ್ರ, ಮಲಾಲಿ ಪೋಸ್ಟ್, ನಗರ ಹೊಬ್ಲಿ, ಹೊಸನಗರ ತಾಲ್ಲೂಕು
  •   acfctcchakra@gmail.com
  •   9972979866