ವಿಭಾಗದ ಮುಖ್ಯಸ್ಥರು

ಶ್ರೀ. ಎಸ್.ಜಿ. ಹೆಗಡೆ ರಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ, Zoo Circle, ಚರ್ಚ್ ರಸ್ತೆ, ಶಿರಸಿ - 581 401
08384226445
dcfsirsi@gmail.com

ವಿಭಾಗದ ಬಗ್ಗೆ

ಶಿರಸಿ ಅರಣ್ಯ ವಿಭಾಗ ಉತ್ತರ ಕನ್ನಡ ಜಿಲ್ಲೆಯ ನೈರುತ್ಯ ಭಾಗದಲ್ಲಿದ್ದು, ಪಶ್ಚಿಮದಲ್ಲಿ ಶಿವಮೊಗ್ಗ ಜಿಲ್ಲೆಯೊಂದಿಗೆ ಗಡಿ ಹೊಂದಿದೆ. ಇದು ಶಿರಸಿ ಮತ್ತು ಸಿದ್ದಾಪುರ ತಾಲೂಕುಗಳು ಮತ್ತು ಮುಂಡಗೋಡು ತಾಲೂಕಿನ ಸಣ್ಣ ಭಾಗವನ್ನು ಒಳಗೊಂಡಿದೆ. ಬೆಟ್ಟ ಜಮೀನುಗಳು (ಸಂರಕ್ಷಿತ ಅರಣ್ಯ) ಸೇರಿದಂತೆ ವಿಭಾಗದಲ್ಲಿರುವ ಅರಣ್ಯದ ಒಟ್ಟು ವಿಸ್ತಾರ 1,71,828.17 ಹೆಕ್ಟೇರ್‌ಗಳಾಗಿದ್ದು, ಇದು ವಿಭಾಗದ ಒಟ್ಟು ಭೌಗೋಳಿಕ ಪ್ರದೇಶದ (2,172.90 ಚಕಿಮೀ) 79.04 ಪಾಲು ಹೊಂದಿದೆ. ಅಘನಾಶಿನಿ, ಶರಾವತಿ, ವರದಾ, ಸೋಂದಾ, ಧರ್ಮ ಮತ್ತು ಬೇಡ್ತಿ ನದಿಗಳು ಈ ವಿಭಾಗದಲ್ಲಿ ಹರಿಯುವ ಪ್ರಮುಖ ನದಿಗಳಾಗಿವೆ. ಧರ್ಮ ಮತ್ತು ವರದ ನದಿಗಳು ಪೂರ್ವದ ಕಡೆಗೆ ಹರಿಯುತ್ತವೆ ಮತ್ತು ಮುಂದೆ ತುಂಗ-ಭದ್ರ ನದಿಯನ್ನು ಸೇರುತ್ತವೆ. ಇತರ ನದಿಗಳು ಪಶ್ಚಿಮಕ್ಕೆ ಹರಿಯುತ್ತವೆ ಮತ್ತು ಅರಬ್ಬಿ ಸಮುದ್ರವನ್ನು ಸೇರುತ್ತವೆ. ತಗ್ಗುಪ್ರದೇಶಗಳಲ್ಲಿ ಬೇಡ್ತಿಯನ್ನು ಗಂಗಾವಳಿ ಎಂದು ಕರೆಯಲಾಗುತ್ತದೆ. ಶಿರಸಿ ವಿಭಾಗ ಮೂರು ಉಪ-ವಿಭಾಗಗಳನ್ನು ಹೊಂದಿದೆ, ಅವು ಶಿರಸಿ, ಜಾನ್ಮನೆ ಮತ್ತು ಸಿದ್ದಾಪುರ ಉಪವಿಭಾಗಗಳು, ಮತ್ತು ಶಿರಸಿ, ಹುಲೇಕಲ್‌, ಬನವಾಸಿ, ಜಾನ್ಮನೆ, ಸಿದ್ದಾಪುರ ಮತ್ತು ಕ್ಯಾದಗಿ ಈ ಆರು ವಲಯಗಳನ್ನು ಒಳಗೊಂಡಿದೆ. ವಿಭಾಗದಲ್ಲಿ 22 ಸೆಕ್ಷನ್‌ಗಳು ಮತ್ತು 78 ಬೀಟ್‌ಗಳಿವೆ. ಚಿಪಗಿ ಮತ್ತು ಮನ್ಮನೆಯಲ್ಲಿ ಎರಡು ಟಿಂಬರ್‌ ಡಿಪೋಗಳಿವೆ. ಶಿರಸಿ ವಿಭಾಗ ಕಣಿವೆಗಳಲ್ಲಿ ಒಂದಿಷ್ಟು ಒದ್ದೆ ನಿತ್ಯಹಸಿರು ಕಾಡುಗಳೊಂದಿಗೆ ಪ್ರಾಥಮಿಕವಾಗಿ ಅರೆ ನಿತ್ಯಹಸಿರು ಮತ್ತು ತೇವಾಂಶಭರಿತ ಎಲೆಯುದುರುವ ಕಾಡುಗಳನ್ನು ಹೊಂದಿದೆ. ವಿಭಾಗದ ಅರಣ್ಯಗಳ ಪೂರ್ವದ ಕಡೆಗಿನ ಒಂದಷ್ಟು ಭಾಗ ಕುರುಚಲು ಕಾಡಾಗಿದೆ.

ಶಿರಸಿ ವಿಭಾಗದ ನಕ್ಷೆ

--%>

ಉಪ ವಿಭಾಗಗಳು