A- A A+
ಅರಣ್ಯ ಇಲಾಖೆಯಲ್ಲಿ 2022-23 ನೇ ಸಾಲಿನ ನೇರ ನೇಮಕಾತಿ ಮೂಲಕ ಆನೆ ಕಾವಾಡಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಕುರಿತು ಅಧಿಸೂಚನೆ, ವೇಳಾಪಟ್ಟಿ ಮತ್ತು ಅರ್ಜಿ ನಮೂನೆ. 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 18-03-2023 ಅರಣ್ಯ ವ್ಯವಸ್ಥಾಪನಾಧಿಕಾರಿ (Forest Settlement Officer) ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಗರಿಷ್ಠ ಎರಡು ವರ್ಷಗಳ ಅವಧಿಗೆ ನೇಮಕಾತಿಯ ಕುರಿತು
ದೂರದೃಷ್ಟಿ

ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ.

ಧ್ಯೇಯ

ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ.

ಉದ್ದೇಶ
  • ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.)
  • ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.)
  • ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.)
  • ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)