ವಿಭಾಗದ ಮುಖ್ಯಸ್ಥರು

ಶ್ರೀ. ಹೆಚ್.ಸಿ.ಗಿರೀಶ್

ಉಪ ಅರಣ್ಯ ಸಂರಕ್ಷಣಾಧಿಕಾರಿ
ಎಪಿಎಂಸಿ ರಸ್ತೆ, ಮರಡಿ ಗುಡ್ಡ ಹಿಂದೆ, ಕೊಳ್ಳೆಗಾಲ - 571 440 ಚಾಮರಾಜನಗರ ಜಿಲ್ಲೆ.
08224253027
dcfcauverywl@gmail.com

ವಿಭಾಗದ ಬಗ್ಗೆ

ಕಾವೇರಿ ವನ್ಯಜೀವಿ ವಿಭಾಗ ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಈ ಮೂರು ಜಿಲ್ಲೆಗಳಲ್ಲಿ ಹರಡಿಕೊಂಡಿದೆ. 510 ಚ.ಕಿ.ಮೀ. ವ್ಯಾಪ್ತಿಯ ವನ್ಯಜೀವಿ ಅಭಯಾರಣ್ಯವನ್ನು ಮೂಲತಃ 1987ರಲ್ಲಿ ಅನುಸೂಚಿತಗೊಳಿಸಲಾಗಿತ್ತು. ಆನಂತರ ಅದಕ್ಕೆ ಇನ್ನಷ್ಟು ಅರಣ್ಯ ಪ್ರದೇಶಗಳನ್ನು ಸೇರಿಸುವ ಮೂಲಕ ವಿಸ್ತರಿಸಲಾಯಿತು, ಮತ್ತು ಇದರ ಪ್ರಸ್ತುತ ವಿಸ್ತಾರ 1,027 ಚ.ಕಿ.ಮೀ. ಕಾವೇರಿ ವನ್ಯಜೀವಿ ವಿಭಾಗ ಹನೂರು ಮತ್ತು ಕನಕಪುರ ಈ ಎರಡು ಉಪ ವಿಭಾಗಗಳನ್ನು ಹೊಂದಿದೆ, ಮತ್ತು ಕೊತ್ತನೂರು, ಹನೂರು, ಕೌಡ್ಲೆ, ಗೋಪಿನಾಥಂ, ಹಲಗೂರು, ಸಂಗಮ ಮತ್ತು ಮುಗ್ಗೂರು ಈ ಏಳು ವಲಯಗಳನ್ನು ಒಳಗೊಂಡಿದೆ. ಉತ್ತರದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮತ್ತು ದಕ್ಷಿಣದಲ್ಲಿ ಬಿ.ರಂ.ದೇ. ಹುಲಿ ಮೀಸಲು ಪ್ರದೇಶ ಮತ್ತು ಮ.ಮ. ಬೆಟ್ಟ ವನ್ಯಜೀವಿ ಅಭಯಾರಣ್ಯಗಳ ನಡುವೆ ಈ ಅಭಯಾರಣ್ಯ ಸಂಪರ್ಕ ಸೇತುವಾಗಿದೆ. ಕಾವೇರಿ, ಅರ್ಕಾವತಿ ಮತ್ತು ಶಿಂಷಾ ನದಿಗಳು ಅವುಗಳ ಅನೇಕ ಉಪನದಿಗಳ ಜೊತೆ ಈ ಪ್ರದೇಶದಲ್ಲಿ ಹರಿಯುತ್ತವೆ. ಇಲ್ಲಿನ ಕಾಡು ಮುಖ್ಯವಾಗಿ ಒಣ ಎಲೆಯುದುರುವ ಮತ್ತು ಕುರುಚಲು ವಿಧದ ಕಾಡಾಗಿದೆ, ಆದರೆ ವಿವಿಧ ಎತ್ತರಗಳಲ್ಲಿ ತೇವಾಂಶ ಭರಿತ ಎಲೆಯುದುರುವ, ಅರೆ ನಿತ್ಯ ಹಸಿರು, ನಿತ್ಯ ಹಸಿರು, ಶೋಲಾ, ನದಿಪಾತ್ರ, ಹಾರ್ಡ್ವಿಕಿಯ ಅರಣ್ಯ ಮುಂತಾದವು ಸೇರಿದಂತೆ ವಿಶಾಲ ಶ್ರೇಣಿಯ ಅರಣ್ಯಗಳು ಅಲ್ಲಲ್ಲಿ ಕಂಡುಬರುತ್ತವೆ. ಅಭಯಾರಣ್ಯದಲ್ಲಿ ಕಂಡುಬರುವ ಪ್ರಮುಖ ಪ್ರಾಣಿಗಳಲ್ಲಿ ಹುಲಿ, ಆನೆ, ಚಿರತೆ, ಕಾಡುಕೋಣ, ಕಾಡು ನಾಯಿ, ಸಾಂಬಾರ್, ಚುಕ್ಕೆ ಚಿಂಕೆ, ಬೊಗಳುವ ಜಿಂಕೆ, ಜೇನು ಕರಡಿ, ಕಾಡು ಹಂದಿ, ಲಂಗೂರ್‌, ಬಾನೆಟ್‌ ಕೋತಿ, ದೊಡ್ಡ ಅಳಿಲು, ಹನಿ ಬ್ಯಾಡ್ಜರ್, ಚೆವ್ರೊಟೇನ್, ಕೊಳ್ಳೇಗಾಲ ನೆಲದ ಉಡ, ವಿವಿಧ ಸರೀಸೃಪಗಳು ಮತ್ತು ಹಕ್ಕಿಗಳು ಕಂಡುಬರುತ್ತವೆ.

ಕಾವೇರಿ ವನ್ಯ ಜೀವಿ ವಿಭಾಗದ ನಕ್ಷೆ