ವಿಭಾಗದ ಮುಖ್ಯಸ್ಥರು

ಪಿ. ರುತ್ರನ್

ಉಪ ಅರಣ್ಯ ಸಂರಕ್ಷಣಾಧಿಕಾರಿ
ಕಾರ್ಕಳ - 574104
08258298183
dcfwlkarkala@gmail.com

ವಿಭಾಗದ ಬಗ್ಗೆ

ಕುದುರೇಮುಖ ವನ್ಯಜೀವಿ ವಿಭಾಗ (ಕಾರ್ಕಳದಲ್ಲಿ ಮುಖ್ಯ ಕಚೇರಿ ಹೊಂದಿರುವ) ಕುದುರೆಮುಖ ರಾಷ್ಟ್ರೀಯ ಉದ್ಯಾನ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಈ ಮೂರು ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಭಾಗಗಳಲ್ಲಿದೆ. ಸೋಮೇಶ್ವರ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಗಳು ಭಾಗಶಃ ಉಡುಪಿ ಹಾಗೂ ಭಾಗಶಃ ಶಿವಮೊಗ್ಗ ಜಿಲ್ಲೆಗಳಲ್ಲಿವೆ. ಸಂರಕ್ಷಿತ ಪ್ರದೇಶಗಳ ವಿಸ್ತಾರ ಈ ಕೆಳಗಿನಂತಿದೆ: ಕುದುರೆಮುಖ ರಾಷ್ಟ್ರೀಯ ಉದ್ಯಾನ (600.57 ಚ.ಕಿ.ಮೀ.), ಸೋಮೇಶ್ವರ ವನ್ಯಜೀವಿ ಅಭಯಾರಣ್ಯ (314.25 ಚ.ಕಿ.ಮೀ.) ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ (370.37 ಚ.ಕಿ.ಮೀ.). ಕುದುರೇಮುಖ ವನ್ಯಜೀವಿ ವಿಭಾಗ ಕುದುರೆಮುಖ ಮತ್ತು ಸಿದ್ದಾಪುರ ವನ್ಯಜೀವಿ ಈ ಎರಡು ಉಪ ವಿಭಾಗಗಳನ್ನು ಹೊಂದಿದೆ ಮತ್ತು ಆಗುಂಬೆ, ಅಮಾಸೆಬೈಲು, ಬೆಳ್ತಂಗಡಿ, ಹೆಬ್ರಿ, ಕಾರ್ಕಳ, ಕೆರೆಕಟ್ಟೆ, ಕೊಲ್ಲೂರು, ಕುದುರೆಮುಖ ಮತ್ತು ಸೋಮೇಶ್ವರ ವನ್ಯಜೀವಿ ಈ ಒಂಭತ್ತು ವಲಯಗಳನ್ನು ಒಳಗೊಂಡಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದ ಅರಣ್ಯಗಳು ಮುಖ್ಯವಾಗಿ ನಿತ್ಯಹಸಿರು ಮತ್ತು ಅರೆ ನಿತ್ಯಹಸಿರು ಮಾದರಿಯವು. ಎತ್ತರದ ಪ್ರದೇಶಗಳಲ್ಲಿ (ಸುಮಾರು 1,000 ಮೀ.), ಶೋಲಾ ಕಾಡುಗಳನ್ನು ಸುತ್ತವರಿದಿರುವ ವಿಶಾಲ ಮತ್ತು ನಿರಂತರವಾದ ಹುಲ್ಲುಗಾವಲುಗಳು ಕಣಿವೆಗಳಲ್ಲೂ ಕಂಡುಬರುತ್ತವೆ. ಸೋಮೇಶ್ವರ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಗಳಲ್ಲಿ ನಿತ್ಯಹಸಿರು, ಅರೆ ನಿತ್ಯ ಹಸಿರು ಮತ್ತು ಉಪ ತೇವಾಂಶ ಭರಿತ ಎಲೆಯುದುರುವ ಕಾಡುಗಳ ಮಿಶ್ರಣ ಕಂಡುಬರುತ್ತದೆ. ಸಂರಕ್ಷಿತ ಪ್ರದೇಶಗಳಲ್ಲಿ ಕಂಡುಬರುವ ಪ್ರಾಣಿಗಳಲ್ಲಿ ಹುಲಿ, ಚಿರತೆ, ಕಾಡು ನಾಯಿ, ಕಾಡುಕೋಣ, ಆನೆ (ಕೆಲವು ಕಡೆ), ಸಾಂಬಾರ, ಚುಕ್ಕೆ ಜಿಂಕೆ (ಕುದುರೆಮುಖದಲ್ಲಿ ಪರಿಚಯಿಸಲಾಗಿದೆ), ಜೇನು ಕರಡಿ, ಕಾಡು ಹಂದಿ, ಸಿಂಹ ಬಾಲದ ಕೋತಿ, ಲಂಗೂರು, ಬಾನೆಟ್ ಕೋತಿ, ವಿವಿಧ ಬಗೆಯ ಸರೀಸೃಪಗಳು ಮತ್ತು ಹಕ್ಕಿಗಳನ್ನು ನೋಡಬಹುದು.

ಕುದರೆಮುಖ ವನ್ಯಜೀವಿ ವಿಭಾಗದ ನಕ್ಷೆ

ಟೆಂಡರ್‌ಗಳು

ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ ಇನ್ನಷ್ಟು ವೀಕ್ಷಿಸಿ