ಕರ್ನಾಟಕದ ಅರಣ್ಯ ಇಲಾಖೆಯ ವನ್ಯಜೀವಿ ಘಟಕಕ್ಕೆ ಎರಡು ಮುಖ್ಯ ಕಾರ್ಯಗಳಿವೆ. ಈ ಕಾರ್ಯಗಳು (ಎ) ಐದು ರಾಷ್ಟ್ರೀಯ ಉದ್ಯಾನವನ, ಮೂವತ್ತು ವನ್ಯಜೀವಿ ಅಭಯಾರಣ್ಯಗಳು, ಹದಿನೈದು ಸಂರಕ್ಷಣಾ ಮೀಸಲುಗಳು ಮತ್ತು ಒಂದು ಸಮುದಾಯ ಮೀಸಲುಗಳ ರಕ್ಷಣೆ ಮತ್ತು ನಿರ್ವಹಣೆ (ಬಿ) ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರಲ್ಲಿ ಪಟ್ಟಿ ಮಾಡಿರುವ ಎಲ್ಲಾ ವನ್ಯಜೀವಿಗಳ (ಅರಣ್ಯೇತರ ಪ್ರದೇಶಗಳಲ್ಲಿರುವ ವನ್ಯಜೀವಿಗಳನ್ನೊಳಗೊಂಡು) ರಕ್ಷಣೆ ಮತ್ತು ಸಂರಕ್ಷಣೆ ಕಾರ್ಯವನ್ನು ಕೂಡ ವನ್ಯಜೀವಿ ಘಟಕದಿಂದ ಮಾಡಲಾಗುತ್ತಿದೆ. ಸಂರಕ್ಷಿತ ಪ್ರದೇಶಗಳ ನಿರ್ವಹಣೆಯನ್ನು ಕೇಂದ್ರ ಪ್ರಾಯೋಜಿತ ಮತ್ತು ರಾಜ್ಯ ವಲಯದ ಯೋಜನೆಗಳಡಿ ಈ ಕೆಳಕಂಡ ವಿವಿಧ ಚಟುವಟಿಕೆಗಳ ಮೂಲಕ ಮಾಡಲಾಗುತ್ತಿದೆ. • ಸಂರಕ್ಷಿತ ಪ್ರದೇಶಗಳ ಆವಾಸಸ್ಥಾನಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮೇವು ಮತ್ತು ನೀರಿನ ಲಭ್ಯತೆಯನ್ನು ಹೆಚ್ಚಿಸುವಿಕೆ, ಬೆಂಕಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವುದು, ವನ್ಯಪ್ರಾಣಿಗಳಿಗೆ ಸೋಂಕು ತಗಲದಂತೆ ಅರಣ್ಯದಂಚಿನ ಸಾಕುಪ್ರಾಣಿಗಳಿಗೆ ಲಸಿಕೆ ಹಾಕುವುದು ಇತ್ಯಾದಿ. • ಕಳ್ಳ ಬೇಟೆ ತಡೆ ಶಿಬಿರಗಳು ಮತ್ತು ಗಸ್ತು ನಡೆಸುವ ಮೂಲಕ ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆ, • ಸಂರಕ್ಷಿತ ಪ್ರದೇಶಗಳ ಮೇಲೆ ಜೈವಿಕ ಒತ್ತಡವನ್ನು ಕಡಿತಗೊಳೀಸಲು ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಸರ ಅಭಿವೃದ್ಧಿ ಚಟುವಟಿಕೆಗಳು • ವಿವಿಧ ಮಾದರಿಯ ತಡೆಬೇಲಿಗಳ ನಿರ್ಮಾಣ ಮತ್ತು ವನ್ಯಜೀವಿ ವಾಸಸ್ಥಳಗಳಲ್ಲಿ ಕಾರಿಡಾರ್‌ ಸಂಪರ್ಕ ಕಲ್ಪಿಸುವ ಮೂಲಕ ಮಾನವ-ಪ್ರಾಣಿ ಸಂಘರ್ಷ ಕಡಿಮೆ ಮಾಡುವುದು • ವನ್ಯಪ್ರಾಣಿಗಳಿಂದಾಗುವ ಮನುಷ್ಯರ ಜೀವಹಾನಿ, ಮಾನವಗಾಯ, ಜಾನುವಾರು ಸಾವು, ಬೆಳೆ ನಷ್ಟ ಮತ್ತು ಆಸ್ತಿ ನಷ್ಟಕ್ಕೆ ಪರಿಹಾರ ಪಾವತಿಸುವುದು • ಶಿಕ್ಷಣ, ತರಬೇತಿ ಮತ್ತು ಸಂಶೋಧನಾ ಚಟುವಟಿಕೆಗಳು • ಹುಲಿ, ಆನೆ, ಚಿರತೆ, ಸಸ್ಯಾಹಾರಿ ಪ್ರಾಣಿಗಳು ಮುಂತಾದ ಆಯ್ದ ಪ್ರಭೇದಗಳ ಗಣತಿ ಕಾರ್ಯ ಕೈಗೊಳ್ಳುವುದು. ವನ್ಯಜೀವಿ ಘಟಕದ ಕೆಲವು ಪ್ರಮುಖ ಯೋಜನೆಗಳ ಬಗ್ಗೆ ಈ ಕೆಳಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ: