ವೃತ್ತದ ಬಗ್ಗೆ
ಅರಣ್ಯ ಆಡಳಿತ ಮತ್ತು ಅರಣ್ಯ ನಿರ್ವಹಣೆಯ ಅನುಕೂಲಕಕ್ಕಾಗಿ, ಕರ್ನಾಟಕ ರಾಜ್ಯವನ್ನು ಹದಿಮೂರು ಘಟಕಗಳಾಗಿ ವಿಭಜಿಸಲಾಗಿದೆ. ಪ್ರತಿ ವೃತ್ತವನ್ನು ಒಂದು ಘಟಕ ಎಂದು ಕರೆಯಲಾಗುತ್ತದೆ ಪ್ರತಿ ವೃತ್ತದ ಉಸ್ತುವಾರಿಯನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಯ ಅಧಿಕಾರಿಗಳು ವಹಿಸಿಕೊಳ್ಳುತ್ತಾರೆ. ಬಂಡಿಪುರ ಮತ್ತು ನಾಗರಹೊಳೆ ಹುಲಿ ಮೀಸಲು ಧಾಮಗಳನ್ನು ಒಳಗೊಂಡ ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ಕೆಲವು ಭಾಗಗಳನ್ನು ಈ ವೃತ್ತಗಳಲ್ಲಿ ಸೇರಿಸಿಲ್ಲ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಯ ಅಧಿಕಾರಿಯಾಗಿರುವ ಕ್ಷೇತ್ರ ನಿರ್ದೇಶಕರು, ಹುಲಿ ಯೋಜನೆ, ಮೈಸೂರು ಇವರು ಈ ಪ್ರದೇಶಗಳ ಆಡಳಿತವನ್ನು ನೋಡಿಕೊಳ್ಳುತ್ತಾರೆ. ಪ್ರತಿ ವೃತ್ತವನ್ನು ಉಪ ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಅವು ಒಂದೋ ಭೂಪ್ರದೇಶದ ಅಥವಾ ವನ್ಯಜೀವಿ ವಿಭಾಗಗಳಾಗಿವೆ. ಪ್ರತಿ ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯ ವಿಭಾಗವೂ ಇದ್ದು, ಇದಕ್ಕೆ ಸಂಬಂಧಿತ ಮುಅಸಂ ಇವರು ತಾಂತ್ರಿಕ ಮಾರ್ಗದರ್ಶನಗಳನ್ನು ನೀಡುತ್ತಾರೆ. ಸಾಅ ವಿಭಾಗ ಸಂಬಂಧಿತ ಜಿಲ್ಲಾ ಪಂಚಾಯತ್ಗಳ ಆಡಳಿತಾತ್ಮಕ ನಿಯಂತ್ರಣದಲ್ಲಿ ಇರುತ್ತದೆ. ಪ್ರತಿ ಭೂಪ್ರದೇಶದ, ವನ್ಯಜೀವಿ ಅಥವಾ ಸಾಮಾಜಿಕ ಅರಣ್ಯ ವಿಭಾಗಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ. ಪ್ರತಿ ವಿಭಾಗವನ್ನು ಉಪವಿಭಾಗ, ವಲಯ, ವರ್ಗ ಮತ್ತು ಬೀಟ್ಗಳಾಗಿ ವಿಂಗಡಿಸಲಾಗಿದೆ. ಈ ಘಟಕಗಳ ಉಸ್ತುವಾರಿಯನ್ನು ಅನುಕ್ರಮವಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯ ಅಧಿಕಾರಿಗಳು, ಉಪ ವಲಯ ಅರಣ್ಯ ಅಧಿಕಾರಿಗಳು ಮತ್ತು ಅರಣ್ಯ ರಕ್ಷಕರುಗಳು ನಿರ್ವಹಿಸುತ್ತಾರೆ.