ಅರಣ್ಯ ಭೂಮಿ ಪರಿವರ್ತನೆ ಅರ್ಜಿಗಳ ವಿಲೇವಾರಿಗೆ ಆನ್ಲೈನ್ ಸೌಲಭ್ಯ ಕಲ್ಪಿಸಲು, ಭಾರತ ಸರ್ಕಾರದ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಇ-ಪರಿವೇಶ್ ಅನ್ನುವ ಪೋರ್ಟಲ್ ಅಭಿವೃದ್ಧಿಪಡಿಸಿದ್ದು, ಇದು ಬಳಕೆದಾರ ಏಜೆನ್ಸಿಗಳು ನೋಂದಣಿ ಮಾಡಿಕೊಳ್ಳಲು ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ 1980ರಡಿ ಅರಣ್ಯ ಭೂಮಿ ಪರಿವರ್ತನೆಗೆ ಅರ್ಜಿ ಸಲ್ಲಿಸಲು ಅನುಕೂಲ ಕಲ್ಪಿಸುತ್ತದೆ. ಸಿಸ್ಟಮ್ನಲ್ಲಿರುವ ಇನ್ಬಿಲ್ಟ್ ಪ್ರಕ್ರಿಯೆ ಸರಣಿ ರಾಜ್ಯಗಳ ನೋಡಲ್ ಅಧಿಕಾರಿಗಳು ಮತ್ತು ಇತರ ಅರಣ್ಯ ಅಧಿಕಾರಿಗಳಿಗೆ (ಉಅಸಂ, ಅಸಂ, ಮುಅಸಂ, ಅಪ್ರಮುಅಸಂ ಮತ್ತು ಪ್ರಾದೇಶಿಕ ಕೇಂದ್ರಗಳ ಅಧಿಕಾರಿಗಳು) ಲಾಗಿನ್ ಆಗಲು, ಪ್ರಸ್ತಾವನೆಗಳ ಪರಿಶೀಲನೆ ಮಾಡಲು ಮತ್ತು ಅದಕ್ಕೆ ಸಂಬಂಧಿಸಿ ಶಿಫಾರಸುಗಳನ್ನು ನೀಡಲು ಅನುಕೂಲ ಕಲ್ಪಿಸುತ್ತದೆ.


ಸಿಸ್ಟಮ್ ಅನ್ನು ಪ್ರವೇಶಿಸಲು ಮತ್ತು ಲಾಗಿನ್ ಮಾಡಲು, ಇನ್ನಷ್ಟು ತಿಳಿಯಿರಿ >>