A- A A+
* ವನ್ಯಜೀವಿ ಸಪ್ತಾಹ ಆಚರಣೆ-2023: ಕಾರ್ಯಕ್ರಮ ಪಟ್ಟಿ * ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿರುವ 50.02825 MT ರಕ್ತ ಚಂದನ, ಹಾಗೂ ಜಂಟಿ ಆಯುಕ್ತರು, ಕಸ್ಟಮ್ಸ್‌ , ಮಂಗಳೂರು ರವರು ವಶಪಡಿಸಿರುವ 58.370 MT ರಕ್ತ ಚಂದನವನ್ನು ಇ-ಸಂಗ್ರಹಣೆ ಕಂ ಇ-ಹರಾಜಿನಲ್ಲಿ ಹರಾಜು ಮಾಡುವ ಕುರಿತು * ದಿನಾಂಕ:27-07-2023 ರಿಂದ ಕೈಗೊಳ್ಳಲು ನಿಗದಿಪಡಿಸಲಾಗಿದ್ದ ಕಂಟಿಂಜೆಂಟ್‌ ವರ್ಗಾವಣೆ/ಸ್ಥಳನಿಯುಕ್ತಿ ಸಮಾಲೋಚನೆಯನ್ನು ಅನಿವಾರ್ಯ ಕಾರಣಗಳಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಪರಿಷ್ಕೃತ ದಿನಾಂಕಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು. * 2023-24 ನೇ ಸಾಲಿನ ಮೊದಲನೇ ತ್ರೈಮಾಸಿಕದ ಕಂಟಿಂಜೆಂಟ್‌ ವರ್ಗಾವಣೆ/ಸ್ಥಳ ನಿಯುಕ್ತಿಗಾಗಿ ಪರಿಗಣಿಸಲ್ಪಟ್ಟ ಸಿಬ್ಬಂದಿಗಳ ಸಮಾಲೋಚನಾ ಪ್ರಾಧಿಕಾರವಾರು ಮತ್ತು ವೃಂದವಾರು ಆದ್ಯತಾ ಪಟ್ಟಿ ಮತ್ತು ಸಮಾಲೋಚನಾ ಅಧಿಸೂಚನೆ * ಗಮನಿಸಿ: ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಅರ್ಜಿ ಸಂಖ್ಯೆ 3632 of 2021 ರಲ್ಲಿ ಆದೇಶ ದಿನಾಂಕ: 14-09-2021 r/w ಮಾನ್ಯ ಉಚ್ಛ ನ್ಯಾಯಾಲಯದ ರಿಟ್‌ ಅರ್ಜಿ ಸಂಖ್ಯೆ: 6125 of 2022 ರಲ್ಲಿನ ಆದೇಶ ದಿನಾಂಕ: 07-06-2022 ಗೆ ಸಂಬಂಧಿಸಿದಂತೆ, ಪ್ರಮುಅಸಂ (ಅಪಮು) ರವರ ಕಛೇರಿ ಆದೇಶ ಸಂಖ್ಯೆ: 60/2021-22, ದಿನಾಂಕ: 28-07-2021 ರಡಿ ವರ್ಗಾವಣೆಗೊಂಡ ಉಪ ವಲಯ ಅರಣಾಧಿಕಾರಿ ಕಂ ಮೋಜಣಿದಾರಿಗೆ ನಿಯಮ 22(iv) ರನ್ವಯ, ಮತ್ತು ಮುಂಬಡ್ತಿಯಿಂದಾಗಿ ಸ್ಥಳ ನಿಯುಕ್ತಿ ಹೊಂದಬೇಕಿರುವ ಸಿಬ್ಬಂದಿಗಳಿಗೆ ನಿಯಮ 22(xv) ರನ್ವಯ A-ಪ್ರವರ್ಗದ ಹುದ್ದೆಗಳನ್ನು ಖಾಲಿ ಮಾಡಬೇಕಿರುವ ಸಿಬ್ಬಂದಿಗಳು ಪ್ರಸಕ್ತ ಚಾಲ್ತಿಯಲ್ಲಿರುವ ಅನಿಶ್ಚಿತ ವರ್ಗಾವಣೆ/ ಸ್ಥಳ ನಿಯುಕ್ತಿ (Contingent transfer/postings) ಅಡಿ ಸ್ಥಳ ನಿಯುಕ್ತಿಗಾಗಿ ಇಲಾಖೆಯ TCMS ಪೋರ್ಟಲ್‌ ನಲ್ಲಿ ಆನ್‌ಲೈನ್‌ ಅರ್ಜಿಯನ್ನು ಸಲ್ಲಿಸಲು ವಿಶೇಷ ಅವಕಾಶದಡಿ ನೀಡಲಾಗಿದ್ದ ಅವಕಾಶವನ್ನು ದಿನಾಂಕ; 19-07-2023 ರವರೆಗೆ ವಿಸ್ತರಿಸಲಾಗಿದೆ. ದಯವಿಟ್ಟು ನಿಮ್ಮ ಅರ್ಜಿಯನ್ನು ಸಲ್ಲಿಸಿ. * ಗಮನಿಸಿ: ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಅರ್ಜಿ ಸಂಖ್ಯೆ 3632 of 2021 ರಲ್ಲಿ ಆದೇಶ ದಿನಾಂಕ: 14-09-2021 r/w ಮಾನ್ಯ ಉಚ್ಛ ನ್ಯಾಯಾಲಯದ ರಿಟ್‌ ಅರ್ಜಿ ಸಂಖ್ಯೆ: 6125 of 2022 ರಲ್ಲಿನ ಆದೇಶ ದಿನಾಂಕ: 07-06-2022 ಗೆ ಸಂಬಂಧಿಸಿದಂತೆ, ಪ್ರಮುಅಸಂ (ಅಪಮು) ರವರ ಕಛೇರಿ ಆದೇಶ ಸಂಖ್ಯೆ: 60/2021-22, ದಿನಾಂಕ: 28-07-2021 ರಡಿ ವರ್ಗಾವಣೆಗೊಂಡ ಉಪ ವಲಯ ಅರಣಾಧಿಕಾರಿ ಕಂ ಮೋಜಣಿದಾರಿಗೆ ನಿಯಮ 22(iv) ರನ್ವಯ, ಮತ್ತು ಮುಂಬಡ್ತಿಯಿಂದಾಗಿ ಸ್ಥಳ ನಿಯುಕ್ತಿ ಹೊಂದಬೇಕಿರುವ ಸಿಬ್ಬಂದಿಗಳಿಗೆ ನಿಯಮ 22(xv) ರನ್ವಯ A-ಪ್ರವರ್ಗದ ಹುದ್ದೆಗಳನ್ನು ಖಾಲಿ ಮಾಡಬೇಕಿರುವ ಸಿಬ್ಬಂದಿಗಳು ಪ್ರಸಕ್ತ ಚಾಲ್ತಿಯಲ್ಲಿರುವ ಅನಿಶ್ಚಿತ ವರ್ಗಾವಣೆ/ ಸ್ಥಳ ನಿಯುಕ್ತಿ (Contingent transfer/postings) ಅಡಿ ಸ್ಥಳ ನಿಯುಕ್ತಿಗಾಗಿ ಇಲಾಖೆಯ TCMS ಪೋರ್ಟಲ್‌ ನಲ್ಲಿ ಆನ್‌ಲೈನ್‌ ಅರ್ಜಿಯನ್ನು ಸಲ್ಲಿಸಲು ದಿನಾಂಕ; 15-07-2023 (ಶನಿವಾರ) ರಿಂದ 17-07-2023 (ಸೋಮವಾರ) ವರೆಗೆ ವಿಶೇಷ ಅವಕಾಶ ನೀಡಲಾಗಿದೆ. ದಯವಿಟ್ಟು ನಿಮ್ಮ ಅರ್ಜಿಯನ್ನು ಸಲ್ಲಿಸಿ.-KFDICT * ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD(I) & (II), ದಿನಾಂಕ: 19-05-2023 ಗೆ ಸಂಬಂಧಿಸಿದಂತೆ ವೃತ್ತ ಪ್ರಾಧಿಕಾರ ವಾರು ಹುದ್ದೆಗಳ ಮತ್ತು ಸಿಬ್ಬಂದಿಗಳ ಪರಿಷ್ಕೃತ ವಿವರ (30-06-2023 ರಂತೆ) * ಉವಅ ಕಂ ಮೋಜಣಿದಾರರು, ಗಸ್ತು ವನಪಾಲಕರು, ಅರಣ್ಯ ವೀಕ್ಷಕರು 2023-24 ನೇ ಸಾಲಿನ ಸಾಮಾನ್ಯ ವರ್ಗಾವಣೆ/ ಸ್ಥಳ ನಿಯುಕ್ತಿಗಾಗಿ ಹಾಗೂ ಅನಿಶ್ಚಿತ ವರ್ಗಾವಣೆ/ ಸ್ಥಳ ನಿಯುಕ್ತಿಗಾಗಿ ದಿನಾಂಕ: 05-07-2023 ರವರೆಗೆ ತಮ್ಮ ಅರ್ಜಿಗಳನ್ನು ಸಲ್ಲಿಸತಕ್ಕದ್ದು. * ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD(I) & (II), ದಿನಾಂಕ: 19-05-2023 ಗೆ ಸಂಬಂಧಿಸಿದಂತೆ ವೃತ್ತ ಪ್ರಾಧಿಕಾರ ವಾರು ಹುದ್ದೆಗಳ ಮತ್ತು ಸಿಬ್ಬಂದಿಗಳ ವಿವರ * 2023-24 ನೇ ಸಾಲಿನ ಕಂಟಿಂಜೆಂಟ್‌ ವರ್ಗಾವಣೆ/ಸ್ಥಳ ನಿಯುಕ್ತಿ ಕುರಿತಂತೆ ಅಧಿಸೂಚನೆ ಸಂಖ್ಯೆ: KFD/HOFF/B9 (MSC)/1/2020-PnR-KFD (II), ದಿನಾಂಕ: 19-05-2023 ಕ್ಕೆ ಪೂರಕ ಅಧಿಸೂಚನೆ, ದಿನಾಂಕ: 28-06-2023 * 2023-24 ನೇ ಸಾಲಿನ ಸಾಮಾನ್ಯ ವರ್ಗಾವಣೆ/ಸ್ಥಳ ನಿಯುಕ್ತಿ ಕುರಿತಂತೆ ಅಧಿಸೂಚನೆ ಸಂಖ್ಯೆ: KFD/HOFF/B9 (MSC)/1/2020-PnR-KFD (I), ದಿನಾಂಕ: 19-05-2023 ಕ್ಕೆ ಪೂರಕ ಅಧಿಸೂಚನೆ, ದಿನಾಂಕ: 28-06-2023 * 2023-24 ನೇ ಸಾಲಿನಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ, ಗಸ್ತು ವನಪಾಲಕ ಮತ್ತು ಅರಣ್ಯ ವೀಕ್ಷಕರ ಸಾಮಾನ್ಯ ವರ್ಗಾವಣೆಗಾಗಿ ಅಧಿಸೂಚನೆ. ದಿನಾಂಕ:19-05-2023 * 2023-24 ನೇ ಸಾಲಿನ ಮೊದಲನೇ ತ್ರೈಮಾಸಿಕ ಅವಧಿಗೆ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ, ಗಸ್ತು ವನಪಾಲಕ, ಅರಣ್ಯ ವೀಕ್ಷಕರ ಕಂಟಿಂಜೆಂಟ್‌ ವರ್ಗಾವಣೆ/ ಸ್ಥಳ ನಿಯುಕ್ತಿಗಾಗಿ ಅಧಿಸೂಚನೆ. ದಿನಾಂಕ:19-05-2023 * ದಿನಾಂಕ: 15-05-2023 ರಿಂದ ದಿನಾಂಕ: 18-05-2023 ರವೆರಗೆ ಜರುಗಿಸಲಾಗುತ್ತಿರುವ ಕಂಟಿಂಜೆಂಟ್‌ ಸ್ಥಳ ನಿಯುಕ್ತಿಯ ಸಮಾಲೋಚನೆಯ ದೈನಂದಿನ ವರದಿಗಳು. * ಸಮಾಲೋಚನಾ ಆದ್ಯತಾ ಪಟ್ಟಿ (ದಿನಾಂಕ, ಸಮಯ ಮತ್ತು ಸ್ಥಳದ ವಿವರದೊಂದಿಗೆ) ಯ ಕುರಿತು ಅಧಿಸೂಚನೆ * ಪೂರಕ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD, dated: 02-05-2023ಕ್ಕೆ ತಿದ್ದುಪಡಿ. * 2023ನೇ ಕ್ಯಾಲೆಂಡರ್‌ ವರ್ಷದಲ್ಲಿ ವಿವಿಧ ಸರ್ಕಾರಿ ಮರಮಟ್ಟು ಸಂಗ್ರಹಾಲಯಗಳಲ್ಲಿ ಇ-ಹರಾಜು ಮಾಡಲು ದಿನಾಂಕಗಳನ್ನು ನಿಗಧಿಪಡಿಸುವ ಕುರಿತು. ದಿನಾಂಕ: 15-05-2023
ದೈವೀವನ/ ದೇವರಕಾಡು ಸ್ಕೀಮ್ ಅನ್ನು ಕರ್ನಾಟಕ ಅರಣ್ಯ ಇಲಾಖೆ 2011-12ರಲ್ಲಿ ಚಾಲನೆಗೊಳಿಸಿತು. ರಾಜ್ಯ ವಲಯದ ಈ ಸ್ಕೀಮ್‌ ದೇಗುಲಗಳ ಸಮೀಪದ ಸ್ಥಳೀಯ ಜೀವವೈವಿಧ್ಯವನ್ನು ಸಂರಕ್ಷಿಸುವ ಉದ್ದೇಶಕ್ಕಾಗಿ ಅರಣ್ಯ ಬೆಳೆಸುವುದನ್ನು ಪ್ರೋತ್ಸಾಹಿಸುತ್ತದೆ. ಇದು ಹೂಬಿಡುವ ಮತ್ತು ಹಣ್ಣು ನೀಡುವ ಸ್ಥಳೀಯ ಪ್ರಭೇದಗಳ ಜೊತೆಗೆ ಧಾರ್ಮಿಕ ಮಹತ್ವವುಳ್ಳ ಆಲ, ಅರಳಿ, ಅತ್ತಿ, ಬೇವು, ಬನ್ನಿ, ತಾರೆ, ಬಿಲ್ವಪತ್ರೆ, ಗೋನಿ, ನೇರಳೆ, ನಾಗಸಂಪಿಗೆ, ಕಗ್ಗಲಿ, ಎಕ್ಕೆ ಮುಂತಾದ ಮರಗಳನ್ನು ನೆಡುವುದರೊಂದಿಗೆ ರಾಶಿವನ, ನಕ್ಷತ್ರವನ, ನವಗ್ರಹವನ, ಪಂಚಾಯತ ವನ, ಅಷ್ಟದಿಕ್ಪಾಲಕವನ ಮುಂತಾದವುಗಳ ರಚನೆಯನ್ನು ಒಳಗೊಂಡಿದೆ. ದೇಗುಲಕ್ಕೆ ಬರುವ ಸಂದರ್ಶಕರು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ತಿಳಿದುಕೊಳ್ಳುತ್ತಾರೆ. ದೈವೀವನ ಸ್ಕೀಮ್‌ನಡಿ, 100 ಹೆಕ್ಟೇರ್‌ ಪ್ರದೇಶದಲ್ಲಿ 3 ವರ್ಷಗಳ ಅವಧಿಯವರೆಗೆ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತದೆ ಮತ್ತು ಆ ನಂತರ ಮತ್ತೆ 2 ವರ್ಷಗಳ ಕಾಲ ಸಸಿಗಳ ನಿರ್ವಹಣೆ ಮಾಡಲಾಗುತ್ತದೆ. ಚೈನ್‌-ಲಿಂಕ್‌ ಮೆಷ್‌ ಬೇಲಿ ಮೂಲಕ ರಕ್ಷಣೆ ನೀಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಸುಮಾರು 300 ಎಕರೆ ವಿಸ್ತಾರರದ ದೈವೀವನ ಬೆಳೆಸಲು ಪ್ರಸ್ತಾವನೆ ಮಾಡಲಾಗಿದೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿ, ವಿಶೇಷವಾಗಿ ಮಕ್ಕಳಲ್ಲಿ, ಜಾಗೃತಿ ಮತ್ತು ಆಸಕ್ತಿ ಮೂಡಿಸಲು, ನಡೆದಾಡುವ ಹಾದಿ, ಪರಿಸರ ಹಾದಿ, ಮತ್ತು ಜೀವವರ್ಗೀಕರಣದ ಲೇಬಲ್‌ ಹಚ್ಚುವುದು ಮುಂತಾದ ನಾಗರಿಕ ಸೌಕರ್ಯಗಳನ್ನು ದೈವೀವನದೊಳಗಡೆ ಒದಗಿಸಲಾಗುತ್ತದೆ.

ಪದೇಪದೆ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ) ನೋಡಿ

  • ದೇವರಕಾಡು ಎಂದರೇನು

    ಅನಾದಿ ಕಾಲದಿಂದಲೂ ಅರಣ್ಯಗಳು ಆಧ್ಯಾತ್ಮದ ಜೊತೆ ಬೆಸೆದುಕೊಂಡಿವೆ. ಸಾಂಪ್ರದಾಯಿಕವಾಗಿ ನಮ್ಮ ಪೂರ್ವಜರು ಸಸ್ಯಗಳು ಮತ್ತು ಪ್ರಾಣಿಗಳನ್ನು ಪೂಜಿಸುತ್ತಿದ್ದರು ಮತ್ತು ಔಷಧೀಯ ಉದ್ದೇಶಗಳಿಗಾಗಿ ವಿವಿಧ ಸಸ್ಯಗಳ ಬಳಕೆಯನ್ನೂ ಮಾಡುತ್ತಿದ್ದರು. ಆಧ್ಯಾತ್ಮಿಕ ಗುರುಗಳು ಅರಣ್ಯಗಳಲ್ಲಿ ಅಥವಾ ಮರಗಳ ಕೆಳಗೆ ಧ್ಯಾನ ಮಾಡುವ ಮೂಲಕ ಜ್ಞಾನೋದಯ ಪಡೆದಿದ್ದರು. ಕರ್ನಾಟಕದಲ್ಲಿ ಅರಣ್ಯದೊಳಗೆ ಇರುವ ಅನೇಕ ದೇಗುಲಗಳಿವೆ. ಅಂಥ ಅರಣ್ಯಗಳನ್ನು ದೇವರಕಾಡು ಎಂದು ಪರಿಗಣಿಸಲಾಗುತ್ತದೆ.

  • ದೇವರಕಾಡು ಸ್ಕೀಮ್‌ ಅನ್ನು ಕರ್ನಾಟಕ ಸರ್ಕಾರ ಯಾವ ವರ್ಷ ಆರಂಭಿಸಿತು

    ಕರ್ನಾಟಕ ಸರ್ಕಾರ ದೇವರಕಾಡು ಸ್ಕೀಮ್‌ ಅನ್ನು 2010-11ನೇ ಆರ್ಥಿಕ ವರ್ಷದಲ್ಲಿ ಆರಂಭಿಸಿತು.

  • ದೇವರಕಾಡು ಸ್ಕೀಮ್‌ನ ಉದ್ದೇಶಗಳು ಏನು

    ಈ ಕೆಳಗಿನವುಗಳು ದೇವರಕಾಡು ಸ್ಕೀಮ್‌ನ ಮುಖ್ಯ ಉದ್ದೇಶಗಳು: • ದೇಗುಲಗಳು ಅಥವಾ ಪೂಜಾಸ್ಥಳಗಳ ಸುತ್ತಮುತ್ತಲಿನ ಪವಿತ್ರ ಅರಣ್ಯಗಳ ರಕ್ಷಣೆ ಮಾಡುವುದು. • ರಾಶಿವನ, ನಕ್ಷತ್ರವನ, ನವಗ್ರಹವನ, ತಪೋ ವನ, ಅಷ್ಟದಿಕ್ಪಾಲಕ ವನ, ಪಂಚಾಯತ್ ವನ ಮುಂತಾದ ಅರಣ್ಯಗಳನ್ನು ಬೆಳೆಸುವುದು. • ಆಲ, ಅರಳಿ, ಬೇವು, ಬನ್ನಿ, ತಾರೆ, ಬಿಲ್ವಪತ್ರೆ, ಗೊಂಡ, ನೇರಳೆ, ನಾಗಸಂಪಿಗೆ, ಅತ್ತಿ, ಕಗ್ಗಲಿ ಮುಂತಾದ ಪವಿತ್ರ ಎಂದು ಪರಿಗಣಿಸಲ್ಪಡುವ ಪ್ರಭೇದಗಳಿಂದ ಅರಣ್ಯಗಳನ್ನು ಸಮೃದ್ಧಗೊಳಿಸುವುದು. • ಅರಣ್ಯಗಳ ಪ್ರಾಮುಖ್ಯತೆ ಬಗ್ಗೆ ಸ್ಥಳೀಯ ಜನರಲ್ಲಿ ಜಾಗೃತಿ ಮೂಡಿಸುವುದು. • ಸ್ಥಳೀಯ ಪರಿಸರವನ್ನು ಸುಧಾರಣೆ ಮಾಡುವುದು

  • ದೇವರಕಾಡು ಸ್ಕೀಮ್‌ ಅನುಷ್ಠಾನಕ್ಕೆ ಇರುವ ಮಾರ್ಗಸೂತ್ರಗಳು ಯಾವುವು

    ಸ್ಕೀಮ್‌ನಡಿ ಅಭಿವೃದ್ಧಿಪಡಿಸಬೇಕಾದ ಪ್ರದೇಶ ಧಾರ್ಮಿಕ ಪ್ರಾಮುಖ್ಯತೆ ಹೊಂದಿರಬೇಕು. ಸುಮಾರು 300 ಹೆಕ್ಟೇರ್‌ ವಿಸ್ತಾರದ ಅರಣ್ಯ ಭೂಮಿ ಅಥವಾ ಇತರ ಸರ್ಕಾರಿ ಜಮೀನನ್ನು ಅಭಿವೃದ್ಧಿಪಡಿಸಲು ತೆಗೆದುಕೊಳ್ಳಬೇಕು. ಪ್ರದೇಶದ ಅಭಿವೃದ್ಧಿಗಾಗಿ ವಿವರವಾದ ಕಾರ್ಯಯೋಜನೆ ಇರಬೇಕು. ಧಾರ್ಮಿಕ ಮಹತ್ವದ ಸ್ಥಳೀಯ ಪ್ರಭೇದಗಳು, ಹಣ್ಣು ಬಿಡುವ ಸಸ್ಯಗಳು ಮುಂತಾದವುಗಳನ್ನು ನೆಡಬೇಕು. ಪರಿಸರದ ಬಗ್ಗೆ ಜಾಗೃತಿ ಹೆಚ್ಚಿಸಲು, ಲೇಬಲಿಂಗ್‌/ ಫಲಕಗಳನ್ನು ಹಾಕಬೇಕು.

  • ಕರ್ನಾಟಕದಲ್ಲಿ ಎಷ್ಟು ದೇವರಕಾಡುಗಳನ್ನು ರಚಿಸಲಾಗಿದೆ

    ಈ ಸ್ಕೀಮ್‌ನಡಿ, 60 ದೇವರಕಾಡುಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ಸರ್ಕಾರ ಆರ್ಥಿಕ ನೆರವನ್ನು ನೀಡಿದೆ.

  • ದೇವರಕಾಡುಗಳಿಂದ ಸಾರ್ವಜನಿಕರಿಗೆ ಸಿಗುವ ಪ್ರಯೋಜನಗಳೇನು

    ದೇವರಕಾಡುಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಪರಗೋಳ, ಬೆಂಚುಗಳು, ಕುಡಿಯುವ ನೀರಿನ ಸೌಕರ್ಯ, ದೇಗುಲಕ್ಕೆ ಸುಧಾರಿತ ಕಾಲ್ನಡಿಗೆ ಹಾದಿ ಅಥವಾ ಮೆಟ್ಟಿಲು ಮುಂತಾದ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ. ಇದರ ಜೊತೆಗೆ, ಅವರು ಸಸ್ಯ ಪ್ರಭೇದಗಳು, ರಾಶಿವನ, ನಕ್ಷತ್ರವನ ಮುಂತಾದವುಗಳ ಬಗ್ಗೆ ಫಲಕಗಳು ಮತ್ತು ಚಿತ್ರವಿವರಣೆಗಳ ಮೂಲಕ ಹೆಚ್ಚು ತಿಳಿದುಕೊಳ್ಳುತ್ತಾರೆ.

  • ಕರ್ನಾಟಕ ಸರ್ಕಾರಕ್ಕೆ ಹೊಸ ದೇವರಕಾಡುಗಳನ್ನು ರಚಿಸುವ ಯೋಜನೆ ಇದೆಯೇ

    ಬಹುತೇಕ ದೇವರಕಾಡುಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಕರ್ನಾಟಕ ಸರ್ಕಾರ ನಿರ್ವಹಣೆಗಾಗಿ ಆರ್ಥಿಕ ನೆರವು ನೀಡುತ್ತಿದೆ. ಅದಾಗ್ಯೂ, ಹೊಸ ಪ್ರದೇಶಕ್ಕೆ ಈ ಸ್ಕೀಮ್‌ನಡಿ ಆರ್ಥಿಕ ನೆರವು ನೀಡುವ ಬಗ್ಗೆ ಸಂಬಂಧಿತ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಪ್ರಸ್ತಾವನೆ ಇದ್ದಲ್ಲಿ, ಪ್ರಸ್ತಾವನೆಯ ಸ್ವೀಕಾರಾರ್ಹತೆ ಮತ್ತು ಸಂಬಂಧಿತ ಪ್ರಾಧಿಕಾರದ ಅನುಮೋದನೆಗೆ ಒಳಪಟ್ಟು ಆರ್ಥಿಕ ನೆರವು ಒದಗಿಸಬಹುದು.

  • ದೇವರ ಕಾಡುಗಳ ನಿರ್ವಹಣೆಯಲ್ಲಿ ಸಾರ್ವಜನಿಕರ ಜವಾಬ್ದಾರಿಗಳು ಏನು

    ದೈವೀವನ/ ದೇವರಕಾಡಿಗೆ ಭೇಟಿ ನೀಡುವ ಎಲ್ಲ ಸಂದರ್ಶಕರು ಉಳಿದ ಆಹಾರ, ಪ್ಲಾಸ್ಟಿಕ್‌ ಕಸ ಇತ್ಯಾದಿಗಳನ್ನು ಚೆಲ್ಲದೆ ಸ್ವಚ್ಛತೆ ಕಾಪಾಡಲು ಪ್ರಯತ್ನಿಸಬೇಕು. ಒಂದು ವೇಳೆ ಬೆಂಕಿ ಆಕಸ್ಮಿಕ ಅಥವಾ ಇತರ ಯಾವುದೇ ಅಕ್ರಮ ಅಥವಾ ಅನಧಿಕೃತ ಚಟುವಟಿಕೆ ಕಂಡುಬಂದಲ್ಲಿ ತಕ್ಷಣವೇ ಸ್ಥಳೀಯ ಅರಣ್ಯಾಧಿಕಾರಿಗೆ ಮಾಹಿತಿ ನೀಡಬೇಕು.

  • ದೇವರಕಾಡುಗಳ ಸುಧಾರಣೆ ಮತ್ತು ನಿರ್ವಹಣೆಗೆ ಕಾರ್ಪೊರೆಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ನಿಧಿಗಳ ಬಳಕೆ ಮಾಡಬಹುದೇ

    ಸರ್ಕಾರದ ಆರ್ಥಿಕ ನೆರವು ಸೀಮಿತವಾಗಿರುವುದರಿಂದ, ಸಂಬಂಧಿತ ಪ್ರಾಧಿಕಾರಗಳ ಅನುಮೋದನೆಗೆ ಒಳಪಟ್ಟು ದೇವರಕಾಡುಗಳ ಸುಧಾರಣೆ ಮತ್ತು ನಿರ್ವಹಣೆಗೆ ಸಿಎಸ್‌ಆರ್‌ ನಿಧಿ/ ದೇಣಿಗೆಗಳ ಬಳಕೆಗೆ ಅನುಮತಿ ನೀಡಬಹುದು.