ಮರಮಟ್ಟು, ಕಂಬ, ದಪ್ಪ ಸೌದೆ ಮತ್ತ ಉರುವಲುಗಳನ್ನು ಹರಾಜಿನ ಮೂಲಕ ಸರ್ಕಾರಿ ಮರಮಟ್ಟು ಡಿಪೋಗಳ ಮುಖಾಂತರ ಮಾರಾಟ ಮಾಡಲಾಗುತ್ತಿದೆ.ಸರ್ಕಾರಿ ಜಮೀನಿನಿಂದ ಡಿಪೋದಲ್ಲಿ ಮರಮಟ್ಟು ಸ್ವೀಕಾರ, ಡಿಪೊಗಳಲ್ಲಿ ಲಾಟ್‌ಗಳ ರಚನೆ, ಮೊದಲ ಮೂರು ಅನುಕ್ರಮ ಮಾರಾಟಗಳ ಸರಾಸರಿ ದರ ಆಧರಿಸಿ ಮಾರ್ಪಾಡು ದರಗಳನ್ನು ನಿಗದಿಪಡಿಸುವುದು, ಹರಾಜುದಾರರ ನೋಂದಣಿ, ಇಎಂಡಿ ಪಾವತಿ ಮತ್ತು ಇತರ ಪಾವತಿ ಮುಂತಾದವುಗಳ ಪೂರ್ಣ ತುದಿಯಿಂದ ತುದಿಯವರೆಗಿನ ಕೆಲಸಗಳನ್ನು ಇ-ಟಿಂಬರ್‌ ಪೋರ್ಟಲ್‌ನಲ್ಲಿ ನಡೆಸಲಾಗುತ್ತಿದೆ. ಈ ವ್ಯವಸ್ಥೆಯನ್ನು ಎಂಎಸ್‌ಟಿಸಿ ಜೊತೆ ಏಕೀಕೃತಗೊಳಿಸಲಾಗಿದ್ದು, ಲಾಟ್‌ ವಿವರಗಳು ಮತ್ತು ಬಿಡ್ಡರ್‌ಗಳ ವಿವರಗಳನ್ನು ಇ-ಟಿಂಬರ್‌ನಿಂದ ಎಂಎಸ್‌ಟಿಸಿಯ ಇ-ಹರಾಜು ವೇದಿಕೆಗೆ ಹಂಚಲಾಗುತ್ತದೆ. ಆನ್‌ಲೈನ್‌ ಬಿಡ್ಡಿಂಗ್‌ ಎಂಎಸ್‌ಟಿಸಿ ವೇದಿಕೆಯಲ್ಲಿ ನಡೆಯುತ್ತದೆ ಮತ್ತು ಬಿಡ್‌ ವಿವರಗಳನ್ನು ಎಂಎಸ್‌ಟಿಸಿಯಿಂದ ಇ-ಟಿಂಬರ್‌ಗೆ ಹಂಚಲಾಗುತ್ತದೆ. ಈ ವ್ಯವಸ್ಥೆಯಡಿ ಆದಾಯ, ತೆರಿಗೆಗಳು ಮತ್ತು ಮಾರಾಟ ಮಾಡಿದ ಲಾಟ್‌ಗಳ ವಿವರಗಳು ಬಳಕೆದಾರರಿಗೆ ನೈಜ ಸಮಯದಲ್ಲಿ ಲಭ್ಯ ಇವೆ.


ಸಿಸ್ಟಮ್ ಅನ್ನು ಪ್ರವೇಶಿಸಲು ಮತ್ತು ಲಾಗಿನ್ ಮಾಡಲು, ಇನ್ನಷ್ಟು ತಿಳಿಯಿರಿ >>