ವಿಭಾಗದ ಮುಖ್ಯಸ್ಥರು

ಶ್ರೀ. ಜೆ. ಶ್ರೀನಿವಾಸಮೂರ್ತಿ ರಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಜಿಲ್ಲಾ ಪಂಚಾಯತ್ ಹತ್ತಿರ, ದಾವಣಗೆರೆ ವಿಭಾಗ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ, ದಾವಣಗೆರೆ -577005
08192262527
dcfdvg@gmail.com

ವಿಭಾಗದ ಬಗ್ಗೆ

ದಾವಣಗೆರೆ ಅರಣ್ಯ ವಿಭಾಗ ಮಧ್ಯ ಕರ್ನಾಟಕದ ಈಶಾನ್ಯ ವಲಯದಲ್ಲಿದೆ. ಈ ವಿಭಾಗ ದಾವಣಗೆರೆ ಜಿಲ್ಲೆಯ ಒಂದು ಭಾಗವನ್ನು ಆವರಿಸಿಕೊಂಡಿದೆ, ಜಿಲ್ಲೆಯ ಉಳಿದ ಭಾಗ ಭದ್ರಾವತಿ ಅರಣ್ಯ ವಿಭಾಗಕ್ಕೆ ಸೇರುತ್ತದೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 5817.80 ಹೆಕ್ಟೇರ್ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ ಸುಮಾರು 12.36 ವಿಸ್ತಾರವಾಗಿದೆ (580.70- ಚ.ಕಿ.ಮೀ.). ವಿಭಾಗ ದಾವಣಗೆರೆ ಉಪ ವಿಭಾಗ ಎನ್ನುವ ಒಂದು ಉಪ ವಿಭಾಗ ಹೊಂದಿದೆ ಮತ್ತು ದಾವಣಗೆರೆ, ಹರಪನಹಳ್ಳಿ, ಹೊನ್ನಳ್ಳಿ, ಜಗಳೂರು ಮತ್ತು ರಂಗಯ್ಯನದುರ್ಗ ವನ್ಯಜೀವಿ ಈ ಐದು ವಲಯಗಳನ್ನು ಹೊಂದಿದೆ. ದಾವಣಗೆರೆ ವಿಭಾಗದ ಕಾಡುಗಳು ಒಣ ಮಿಶ್ರ ಎಲೆಯುದುರುವ ಕಾಡುಗಳಿಂದ ಮುಳ್ಳು ಪೊದೆಗಳವರೆಗೆ ವೈವಿಧ್ಯತೆ ಹೊಂದಿವೆ. ಒಣ ಮಿಶ್ರ ಎಲೆಯುದುರುವ ಕಾಡುಗಳು ವಿಭಾಗದ ಪಶ್ಚಿಮದ ತುತ್ತತುದಿಯ ಭಾಗಗಳಲ್ಲಿ ಕಂಡುಬರುತ್ತವೆ. ಅದಾಗ್ಯೂ, ವಿಭಾಗದಲ್ಲಿರುವ ಬಹುತೇಕ ಅರಣ್ಯ ಪ್ರದೇಶಗಳು, ವಿಶೇಷವಾಗಿ ಪೂರ್ವ ಭಾಗದಲ್ಲಿ, ದೊಡ್ಡ ಪ್ರಮಾಣದ ಕುರುಚಲು ಕಾಡುಗಳನ್ನು ಹೊಂದಿದ್ದು, ಇವು ಅತ್ಯಂತ ಒಣ ಪ್ರದೇಶಗಳಲ್ಲಿ ಮುಳ್ಳು ಪೊದೆಗಳಾಗಿವೆ. ಜಗಳೂರು ತಾಲೂಕಿನ ರಂಗಯ್ಯನದುರ್ಗ ಅರಣ್ಯಗಳನ್ನು ನಾಲ್ಕು ಕೊಂಬಿನ ಜಿಂಕೆಗಳ ಸಂರಕ್ಷಣೆಗಾಗಿ ವನ್ಯಜೀವಿ ಅಭಯಾರಣ್ಯ ಎಂದು (10-01-2011 ರಂದು) ಘೋಷಣೆ ಮಾಡಲಾಗಿದೆ. ಇದು 7,723 ಹೆಕ್ಟೇರ್ ಪ್ರದೇಶವನ್ನು ವ್ಯಾಪಿಸಿದೆ.

ದಾವಣಗೆರೆ ವಿಭಾಗದ ನಕ್ಷೆ

ಟೆಂಡರ್‌ಗಳು

ಸುದ್ದಿ ಮತ್ತು ನವೀಕರಣಗಳು