ಸಿಬ್ಬಂದಿ ಮತ್ತು ನೇಮಕಾತಿ ಘಟಕವು ಮುಖ್ಯವಾಗಿ ಇಲಾಖೆಯ ಸಿಬ್ಬಂದಿ ವಿಷಯಗಳ ಮೇಲುಸ್ತುವಾರಿಯನ್ನು ನಿರ್ವಹಿಸುತ್ತದೆ ಹಾಗೂ ಯಾವುದೇ ರಾಜ್ಯ ಸರ್ಕಾರದ ಅಥವಾ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನಗೊಳಿಸುವುದಿಲ್ಲ. ಈ ಘಟಕದ ಎರಡು ಮುಖ್ಯ ಕಾರ್ಯಗಳೆಂದರೆ ಅರಣ್ಯ ಇಲಾಖೆಯ ಎಲ್ಲಾ ಸಿಬ್ಬಂದಿಯ ನಿಯೋಜನೆ, ವರ್ಗಾವಣೆ, ಶಿಸ್ತಿನಕ್ರಮ, ರಜೆ ಮಂಜೂರಾತಿ, ನಿವೃತ್ತಿಗೆ ಸಂಬಂಧಿಸಿದ ವಿಷಯಗಳು ಮತ್ತು ವಲಯ ಅರಣ್ಯ ಅಧಿಕಾರಿ, ಉಪ ವಲಯ ಅರಣ್ಯ ಅಧಿಕಾರಿ, ಮೋಜಣಿದಾರರು, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ ಕಾರ್ಯಕಾರಿ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಯನ್ನು ನಿಯಮಿತವಾಗಿ ನಡೆಸುತ್ತದೆ.