ವಿಭಾಗದ ಮುಖ್ಯಸ್ಥರು

ಡಾ. ಬಸವರಾಜ ಕೆ ಎನ್ ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಾಸನ ವಿಭಾಗ, ಹಾಸನ.
08172268296
dcfhassan@yahoo.in

ವಿಭಾಗದ ಬಗ್ಗೆ

ಹಾಸನ ಅರಣ್ಯ ವಿಭಾಗ ಕರ್ನಾಟಕದ ಪಶ್ಚಿಮ ವಲಯದಲ್ಲಿದೆ. ಹಾಸನ ವಿಭಾಗದ ಗಡಿಗಳು ಹಾಸನ ಜಿಲ್ಲೆಯ ಗಡಿಗಳೇ ಆಗಿವೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 88,060 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ ವಿಸ್ತಾರದ (6,814 ಚ.ಕಿ.ಮೀ.) ಸುಮಾರು 12.92 ರಷ್ಟಿದೆ. ಹಾಸನ ವಿಭಾಗ, ಹಾಸನ, ಸಕಲೇಶಪುರ ಮತ್ತು ಚನ್ನರಾಯಪಟ್ಟಣ ಎನ್ನುವ ಮೂರು ಉಪ-ವಿಭಾಗಗಳನ್ನು ಹೊಂದಿದೆ ಹಾಗೂ ಆಲೂರು, ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣ, ಹಾಸನ, ಹೊಳೇನರಸೀಪುರ, ಸಕಲೇಶಪುರ ಮತ್ತು ಯಳಸೂರು ಈ ಒಂಭತ್ತು ವಲಯಗಳಿವೆ. ಸಕಲೇಶಪುರ ಮತ್ತು ಯಳಸೂರು ವಲಯಗಳು ಅಲ್ಲಲ್ಲಿ ತೇವಾಂಶಭರಿತ ಎಲೆಯುದುರುವ ಕಾಡುಗಳೊಂದಿಗೆ ಮೂಲತಃ ನಿತ್ಯ ಹಸಿರು ಮತ್ತು ಅರೆನಿತ್ಯಹಸಿರು ಕಾಡುಗಳನ್ನು ಹೊಂದಿವೆ. ಎತ್ತರದ ಪ್ರದೇಶಗಳಲ್ಲಿ (1000 ಮೀ.ಗಿಂತ ಎತ್ತರದ) ಹುಲ್ಲುಗಾವಲಿನಿಂದ ಆವೃತವಾಗಿರುವ ಶೋಲಾ ಕಾಡುಗಳಿವೆ. ಈ ಎರಡು ವಲಯಗಳ ಅರೆ ನಿತ್ಯಹಸಿರು/ ತೇವಾಂಶ ಭರಿತ ಎಲೆಯುದುರುವ ಕಾಡು ಪ್ರದೇಶಗಳಲ್ಲಿ ವ್ಯಾಪಕವಾದ ಕಾಫಿ ತೋಟಗಳಿವೆ. ವಿಭಾಗದ ಉಳಿದ ಅರಣ್ಯ ಪ್ರದೇಶಗಳಲ್ಲಿ ಪ್ರಾಥಮಿಕವಾಗಿ ಒಣ ಎಲೆಯುದುರುವ ಮತ್ತು ಕುರುಚಲು ಕಾಡುಗಳಿವೆ.

ಹಾಸನ ವಿಭಾಗ

--%>

ಉಪ ವಿಭಾಗಗಳು