ವಿಭಾಗದ ಮುಖ್ಯಸ್ಥರು

ಶ್ರೀ. ಶಿವಶಂಕರ್ .ಇ ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಅರಣ್ಯ ಕಚೇರಿ, ಕೆ.ಎನ್.ಎಸ್. ಪೋಸ್ಟ್, ಬಂಗಾರಪೇಟೆ ರಸ್ತೆ, ಕೋಲಾರ 563101
08152297008
dcfkolar@rediffmail.com

ವಿಭಾಗದ ಬಗ್ಗೆ

ಕೋಲಾರ ವಿಭಾಗ ಕರ್ನಾಟಕ ರಾಜ್ಯದ ಆಗ್ನೇಯ ಭಾಗದಲ್ಲಿದೆ. ಕೋಲಾರ ವಿಭಾಗದ ಗಡಿಗಳು ಕೋಲಾರ ಜಿಲ್ಲೆಯ ಗಡಿಗಳೇ ಆಗಿವೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 50,834 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಸುಮಾರು 12.80 ಭೌಗೋಳಿಕ ಪ್ರದೇಶದ ವಿಸ್ತಾರವಾಗಿದೆ (3,969 ಚ.ಕಿ.ಮೀ).. ಇದರಲ್ಲಿ ಕೋಲಾರ ಮತ್ತು ಬಂಗಾರಪೇಟೆ ಎರಡು ಉಪವಿಭಾಗಗಳಿವೆ ಮತ್ತು ಕೋಲಾರ, ಮಾಲೂರು, ಬಂಗಾರಪೇಟೆ, ಮುಳಬಾಗಿಲು ಮತ್ತು ಶ್ರೀನಿವಾಸಪುರ ಈ ಐದು ವಲಯಗಳಿವೆ. ಕೋಲಾರ ವಿಭಾಗ ಒಣ ಎಲೆಯುದುರುವ ಮತ್ತು ಕುರುಚಲು ಮಾದರಿಯ ಅರಣ್ಯಗಳನ್ನು ಹೊಂದಿದ್ದು, ಚಿಗರೆ, ಆಲೆ, ಬೆಕ್ಕೆ, ಕಕ್ಕೆ, ಕಗಳಿ, ಲಂಟಾನಾ, ಬಂದರಿಕೆ, ನವಿಲಾದಿ, ದಿಂಡಗ, ಶ್ರೀಗಂಧ, ಬೇವು, ಹೊಂಗೆ, ಮತ್ತಿ, ಬಿದಿರು ಮತ್ತು ವಿವಿಧ ಬಗೆಯ ಹುಲ್ಲು ಮುಂತಾದ ಪ್ರಭೇದಗಳಿವೆ. ವಿಭಜನೆಯಾದ ಪ್ರದೇಶಗಳಲ್ಲಿ ಕೃಷ್ಣಮೃಗ ಮತ್ತು ಚುಕ್ಕೆ ಜಿಂಕೆಗಳು ಬಹಳಷ್ಟು ಸಂಖ್ಯೆಯಲ್ಲಿ ಕಂಡುಬರುತ್ತವೆ, ಇಲ್ಲಿ ಕಾಡು ಬಹಳ ಕಡಿಮೆ ಪ್ರಮಾಣದಲ್ಲಿದೆ. ಬೆಟ್ಟಗಳ ಇಳಿಜಾರು ಮತ್ತು ಕಣಿವೆಗಳಲ್ಲಿ, ಚಿರತೆ, ಜೇನು ಕರಡಿ ಮತ್ತು ಅನೇಕ ಜಾತಿಯ ಸರೀಸೃಪಗಳು ಕಂಡುಬರುತ್ತವೆ, ಇಲ್ಲಿ ನಾಗರಹಾವು ಸಾಮಾನ್ಯವಾಗಿದೆ. ಕೋಲಾರ ವಿಭಾದ ಒಂದು ವನ್ಯಜೀವಿ ಅಭಯಾರಣ್ಯವನ್ನು ಹೊಂದಿದ್ದು, ಇದಕ್ಕೆ ಕಾಮಸಮುದ್ರ ವನ್ಯಜೀವಿ ಅಭಯಾರಣ್ಯ ಎಂದು ಹೆಸರಿಡಲಾಗಿದೆ.

ಕೋಲಾರ ವಿಭಾಗದ ನಕ್ಷೆ

--%>

ಉಪ ವಿಭಾಗಗಳು