ಅರಣ್ಯ ಭೂಮಿಯಿಂದ ಖನಿಜದ ಅದಿರು ಬಿಡುಗಡೆ ಮಾಡುವ ಪ್ರಕ್ರಿಯೆ ಮತ್ತು ಅಂಥ ಅದಿರುಗಳನ್ನು ಸಾಗಿಸುವ ವಾಹನಗಳಿಗೆ ಸಾಗಾಟ ಪರವಾನಗಿ ಜಾರಿ ಮಾಡುವುದನ್ನು 2012ರಿಂದ ಅರಣ್ಯ ಉತ್ಪನ್ನ ಟ್ರ್ಯಾಕಿಂಗ್ ವ್ಯವಸ್ಥೆ (ಎಫ್‌ಪಿಟಿಎಸ್‌) ಮೂಲಕ ನಿಯಂತ್ರಣ ಮಾಡಲಾಗುತ್ತಿದೆ ಮತ್ತು ನಿಗಾ ವಹಿಸಲಾಗುತ್ತಿದೆ. ಈ ಆನ್‌ಲೈನ್‌ ವ್ಯವಸ್ಥೆ ದೇಶದಲ್ಲೇ ಈ ರೀತಿಯ ಮೊದಲ ವ್ಯವಸ್ಥೆಯಾಗಿದೆ ಮತ್ತು ಪ್ರಸ್ತುತ ಗಣಿ ಮತ್ತು ಭೂಗರ್ಭಶಾಸ್ತ್ರ ಇಲಾಖೆಯ “ಏಕೀಕೃತ ಗುತ್ತಿಗೆ ನಿರ್ವಹಣಾ ವ್ಯವಸ್ಥೆ” ಮೂಲಕ ಸಂಯೋಜಿತಗೊಂಡಿದೆ. ಈ ಏಕೀಕೃತ ವ್ಯವಸ್ಥೆ ಗುತ್ತಿಗೆದಾರ ಮತ್ತು ಖರೀದಿದಾರರಿಗೆ ಡಿಎಂಜಿಯ ಅನೇಕ ಪರವಾನಗಿಗಳಿಗೆ ಅರ್ಜಿ ಸಲ್ಲಿಸಲು ಮತ್ತು ಅದಕ್ಕೆ ಸಂಬಂಧಿಸಿದ ಅರಣ್ಯ ಇಲಾಖೆಯ ಬಿಡುಗಡೆ ಆದೇಶಗಳಿಗಾಗಿ ಒಂದೇ ವೇದಿಕೆಯನ್ನು ಕಲ್ಪಿಸುತ್ತದೆ.ಅಗತ್ಯ ಅನುಮೋದನೆಗಳ ಬಳಿಕ ಡಿಎಂಜಿ ಮತ್ತು ಕೆಎಫ್‌ಡಿ ಎರಡರ ಡೇಟಾದೊಂದಿಗೆ “ಏಕೀಕೃತ ಸಾಗಾಟ ಪರವಾನಗಿಗಳು” ಸಿಸ್ಟಮ್‌ ಮೂಲಕ ಸಿದ್ಧಗೊಳ್ಳುತ್ತವೆ. ಏಕೀಕೃತ ವ್ಯವಸ್ಥೆ ಈ ಕೆಳಗಿನ ಗೊಂದಲ ರಹಿತ ಸೇವೆಗಳನ್ನು ಪಡೆಯಲು ಬಳಕೆದಾರರಿಗೆ ಅನುಕೂಲ ಕಲ್ಪಿಸುವ ವೈಶಿಷ್ಟ್ಯಗಳನ್ನು ಹೊಂದಿದೆ, • ಕೆಎಫ್‌ಡಿ ಮತ್ತು ಡಿಎಂಜಿಯ ಸಾಗಾಟ ಪರವಾನಗಿಗಳನ್ನು ಪಡೆಯಲು ಏಕಗವಾಕ್ಷಿ ವೇದಿಕೆ. • ಏಕಕಾಲಕ್ಕೆ ಅನೇಕ ಪರವಾನಗಿಗಳ ತಿದ್ದುಪಡಿ ಮತ್ತು ಬಿಡುಗಡೆ ಆದೇಶಗಳಿಗಾಗಿ ಆನ್‌ಲೈನ್‌ ಅರ್ಜಿ. • ಏಕೀಕೃತ ಸಾಗಾಟ ಪರವಾನಗಿಗಳ ಲಾಕಿಂಗ್‌, ಅನ್‌ಲಾಕಿಂಗ್‌ ಮತ್ತು ಸರೆಂಡರ್‌ಗೆ ಆನ್‌ಲೈನ್‌ ವ್ಯವಸ್ಥೆ. • ಬೆರಳ ತುದಿಯಲ್ಲಿ ಏಕೀಕೃತ ವರದಿಗಳು. ಎಫ್‌ಪಿಟಿಎಸ್‌ ವ್ಯವಸ್ಥೆ ಕಚೇರಿಗಳಿಗೆ ಅಲೆದಾಡುವುದನ್ನು ಗಣನೀಯವಾಗಿ ಕಡಿಮೆಗೊಳಿಸಿದೆ. 01-04-2019ರಿಂದ ಅಳವಡಿಸಿಕೊಳ್ಳಲಾಗಿರುವ ಏಕೀಕೃತ ವ್ಯವಸ್ಥೆಯನ್ನು ಖರೀದಿದಾರರು, ಗುತ್ತಿಗೆದಾರರು, ಇಲಾಖೆ ಬಳಕೆದಾರರು ದೈನಂದಿನ ಆಧಾರದಲ್ಲಿ ಬಳಸುತ್ತಿದ್ದಾರೆ. ಈ ಸಿಸ್ಟಮ್‌ ಮೂಲಕ ಸರಾಸರಿ 5000 ಏಕೀಕೃತ ಸಾಗಾಟ ಪರವಾನಗಿಗಳನ್ನು ಸೃಷ್ಟಿಸಲಾಗುತ್ತಿದೆ.ಈ ಸಿಸ್ಟಮ್‌ನಡಿ ವ್ಯವಹಾರ ನಡೆಸಲು, ಇಲ್ಲಿ ಲಾಗಿನ್ ಮಾಡಿ.


ಸಿಸ್ಟಮ್ ಅನ್ನು ಪ್ರವೇಶಿಸಲು ಮತ್ತು ಲಾಗಿನ್ ಮಾಡಲು, ಇನ್ನಷ್ಟು ತಿಳಿಯಿರಿ >>