ದೂರದೃಷ್ಟಿ
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ.