A- A A+
(ಇಲ್ಲಿ ಕ್ಲಿಕ್‌ ಮಾಡಿರಿ) ಮಾನವ - ಆನೆ ಸಂಘರ್ಷ ನಿರ್ವಹಣೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ- 2024 ಅಪೆಕ್ಸ್‌ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD dated: 06/07-06-2024 ಗೆ ಪೂರಕ ಅಧಿಸೂಚನೆ [II] ದಿನಾಂಕ: 08-07-2024 ಅಪೆಕ್ಸ್‌ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ: KFD/HOFF/B9(MSC)/1/2020-PnR-KFD dated: 06/07-06-2024 & ಪೂರಕ ಅಧಿಸೂಚನೆ ದಿನಾಂಕ: 02-07-2024 ರನ್ವಯ ಜರಗುವ ಸಾಮಾನ್ಯ ವರ್ಗಾವಣೆಯ ತಾತ್ಕಾಲಿಕ ವೇಳಾಪಟ್ಟಿ ಮತ್ತು ಇತರೆ ಪ್ರಮುಖ ಸೂಚನೆಗಳು.- ಪರಿಷ್ಕೃತ ಪಟ್ಟಿ- ದಿನಾಂಕ: 05-07-2024 ರಂತೆ 2024-25 ನೇ ಸಾಲಿನ ಸಾಮಾನ್ಯ ವರ್ಗಾವಣೆ/ಸ್ಥಳ ನಿಯುಕ್ತಿಗಾಗಿ ಜರುಗಿದ ಸಮಾಲೋಚನೆಯಲ್ಲಿ ಜಾರಿ ಮಾಡಲಾದ ಆದೇಶ/ಹಿಂಬರಹಗಳನ್ನು ವೀಕs್ಷಿಸಲು ಇಲ್ಲಿ ಕ್ಲಿಕ್‌ ಮಾಡಿರಿ
(ಇಲ್ಲಿ ಕ್ಲಿಕ್‌ ಮಾಡಿರಿ) ಮಾನವ - ಆನೆ ಸಂಘರ್ಷ ನಿರ್ವಹಣೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ- 2024

ಪ್ರಶಸ್ತಿಗಳು

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ತೋರಿಸಿದ ಅಪ್ರತಿಮ ಶೌರ್ಯ, ಸಮರ್ಪಣೆ ಮತ್ತು ಮಾಡಿದ ಬಲಿದಾನಗಳಿಗಾಗಿ ಕರ್ನಾಟಕ ಅರಣ್ಯ ಇಲಾಖೆಯ ಹಲವು ಅರಣ್ಯ ಅಧಿಕಾರಿಗಳು ಮತ್ತು ಮುಂಚೂಣಿ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವುಗಳಲ್ಲಿ ಕೆಲವು ಪ್ರಶಸ್ತಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಕೆಲವನ್ನು ಖಾಸಗಿ ಟ್ರಸ್ಟ್ ಗಳು ಅಥವಾ ಸರ್ಕಾರೇತರ ಸಂಸ್ಥೆಗಳು ಸಹ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುತ್ತವೆ. ಈ ವಿಭಾಗದಲ್ಲಿ ಅರಣ್ಯ ಅಧಿಕಾರಿಗಳು/ ಸಿಬ್ಬಂದಿಗಳು ಪಡೆದ ಕೆಲವು ಪ್ರಮುಖ ಪ್ರಶಸ್ತಿಗಳ ವಿವರ ಈ ಕೆಳಗಿನಂತೆ ನೀಡಲಾಗಿದೆ.

ಕ್ರೀಡಾ ಪದಕಗಳು

ತಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಲು ಅರಣ್ಯ ಅಧಿಕಾರಿಗಳು ಮತ್ತು ಕ್ಷೇತ್ರ ಸಿಬ್ಬಂದಿಗಳು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರಬೇಕು. ಆದ್ದರಿಂದ ಕರ್ನಾಟಕ ಅರಣ್ಯ ಇಲಾಖೆ ತನ್ನ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ಪ್ರೋತ್ಸಾಹಿಸುತ್ತದೆ. ಕ್ರೀಡಾಪಟುತ್ವವನ್ನು ಬೆಳೆಸಲು ಹಾಗೂ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ದೈಹಿಕವಾಗಿ ಸದೃಡವಾಗಿರುವಂತೆ ಪ್ರೇರೇಪಿಸಲು ರಾಷ್ಟ್ರೀಯ ಮಟ್ಟದಲ್ಲಿ,ವಾರ್ಷಿಕ ಕ್ರೀಡಾ ಕೂಟ ಆಯೋಜಿಸಲಾಗುತ್ತದೆ. ಎಲ್ಲ ರಾಜ್ಯಗಳ ಅರಣ್ಯ ಇಲಾಖೆಗಳು, ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿ (ಇಂ.ರಾ.ಅ.ಅ.), ಅರಣ್ಯೀಕರಣ ಸಂಶೋಧನೆ ಮತ್ತು ಶಿಕ್ಷಣದ ಭಾರತೀಯ ಪರಿಷತ್ (ಅ.ಸಂ.ಶಿ.ಭಾ.ಪ.), ರಾಜ್ಯ ಅರಣ್ಯ ಸೇವೆ ಅಕಾಡೆಮಿ ಮುಂತಾದ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಡಿ ಇರುವ ಸಂಸ್ಥೆಗಳು ರಾಷ್ಟ್ರೀಯ ಅರಣ್ಯ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುತ್ತವೆ. ರಾಷ್ಟ್ರೀಯ ಅರಣ್ಯ ಕ್ರೀಡಾ ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವವರಲ್ಲಿ ಕರ್ನಾಟಕ ಕೂಡ ಒಂದು. 2019-20ನೇ ಸಾಲಿನಲ್ಲಿ ಕರ್ನಾಟಕ 52 ಚಿನ್ನ 34 ಬೆಳ್ಳಿ, 42 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ 2nd ಸ್ಥಾನ ಗಳಿಸಿಕೊಂಡಿತು.ಆ ವರ್ಷ ಅಧಿಕಾರಿಗಳು ಮತ್ತು ಸಿಬ್ಬಂದಿಗಳಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವ ಸಲುವಾಗಿ ವೃತ್ತ ಮಟ್ಟದಲ್ಲಿಯೂ ಕ್ರೀಡಾ ಕೂಟ ಆಯೋಜಿಸಲಾಗುತ್ತದೆ
ಕೀರ್ತಿ ಚಕ್ರ ಪ್ರಶಸ್ತಿ
ಮುಖ್ಯ ಮಂತ್ರಿ ಪ್ರಶಸ್ತಿ
ಕ್ರೀಡಾ ಪದಕಗಳು
ಎಲಿಫೆಂಟ್ ವಾರಿಯರ್ ಪ್ರಶಸ್ತಿ
ಇತರೆ ಸಾಧನೆಗಳು