ಈ ತರಬೇತಿ ಕೇಂದ್ರವನ್ನು 14.11.2007 ರಂದು ಆರಂಭಿಸಲಾಯಿತು ಮತ್ತು 27/12/2007 ರಂದು ಅಧಿಕೃತವಾಗಿ ಉದ್ಘಾಟಿಸಲಾಯಿತು. ತರಬೇತಿ ಕೇಂದ್ರ ಮೈಸೂರು ನಗರದಿಂದ 15 ಕಿ.ಮೀ. ದೂರದಲ್ಲಿದೆ ಮತ್ತು 565 ಎಕರೆ ವಿಸ್ತಾರದ ಇಲವಾಲ ಅರಣ್ಯದಲ್ಲಿದೆ. ತರಬೇತಿ ಕೇಂದ್ರದ ಕ್ಯಾಂಪಸ್ ‘ಅಲೋಕ ಅರಮನೆ’ ಎನ್ನುವ ಪಾರಂಪರಿಕ ಕಟ್ಟಡವನ್ನು ಹೊಂದಿದೆ. ಇದು ಮೂರನೇ ಕೃಷ್ಣ ರಾಜ ವಡೆಯರ್ ಅವಧಿಯಲ್ಲಿ ನಿರ್ಮಿಸಲಾದ ಅಂಥ ಅನೇಕ ಪಾರಂಪರಿಕ ಕಟ್ಟಡಗಳ ಪೈಕಿ ಒಂದಾಗಿದೆ. ಬ್ರಿಟಿಷ್ ಅವಧಿಯಲ್ಲಿ, ಈ ವಿಶಾಲವಾದ ಕಟ್ಟಡ ರೆಸಿಡೆನ್ಸಿ ಬಂಗಲೆಯಾಗಿತ್ತು. ಈ ತರಬೇತಿ ಕೇಂದ್ರ ಆಡಳಿತ ಬ್ಲಾಕ್, ಎರಡು ಹಾಸ್ಟೆಲ್ ಗಳು, ಎರಡು ಸುಸಜ್ಜಿತ ಆಧುನಿಕ ತರಗತಿ ಕೋಣೆಗಳು, ಎರಡು ಮೆಸ್ ಹಾಲ್ ಗಳು, ಗ್ರಂಥಾಲಯ, ಬಹು ಉದ್ದೇಶದ ಕಟ್ಟಡ, ಜಿಮ್, ಎರಡು ಕಂಪ್ಯೂಟರ್ ಲ್ಯಾಬೊರೇಟರಿಗಳು ಮತ್ತು ಆಟದ ಮೈದಾನದಂಥ ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ. ಈ ಕೇಂದ್ರ ಈವರೆಗೆ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು ಕಮ್ ಮೋಜಣಿದಾರರ ಎರಡು ಬ್ಯಾಚ್ ಗಳು, ಅರಣ್ಯ ರಕ್ಷಕರ 9 ಬ್ಯಾಚ್ ಗಳು ಮತ್ತು ಅರಣ್ಯ ವೀಕ್ಷಕರ 2 ಬ್ಯಾಚ್ ಗಳಿಗೆ ತರಬೇತಿ ನೀಡಿದೆ. ಈವರೆಗೆ 667 ಪರೀಕ್ಷಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಸಚಿವಾಲಯ ಸಿಬ್ಬಂದಿ ಮತ್ತು ಮುಂಚೂಣಿ ಸಿಬ್ಬಂದಿಗೆ ಈವರೆಗೆ 27 ಮರುಮನನ ತರಬೇತಿಯನ್ನೂ ನಡೆಸಲಾಗಿದ್ದು, ಒಟ್ಟು 966 ಕರ್ತವ್ಯ ನಿರತ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪ್ರಸ್ತುತ, ಜೂನ್ 2019 ರಿಂದ 91 ಉಪ ವಲಯ ಅರಣ್ಯ ಅಧಿಕಾರಿಗಳು ಮತ್ತು ಮೋಜಣಿದಾರ ಪರೀಕ್ಷಾರ್ಥಿಗಳು ನೇಮಕಾತಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಅರಣ್ಯ ತರಬೇತಿ ಕೇಂದ್ರಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮುಖ್ಯಸ್ಥರಾಗಿದ್ದಾರೆ ಮತ್ತು 3 ವಲಯ ಅರಣ್ಯ ಅಧಿಕಾರಿಗಳು, 2 ಉಪ ವಲಯ ಅರಣ್ಯ ಅಧಿಕಾರಿಗಳು ಮತ್ತು ಅದರ ಆಡಳಿತಕ್ಕಾಗಿ ಸಚಿವಾಲಯದ ಸಿಬ್ಬಂದಿ ನೆರವು ನೀಡುತ್ತಿದ್ದಾರೆ.

ಸೌಲಭ್ಯಗಳು

ಜೆಂಟ್ಸ್ ಹಾಸ್ಟೆಲ್

ಸ್ಥಳ

ಸಂಪರ್ಕ ವಿವರಗಳು
 • ಶ್ರೀ. ವೆಂಕಟೆ ಗೌಡ  
  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು
 •   ಅರಣ್ಯ ತರಬೇತಿ ಕೇಂದ್ರ, ಎಲವಾಳ, ಮೈಸೂರು
 •   acfilawala@yahoo.com
 •   8212970564
 • ಶ್ರೀಮತಿ.  
  ವಲಯ ಅರಣ್ಯಾಧಿಕಾರಿಗಳು
 •   ಅರಣ್ಯ ತರಬೇತಿ ಕೇಂದ್ರ, ಎಲವಾಳ, ಮೈಸೂರು
 •   acfilawala@yahoo.com
 •   8212970564
 • ಶ್ರೀಮತಿ. ನಿವೇದಿತಾ ಎಂ  
  ವಲಯ ಅರಣ್ಯಾಧಿಕಾರಿಗಳು
 •   ಅರಣ್ಯ ತರಬೇತಿ ಕೇಂದ್ರ, ಎಲವಾಳ, ಮೈಸೂರು
 •   acfilawala@yahoo.com
 •   8212970564
 • ಶ್ರೀ. ಜಿ ರವೀಂದ್ರ  
  ವಲಯ ಅರಣ್ಯಾಧಿಕಾರಿಗಳು
 •   ಅರಣ್ಯ ತರಬೇತಿ ಕೇಂದ್ರ, ಎಲವಾಳ, ಮೈಸೂರು
 •   acfilawala@yahoo.com
 •   8212970564
 • ಶ್ರೀ. ಮಹೇಶ್ ಬಿ ಸಿ  
  ಉಪ ವಲಯ ಅರಣ್ಯಾಧಿಕಾರಿಗಳು
 •   ಅರಣ್ಯ ತರಬೇತಿ ಕೇಂದ್ರ, ಎಲವಾಳ, ಮೈಸೂರು
 •   acfilawala@yahoo.com
 •   8212970564