ವಿಭಾಗದ ಮುಖ್ಯಸ್ಥರು

ಶ್ರೀ. ಡಿ. ಮಹೇಶ್‌ ಕುಮಾರ್ ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು
ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ, ಫಾರೆಸ್ಟ್ ಕ್ಯಾಂಪಸ್, ಹುಣಸೂರು - 571105
08222252041
dirnagarahole@aranya.gov.in

ವಿಭಾಗದ ಬಗ್ಗೆ

ನಾಗರಹೊಳೆ ಹುಲಿ ಮೀಸಲು ಪ್ರದೇಶ ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಇದೆ. ಈ ಮೀಸಲು ಪ್ರದೇಶದ ಸಂರಕ್ಷಿತ ಪ್ರದೇಶ ಸ್ಥಾನಮಾನ ಮೈಸೂರು ರಾಜ್ಯದ ಹಿಂದಿನ ರಾಜರುಗಳಾದ ಒಡೆಯರ್‌ ರಾಜವಂಶದಷ್ಟು ಹಿಂದಿನದು. ಆಗ ಇದು ರಾಜರುಗಳಿಗೆ ಮಾತ್ರ ಸೀಮಿತವಾಗಿದ್ದ ಬೇಟೆ ಸ್ಥಳವಾಗಿತ್ತು. ಇದನ್ನು 1955ರಲ್ಲಿ 284.16 ಚ.ಕಿ.ಮೀ. ಪ್ರದೇಶದ ಕೊಡಗು ಜಿಲ್ಲೆ ಒಳಗೊಂಡು ವನ್ಯಜೀವಿ ಅಭಯಾರಣ್ಯ ಎಂದು ರಚಿಸಲಾಯಿತು. ನಂತರ ಇದನ್ನು 643.39 ಚ.ಕಿ.ಮೀ. ವ್ಯಾಪ್ತಿಗೆ ವಿಸ್ತರಿಸಲಾಯಿತು. ಇದನ್ನು 1988ರಲ್ಲಿ ರಾಷ್ಟ್ರೀಯ ಉದ್ಯಾನವಾಗಿ ಮೇಲ್ದರ್ಜೆಗೇರಿಸಲಾಯಿತು, ಮತ್ತು 1999ರಲ್ಲಿ ಹುಲಿ ಮೀಸಲು ಪ್ರದೇಶ ಎಂದು ಘೋಷಿಸಿ ಹುಲಿ ಯೋಜನೆಯಡಿ ತರಲಾಯಿತು. ನಾಗರಹೊಳೆ ಹುಲಿ ಮೀಸಲು ಪ್ರದೇಶಕ್ಕೆ ಅರಣ್ಯ ಸಂರಕ್ಷಣಾಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ. ಹುಲಿ ಮೀಸಲು ಪ್ರದೇಶ ಹುಣಸೂರು, ನಾಗರಹೊಳೆ ಮತ್ತು ಮೆಟಿಕುಪ್ಪೆ ಮೂರು ಉಪ ವಿಭಾಗಗಳನ್ನು ಹೊಂದಿದೆ, ಮತ್ತು ಆನೆಚೌಕೂರು, ಅಂತರಸಂತೆ, ಡಿ.ಬಿ. ಕುಪ್ಪೆ, ಕಲ್ಲಹಳ್ಳ, ಮೆಟಿಕುಪ್ಪೆ, ನಾಗರಹೊಳೆ, ಹುಣಸೂರು, ವೀರಹೊಸಹಳ್ಳಿ ಈ ಎಂಟು ವಲಯಗಳನ್ನು ಹೊಂದಿದೆ.

ನಾಗರಹೊಳೆ ವನ್ಯ ಜೀವಿ ವಿಭಾಗದ ನಕ್ಷ

ಟೆಂಡರ್‌ಗಳು

ಸುದ್ದಿ ಮತ್ತು ನವೀಕರಣಗಳು