ವಿಭಾಗದ ಮುಖ್ಯಸ್ಥರು

ಶ್ರೀ. ಸಿವಸಂಕರ ಎಸ್ ಭಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಇ.ಬಿ. ರಸ್, ಐ.ಎಂ.ಎ. ಹಾಲ್ ಎದುರು,ಬೀದರ್ - 585 401
08482226358
dcfbdr@aranya.gov.in

ವಿಭಾಗದ ಬಗ್ಗೆ

ಬೀದರ್ ಅರಣ್ಯ ವಿಭಾಗ ಕರ್ನಾಟಕ ರಾಜ್ಯದ ಉತ್ತರದ ತುದಿಯಲ್ಲಿದೆ. ಈ ವಿಭಾಗದ ಗಡಿಗಳು ಬೀದರ ಜಿಲ್ಲೆಯ ಗಡಿಗಳೇ ಆಗಿವೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 45,616 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ ವಿಸ್ತಾರದ (5,448 ಚ.ಕಿ.ಮೀ.) ಸುಮಾರು 8.37 ರಷ್ಟಿದೆ. ಬೀದರ ವಿಭಾಗದಲ್ಲಿ ಬೀದರ ಮತ್ತು ಬಸವಕಲ್ಯಾಣ ಈ ಎರಡು ಉಪ ವಿಭಾಗಗಳಿವೆ, ಮತ್ತು ಬೀದರ, ಭಾಲ್ಕಿ, ಔರಾದ್, ಹುಮ್ನಾಬಾದ್ ಮತ್ತು ಬಸವಕಲ್ಯಾಣ ಈ ಐದು ವಲಯಗಳನ್ನು ಒಳಗೊಂಡಿದೆ. ಬೀದರ ವಿಭಾಗದ ಅರಣ್ಯಗಳು ಮುಖ್ಯವಾಗಿ ಕುರುಚಲು ಕಾಡುಗಳಾಗಿದ್ದು, ಉತ್ತಮ ಮಣ್ಣಿನ ಸಾರ ಮತ್ತು ತೇವಾಂಶ ಇರುವ ಅನುಕೂಲಕರ ಸ್ಥಳಗಳಲ್ಲಿ ಅಲ್ಲಲ್ಲಿ ಒಣ ಮಿಶ್ರ ಎಲೆಯುದುರುವ ಅರಣ್ಯಗಳು ಕಂಡುಬರುತ್ತವೆ. ಒಣ ಮಿಶ್ರ ಎಲೆಯುದುರುವ ಕಾಡುಗಳ ಸಾಕಷ್ಟು ಉತ್ತಮ ಭಾಗಗಳು ಬೀದರ, ಹುಮ್ನಾಬಾದ್ ಮತ್ತು ಬಸವಕಲ್ಯಾಣ ವಲಯಗಳಲ್ಲಿ ಕಂಡುಬರುತ್ತವೆ. ಚೆಂಗ್ಲೇರ್, ಕರ್ಪಕಪಲ್ಲಿ ಮತ್ತು ಕರಕನಲ್ಲಿ ಪ್ರದೇಶಗಳಲ್ಲಿ ಒಂದಿಷ್ಟು ತೇಗದ ಮರಗಳಿರುವ ಒಣ ಎಲೆಯುದುರುವ ಅರಣ್ಯಗಳು ಕಂಡುಬರುತ್ತವೆ.

ಬೀದರ್ ವಿಭಾಗದ ನಕ್ಷೆ

--%>

ಉಪ ವಿಭಾಗಗಳು