ವಿಭಾಗದ ಮುಖ್ಯಸ್ಥರು

ವಿಭಾಗದ ಬಗ್ಗೆ

ಚಿತ್ರದುರ್ಗ ಅರಣ್ಯ ವಿಭಾಗ ಕರ್ನಾಟಕದ ಪೂರ್ವ ಬಯಲಿನ ಕೇಂದ್ರ ಭಾಗದಲ್ಲಿದೆ ಮತ್ತು ಇದರ ಗಡಿಗಳು ಚಿತ್ರದುರ್ಗ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿವೆ. ಈ ವಿಭಾಗದಲ್ಲಿ ದಾಖಲಿಸಿರುವ ಸುಮಾರು 1,28,718 ಹೆಕ್ಟೇರ್‌ ಅರಣ್ಯ ಪ್ರದೇಶವಿದ್ದು, ಇದು ಇದರ ಭೌಗೋಳಿಕ ವಿಸ್ತಾರದ (8,440 ಚ.ಕಿ.ಮೀ. ) ಸುಮಾರು 15.25 ರಷ್ಟು ಪಾಲು ಹೊಂದಿದೆ. ಈ ವಿಭಾಗ ಎರಡು ಉಪ ವಿಭಾಗಗಳನ್ನು ಹೊಂದಿದೆ, ಅವು ಚಿತ್ರದುರ್ಗ ಮತ್ತು ಹಿರಿಯೂರು ಉಪ ವಿಭಾಗಗಳಾಗಿವೆ, ಮತ್ತು ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಳಲಕೆರೆ, ಹೊಸದುರ್ಗ ಮತ್ತು ಮೊಳಕಾಲ್ಮೂರು ಈ ಆರು ವಲಯಗಳನ್ನು ಹೊಂದಿದೆ. ಇಲ್ಲಿ ಒಟ್ಟು 16 ಸೆಕ್ಷನ್‌ಗಳು ಮತ್ತು 51 ಬೀಟ್‌ಗಳಿದ್ದು, ಇವುಗಳ ರಕ್ಷಣೆ ಮತ್ತು ನಿರ್ವಹಣೆಗೆ ಅನುಕ್ರಮವಾಗಿ ಉಪ ವಲಯ ಅರಣ್ಯ ಅಧಿಕಾರಿ ಮತ್ತು ಅರಣ್ಯ ರಕ್ಷಕರು ಮುಖ್ಯಸ್ಥರಾಗಿರುತ್ತಾರೆ. ಚಿತ್ರದುರ್ಗ ವಿಭಾಗದ ಕಾಡುಗಳು ಒಣ ಮಿಶ್ರ ಎಲೆಯುದುರುವ ಕಾಡುಗಳಿಂದ ಮುಳ್ಳು ಪೊದೆಗಳವರೆಗೆ ವೈವಿಧ್ಯತೆ ಹೊಂದಿವೆ. ಒಣ ಮಿಶ್ರ ಎಲೆಯುದುರುವ ಕಾಡುಗಳು ಹೊಳಲಕೆರೆ, ಹೊಸದುರ್ಗ, ಹಿರಿಯೂರು ಮತ್ತು ಚಿತ್ರದುರ್ಗ ವಲಯಗಳ ಕೆಲವು ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತವೆ. ಅದಾಗ್ಯೂ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ಅರಣ್ಯಗಳ ಜೊತೆ ಈ ಅರಣ್ಯಗಳ ಬಹುತೇಕ ಪ್ರದೇಶಗಳು ಮೂಲತಃ ಕುರುಚಲು ಕಾಡುಗಳಾಗಿದ್ದು, ಅತ್ಯಂತ ಒಣ ಪ್ರದೇಶಗಳಲ್ಲಿ ಮುಳ್ಳುಪೊದೆಗಳನ್ನು ಹೊಂದಿವೆ. ಚಿತ್ರದುರ್ಗ ಪಟ್ಟಣ ಸಮೀಪದ ಜೋಗಿಮಟ್ಟಿ ಅರಣ್ಯ 10,048 ಹೆಕ್ಟೇರ್‌ ವ್ಯಾಪ್ತಿಯ ವನ್ಯಜೀವಿ ಅಭಯಾರಣ್ಯವನ್ನು ಹೊಂದಿದೆ.

ಚಿತ್ರದುರ್ಗ ವಿಭಾಗದ ನಕ್ಷೆ

--%>

ಉಪ ವಿಭಾಗಗಳು