ವಿಭಾಗದ ಮುಖ್ಯಸ್ಥರು

ಶ್ರೀ. ಪ್ರಶಾಂತ ಪಿ ಶಂಖಿನಮಠ, ರಾ.ಅ.ಸೇ.

ಉಪ ಅರಣ್ಯ ಸಂರಕ್ಷಣಾಧಿಕಾರಿ
ಬಾಗಲಕೋಟ ವಿಭಾಗ,ಕೊಠಡಿ ಸಂಖ್ಯೆ 220, ಜಿಲ್ಲಾಡಳಿತ ಭವನ, ನವನಗರ, ಬಾಗಲಕೋಟ-587103
08354235769
dcftbagalkot@gmail.com

ವಿಭಾಗದ ಬಗ್ಗೆ

ಬಾಗಲಕೋಟೆ ಅರಣ್ಯ ವಿಭಾಗ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿದೆ. ಇದರ ಗಡಿಗಳು ಬಾಗಲಕೋಟೆ ಕಂದಾಯ ಜಿಲ್ಲೆಯ ಗಡಿಗಳೇ ಆಗಿವೆ. ವಿಭಾಗದ ಒಟ್ಟು ಅರಣ್ಯ ಪ್ರದೇಶದ ವಿಸ್ತಾರ 83,893 ಹೆಕ್ಟೇರ್‌ಗಳಷ್ಟಿದ್ದು, ಇದು ವೃತ್ತದ ಭೌಗೋಳಿಕ ಪ್ರದೇಶದ ವಿಸ್ತಾರದ (6,575 ಚಕಿಮೀ) ಸುಮಾರು 12.76 ರಷ್ಟಿದೆ. ಈ ವಿಭಾಗ ಆರು ತಾಲೂಕುಗಳಲ್ಲಿ ಹರಡಿಕೊಂಡಿದೆ, ಅವು ಬಾಗಲಕೋಟೆ, ಬಾದಾಮಿ, ಹುನಗುಂದ, ಬೀಳಗಿ, ಮುಧೋಳ ಮತ್ತು ಜಮಖಂಡಿ. ಬಾಗಲಕೋಟೆ ಪಟ್ಟಣ ವಿಭಾಗೀಯ ಮುಖ್ಯಕಚೇರಿಯಾಗಿದೆ. ಈ ವಿಭಾಗದಲ್ಲಿ ಬಾಗಲಕೋಟೆ ಮತ್ತು ಜಮಖಂಡಿ ಈ ಎರಡು ಉಪ ವಿಭಾಗಗಳಿವೆ ಮತ್ತು ಬಾದಾಮಿ, ಬಾಗಲಕೋಟೆ, ಹುನಗುಂದ, ಬೀಳಗಿ, ಜಮಖಂಡಿ ಮತ್ತು ಮುಧೋಳ ಈ ಆರು ವಲಯಗಳಿವೆ. ಈ ವಿಭಾಗ 32 ಸೆಕ್ಷನ್‌ ಮತ್ತು 57 ಬೀಟ್‌ಗಳನ್ನು ಹೊಂದಿದೆ. ಬಾಗಲಕೋಟೆ ವಿಭಾಗದಲ್ಲಿ ಚಿಂಕಾರಾಗಳ (ಇಂಡಿಯನ್ ಗ್ಯಾಜೆಲ್) ಸಂರಕ್ಷಣೆಗಾಗಿ ಬೀಳಗಿ ಮತ್ತು ಮುಧೋಳ ತಾಲೂಕುಗಳ ನಡುವೆ ಯಾದಹಳ್ಳಿ ವನ್ಯಜೀವಿ ಅಭಯಾರಣ್ಯವಿದೆ. ಈ ಅಭಯಾರಣ್ಯ 9,636 ಹೆಕ್ಟೇರ್‌ ಪ್ರದೇಶವನ್ನು ವ್ಯಾಪಿಸಿದೆ.

ಬಾಗಲಕೋಟೆ ವಿಭಾಗದ ನಕ್ಷೆ

--%>

ಉಪ ವಿಭಾಗಗಳು