ವೃತ್ತದ ಮುಖ್ಯಸ್ಥರು

ಶ್ರೀ. ಆರ್. ರವಿಶಂಕರ್ ಭಾ.ಅ.ಸೇ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು
ಶಿವಮೊಗ್ಗ ವೃತ್ತ, ಸ್ಯಾಂಡಲ್ ಕೋಟಿ ಆವರಣ, ಹೊಳ್ಳೆಹೊನ್ನೂರು ರಸ್ತೆ, ವಿದ್ಯಾ ನಗರ, ಶಿವಮೊಗ್ಗ - 577203
08182240385
ccfsmgt@gmail.com

ವೃತ್ತದ ಬಗ್ಗೆ

ಕರ್ನಾಟಕ ರಾಜ್ಯದ ಮಧ್ಯವಲಯದ ಪಶ್ಚಿಮ ಭಾಗದಲ್ಲಿ ಶಿವಮೊಗ್ಗ ವೃತ್ತವಿದೆ. ಇದು ಮೂರು ಪ್ರಾದೇಶಿಕ ವಿಭಾಗಗಳನ್ನು ಒಳಗೊಂಡಿದೆ, ಅವು ಶಿವಮೊಗ್ಗ, ಸಾಗರ ಮತ್ತು ಭದ್ರಾವತಿ ವಿಭಾಗಗಳು, ಮತ್ತು ಒಂದು ವನ್ಯಜೀವಿ ವಿಭಾಗವಾದ ಶಿವಮೊಗ್ಗ ವನ್ಯಜೀವಿ ವಿಭಾಗವನ್ನು ಒಳಗೊಂಡಿದೆ. ಇದರ ಜೊತೆಗೆ, ಶಿವಮೊಗ್ಗ ಸಾ.ಅ. ಎನ್ನುವ ಸಾಮಾಜಿಕ ಅರಣ್ಯೀಕರಣ ವಿಭಾಗವೂ ಇದೆ. ಈ ವೃತ್ತದ ಬಹುತೇಕ ಪ್ರದೇಶಗಳು ಶಿವಮೊಗ್ಗ ಜಿಲ್ಲೆಯವಾಗಿವೆ, ಮತ್ತು ಕೆಲವು ಪ್ರದೇಶಗಳು ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸೇರಿವೆ. ಶಿವಮೊಗ್ಗದ ಅರಣ್ಯ ಸಾಕಷ್ಟು ವೈವಿಧ್ಯತೆಯನ್ನು ಹೊಂದಿದೆ. ನಿತ್ಯ ಹಸಿರು, ಅರೆ ನಿತ್ಯ ಹಸಿರು, ತೇವಾಂಶದ-ಎಲೆ ಉದುರುವ, ಒಣ ಎಲೆ ಉದುರುವ, ಕುರುಚಲು ಕಾಡು ಮುಂತಾದ ವಿವಿಧ ವಿಧಗಳ ಕಾಡುಗಳನ್ನು ಈ ವೃತ್ತದಲ್ಲಿ ಕಾಣಬಹುದು. ವೃತ್ತದ ಪಶ್ಚಿಮ ಭಾಗದಲ್ಲಿ ಅಂದ್ರೆ ಸಾಗರ, ಶಿವಮೊಗ್ಗಗ ಹಾಗೂ ಶಿವಮೊಗ್ಗ ವನ್ಯಜೀವಿ ವಿಭಾಗಗಳಲ್ಲಿ ನಿತ್ಯ ಹಸಿರು ಮತ್ತು ಅರೆನಿತ್ಯಹಸಿರು ಕಾಡುಗಳು ಕಂಡುಬರುತ್ತವೆ. ವೃತ್ತದ ಮಧ್ಯಭಾಗದಲ್ಲಿ ಅಂದರೆ ಸಾಗರ, ಶಿವಮೊಗ್ಗ ಮತ್ತು ಶಿವಮೊಗ್ಗ ವನ್ಯಜೀವಿ ವಿಭಾಗಗಳಲ್ಲಿ ತೇವಾಂಶದಿಂದ ಕೂಡಿದ ಎಲೆಯುದುರುವ ಕಾಡುಗಳು ಇವೆ. ಒಣ ಎಲೆಯುದುರುವ ಕಾಡುಗಳು ವೃತ್ತದ ಪೂರ್ವಭಾಗದ ಶಿವಮೊಗ್ಗ ಮತ್ತು ಭದ್ರಾವತಿ ವಿಭಾಗಗಳಿಗೆ ಸೀಮಿತವಾಗಿವೆ. ಕುರುಚಲು ಕಾಡುಗಳು ಜನವಸತಿ ಪ್ರದೇಶಗಳ ಸಮೀಪದಲ್ಲಿವೆ, ಮತ್ತು ಶಿವಮೊಗ್ಗದ ಪೂರ್ವ ತಾಲೂಕುಗಳು, ಭದ್ರಾವತಿ, ಶಿಕಾರಿಪುರ ಮತ್ತು ಸೊರಬದಲ್ಲಿ ಹೆಚ್ಚು ಪ್ರಧಾನವಾಗಿವೆ.