ಖಾಸಗಿ ಜಮೀನುಗಳಿಂದ ಅರಣ್ಯ ಉತ್ಪನ್ನಗಳ ಸಾಗಾಣಿಕೆಗೆ ಕರ್ನಾಟಕ ಅರಣ್ಯ ಇಲಾಖೆ ಅನುಮತಿ ನೀಡುತ್ತಿದೆ. ಕೆಲವು ಪ್ರದೇಶಗಳಿಗೆ/ ಪ್ರಭೇದಗಳಿಗೆ, ಸಾಗಾಣಿಕೆಗೆ ಅನುಮತಿಗೆ ಅರ್ಜಿ ಸಲ್ಲಿಸುವುದಕ್ಕೆ ಮುನ್ನ ಅರ್ಜಿದಾರ ಮರ ಕಡಿತಲೆಗೆ ಅನುಮತಿ ಪಡೆದುಕೊಳ್ಳಬೇಕು. ಭೂಮಿ ಮತ್ತು ಅರಣ್ಯ ಉತ್ಪನ್ನದ ಮೇಲೆ ಅರ್ಜಿದಾರನ ಹಕ್ಕಿಗೆ ಸಂಬಂಧಿಸಿ ಕಂದಾಯ ಇಲಾಖೆಯಿಂದ ಮಾಹಿತಿ ಪಡೆದುಕೊಂಡ ನಂತರ ಕರ್ನಾಟಕ ಅರಣ್ಯ ಇಲಾಖೆ ಈ ಸಾರ್ವಜನಿಕ ಸೇವೆಯನ್ನು ಒದಗಿಸುತ್ತದೆ. ಅರಣ್ಯ ಅಧಿಕಾರಿಯು ಜಮೀನು ಮತ್ತು ಅರಣ್ಯ ಉತ್ಪನ್ನಗಳ ತಪಾಸಣೆ ಮತ್ತು ಆತನಿಗೆ ಅಗತ್ಯ ಎಂದು ಕಂಡುಬರುವ ವಿಚಾರಣೆಗಳನ್ನು ನಡೆಸಿದ ಬಳಿಕ, ಪೂರ್ಣ ಅಥವಾ ಭಾಗಶಃ ಅನುಮತಿ ನೀಡಬಹುದು ಅಥವಾ ಅನುಮತಿ ನಿರಾಕರಿಸಬಹುದು. ಸಾಗಾಣಿಕೆಗೆ ಅನುಮತಿ ನೀಡಿದ ನಂತರ, ಅರ್ಜಿದಾರ ಸೂಚಿಸಿದ ತಲುಪಿಸಬೇಕಾದ ಸ್ಥಳಕ್ಕೆ ಅರಣ್ಯ ಉತ್ಪನ್ನಗಳನ್ನು ಸಾಗಾಣಿಕೆ ಮಾಡುವುದಕ್ಕೆ ಸದರಿ ಅರಣ್ಯ ವ್ಯಾಪ್ತಿಯ ಉಪ ವಲಯ ಅರಣ್ಯ ಅಧಿಕಾರಿ ಸಾಗಾಣಿಕೆಗೆ ರಹದಾರಿ (ನಮೂನೆ-28) ವಿತರಿಸುತ್ತಾರೆ. ಪ್ರತಿ ಪ್ರಕರಣದಲ್ಲಿ ವಿತರಿಸಲಾಗುವ ಸಾಗಾಣಿಕೆಗೆ ರಹದಾರಿಗಳ ಸಂಖ್ಯೆ, ಅರಣ್ಯ ಉತ್ಪನ್ನದ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ. ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ಮತ್ತು (ತಿದ್ದುಪಡಿ)ಅಧಿನಿಯಮ, 2014ರಡಿ ಸರ್ಕಾರ ಈ ಸೇವೆಯನ್ನು ತಂದಿದೆ. ಮರ ಅಧಿಕಾರಿಯ ನೇಮಕಕ್ಕೆ ಸಂಬಂಧಿಸಿದ ಅಧಿಸೂಚನೆ: ಅಧಿಸೂಚನೆ ಸಂಖ್ಯೆ ಬಿ5/ಕೆಪಿಟಿ/ಸಿಆರ್-60/2014-15 ದಿನಾಂಕ: 03-10-2016.


ಫ್ಲೋಚಾರ್ಟ್ ನೋಡಿ

ಪದೇಪದೆ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ) ನೋಡಿ

 • ಯಾರು ಅರ್ಜಿ ಸಲ್ಲಿಸಬೇಕು

  ಭೂಮಿ ಮತ್ತು ಅರಣ್ಯ ಉತ್ಪನ್ನಗಳ ಮಾಲೀಕತ್ವ ಹೊಂದಿರುವ ವ್ಯಕ್ತಿಗಳು.

 • ಖಾಸಗಿ ಜಮೀನಿನಿಂದ ಅರಣ್ಯ ಉತ್ಪನ್ನಗಳ ಸಾಗಾಣಿಕೆ ಮಾಡುವುದಕ್ಕೆ ಅರ್ಜಿ ಸಲ್ಲಿಸಲು ಯಾವುದಾದರೂ ನಿರ್ದಿಷ್ಟ ನಮೂನೆ ಇದೆಯೇ

  ಹೌದು. ಕರ್ನಾಟಕ ಅರಣ್ಯ ಕೈಪಿಡಿ 1976 (ನಮೂನೆ-31)ರಲ್ಲಿ ಸೂಚಿಸಿರುವ ನಮೂನೆಯಲ್ಲಿ ಅರ್ಜಿದಾರರು ಅರ್ಜಿ ಸಲ್ಲಿಸಬೇಕು.

 • ಸಾಗಾಣಿಕೆ ಮಾಡಲು ವಿನಾಯ್ತಿ ಪಡೆದಿರುವ ಪ್ರಭೇದಗಳು ಯಾವುವು

  ಸಾಗಾಣಿಕೆ ಮಾಡಲು 42 ಪ್ರಭೇದಗಳು ವಿನಾಯ್ತಿ ಪಡೆದಿದೆ. ವಿವರಗಳಿಗಾಗಿ ಕೆಳಗಿನ ಲಿಂ‌ಕ್‌ ನ್ನು ನೋಡಿ . https://aranya.gov.in/downloads/transit exemption.pdf

 • ಸಾಗಾಣಿಕೆ ಮಾಡುಲು ಅನುಮತಿಗಾಗಿ ಭೂಮಿ ಮಾಲೀಕ ಯಾರಿಗೆ ಅರ್ಜಿ ಸಲ್ಲಿಸಬೇಕು

  ಮರ ಅಧಿಕಾರಿಯನ್ನು ನೇಮಕ ಮಾಡುವ ಅಧಿಸೂಚನೆಯಲ್ಲಿ ಸೂಚಿಸಿರುವ ತಾಲ್ಲೂಕಿಗೆ ಸಂಬಂಧಿಸಿದ ಅರಣ್ಯ ಅಧಿಕಾರಿಗೆ ಅರ್ಜಿದಾರ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಮರಮಟ್ಟು ಪ್ರಮಾಣ 5ಘನ ಮೀಟರ್‌ಗಿಂತ ಕಡಿಮೆ ಇದ್ದರೆ ಮತ್ತು ಉರುವಲು ಪ್ರಮಾಣ 30 ಬಂಡಿ ಹೊರೆಗಿಂತ ಕಡಿಮೆ ಇದ್ದರೆ, ಅರ್ಜಿಯನ್ನು ವಲಯ ಅರಣ್ಯ ಅಧಿಕಾರಿಗೆ ಸಲ್ಲಿಸಬೇಕು. ಒಂದು ವೇಳೆ ಪ್ರಮಾಣ ಮೇಲೆ ಹೇಳಿದ್ದಕ್ಕಿಂತ ಹೆಚ್ಚಾಗಿದ್ದರೆ, ಅರ್ಜಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸಲ್ಲಿಸಬೇಕು. ಅಧಿಸೂಚನೆ ಸಂಖ್ಯೆ ಬಿ5/ಕೆಪಿಟಿ/ಸಿಆರ್‌-60/2014-15 ದಿನಾಂಕ: 03-10-2016. ವಿವರಗಳಿಗಾಗಿ ಕೆಳಗಿನ ಲಿಂ‌ಕ್‌ ನ್ನು ನೋಡಿ. https://aranya.gov.in/downloads/Oppointing of tree officer Eng.pdf

 • ಖಾಸಗಿ ಜಮೀನಿನಿಂದ ಅರಣ್ಯ ಉತ್ಪನ್ನಗಳ ಸಾಗಾಣಿಕೆಗೆ ಅನುಮತಿ ಪಡೆಯಲು ಯಾವ ದಾಖಲೆಗಳನ್ನು ಸಲ್ಲಿಸಬೇಕು

  ಅ. ಉಪ ಆಯುಕ್ತರು ಅಥವಾ ಸಹಾಯಕ ಆಯುಕ್ತರ ಪ್ರಮಾಣಪತ್ರದ ಜೊತೆಗೆ ಕಂದಾಯ ದಾಖಲೆಗಳು ಆ. ಭೂಮಿಯ ಹಕ್ಕು (ಮಂಜೂರಾತಿಯ ವರ್ಷ ಮತ್ತು ಮಾಲೀಕರಿಂದ ನಿರಂತರ ಸ್ವಾಧೀನದ ಅವಧಿ) ಇ. ಸಾಗಾಣಿಕೆ ಮಾಡಲುದ್ದೇಶಿಸಿರುವ ಅರಣ್ಯ ಉತ್ಪನ್ನಗಳ ಮೇಲಿನ ಹಕ್ಕು (ಕಂದಾಯ ಇಲಾಖೆಯಿಂದ ಮಾಲೀಕತ್ವ ಪ್ರಮಾಣಪತ್ರ) ಈ. ಭೂ ದಾಖಲೆ ಇಲಾಖೆಯಿಂದ ಸರ್ವೇ ನಕ್ಷೆ ಉ. ಭೂಮಿಯ ಹಕ್ಕು ಮತ್ತು ಮರಗಳ ಮೇಲೆ ಪಾಲು ಹೊಂದಿರುವ ಇತರ ಮಾಲೀಕರ ಸಮ್ಮತಿ (ಇದ್ದಲ್ಲಿ)

 • ಈ ಸೇವೆಯನ್ನು ಪಡೆಯಲು ಅರ್ಜಿದಾರ ಶುಲ್ಕಗಳನ್ನು ಪಾವತಿಸಬೇಕೇ

  ಪ್ರತಿ ರಹದಾರಿಗೆ ಅರ್ಜಿದಾರ ರೂ. 100.00 ಶುಲ್ಕ ಪಾವತಿಸಬೇಕು.