ಕರ್ನಾಟಕ ಅರಣ್ಯ ಇಲಾಖೆಯ ಆಡಳಿತ ಮತ್ತು ಸಮನ್ವಯ ಘಟಕ, ಇಲಾಖೆಯ ಆಯವ್ಯಯ ಮತ್ತು ಲೆಕ್ಕಪತ್ರಗಳಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಮೇಲ್ವಿಚಾರಣೆಯ ಮುಖ್ಯ ಜವಾಬ್ದಾರಿ ಹೊಂದಿರುತ್ತದೆ. ಇದರ ಜೊತೆಗೆ ಸಂಸತ್‌/ವಿಧಾನಸಭೆ ಪ್ರಶ್ನೆಗಳು, ಭರವಸೆಗಳ ಸಮಿತಿ, ವಿಷಯ ಸಮಿತಿ, ಸಾರ್ವಜನಿಕ ಅರ್ಜಿ ಸಮಿತಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂತಾದವುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಇಲಾಖೆಯ ಇತರ ಘಟಕಗಳೊಂದಿಗೆ ಸಮನ್ವಯ ಸಾಧಿಸಿ ಉತ್ತರಗಳನ್ನು ತಯಾರಿಸುತ್ತದೆ. ಇವುಗಳ ಜೊತೆಗೆ ಪ್ರಧಾನ ಕಚೇರಿಯ ವಾಹನ ಶಾಖೆ ಹಾಗೂ ದಾಸ್ತಾನು ಶಾಖೆಗಳ ಮೇಲ್ವಿಚಾರಣೆ, ಮುಖ್ಯವಾಗಿ ಇಲಾಖೆಯ ವಿವಿಧ ಘಟಕಗಳಿಗೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿಗಳ ಬಿಡುಗಡೆ ಹಾಗೂ ಅನುಷ್ಠಾನದ ಮೇಲ್ವಿಚಾರಣೆಯ ಜವಬ್ದಾರಿಯನ್ನು ಸಹ ಹೊಂದಿರುತ್ತದೆ. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿಗಳ ಬಗ್ಗೆ ಸಂಕ್ಷಿಪ್ತ ಟಿಪ್ಪಣಿಯನ್ನು ಕೆಳಗೆ ನೀಡಲಾಗಿದೆ: