ವಿಭಾಗದ ಬಗ್ಗೆ
ಕರ್ನಾಟಕ ಅರಣ್ಯ ಇಲಾಖೆಯ ಅರಣ್ಯ ಸಂಪನ್ಮೂಲ ನಿರ್ವಹಣೆಯ ಘಟಕದ ಮುಖ್ಯಸ್ಥರಾಗಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, (ಅರಣ್ಯ ಸಂಪನ್ಮೂಲ ನಿರ್ವಹಣೆ) ರವರು ಕಾರ್ಯ ನಿರ್ವಹಿಸುತ್ತಾರೆ. ಅರಣ್ಯ ಉತ್ಪನ್ನಗಳು ಹಾಗೂ ಅರಣ್ಯ ರಕ್ಷಣೆ ಈ ಘಟಕದ ಮುಖ್ಯ ಕಾರ್ಯವಾಗಿರುತ್ತದೆ. ಈ ಘಟಕದಿಂದ ವಿವಿಧ ಅರಣ್ಯ ಉತ್ಪನ್ನಗಳಾದ ನಾಟ, ಸೌಧೆ, ಶ್ರೀಗಂಧ, ಬಿದಿರು, ಬೆತ್ತ ಮತ್ತು ಕಿರು ಅರಣ್ಯ ಉತ್ಪನ್ನಗಳ ಉತ್ಪಾದನೆ, ಸರಬರಾಜು ಹಾಗೂ ವಿಲೆ ಜವಾಬ್ದಾರಿಯನ್ನು ಹೊಂದಿರುತ್ತದೆ. ಈ ಕಾರ್ಯಗಳಲ್ಲದೆ, ಬೆಂಕಿಯಿಂದ ಅರಣ್ಯ ರಕ್ಷಣೆ ಮತ್ತು ನಿರ್ವಹಣೆ, ಅರಣ್ಯ ರಕ್ಷಣೆ, ಅರಣ್ಯಗಳ ಪುನರುತ್ಪತ್ತಿ, ಕಲ್ಚರಲ್ ಆಪರೇಷನ್ಸ್, ಸರ್ಕಾರಿ ಸಂಸ್ಥೆಗಳಿಂದ ನಾಟ ಮತ್ತು ಇತರೆ ಅರಣ್ಯ ಉತ್ಪನ್ನಗಳ ಶೇಖರಣೆ ಮುಂತಾದ ಕೆಲಸಗಳ ನಿರ್ವಹಣೆಯ ಜವಾಬ್ದಾರಿಯನ್ನೂ ಸಹ ಹೊಂದಿರುತ್ತದೆ.