ಅರಣ್ಯ ಭೂಮಿ ಮತ್ತು ಸಂಪನ್ಮೂಲಗಳ ಹೆಚ್ಚುತ್ತಿರುವ ಬೇಡಿಕೆ, ವಾಸಸ್ಥಳ ಕುಗ್ಗುತ್ತಿರುವುದು, ಮೇವಿನ ಕೊರತೆ ಮುಂತಾದವುಗಳಿಂದ ಮನುಷ್ಯ-ಪ್ರಾಣಿ ಸಂಘರ್ಷ ಉದ್ಭವವಾಗಿದೆ. ಅಂಥ ಸಂಘರ್ಷದ ಪ್ರಕರಣಗಳಲ್ಲಿ ಬಾಧಿತರಾದವರಿಗೆ ಸರ್ಕಾರ ನಷ್ಟ ಪರಿಹಾರವನ್ನು ಒದಗಿಸುತ್ತಿದೆ. ಅಂಥ ದಾವೆಗಳನ್ನು ಪ್ರಕ್ರಿಯೆಗೊಳಿಸುವಲ್ಲಿ ಪಾರದರ್ಶಕತೆ ತರಲು ಮತ್ತು ದಕ್ಷತೆಯನ್ನು ಹೆಚ್ಚಿಸಲು, ಇ-ಪರಿಹಾರ ಮೊಬೈಲ್‌ ಆ್ಯಪ್ ಮತ್ತು ವೆಬ್‌ ಅಪ್ಲಿಕೇಶನ್‌ಗಳನ್ನು ಇಲಾಖೆ ಅಭಿವೃದ್ಧಿಪಡಿಸಿ ಬಳಕೆಗೆ ತಂದಿದೆ. ಮನುಷ್ಯ-ಪ್ರಾಣಿ ಸಂಘರ್ಷದ ವಿವರಗಳನ್ನು ಅದರ ಜಿಯೋ ಸ್ಟ್ಯಾಂಪ್‌ಗಳು ಮತ್ತು ಸಂಘರ್ಷದಿಂದ ಉಂಟಾದ ಹಾನಿಯ ಫೊಟೋಗಳ ಜೊತೆಗೆ ದಾಖಲಿಸಲು ತಪಾಸಣಾ ಅಧಿಕಾರಿಗೆ ಆಂಡ್ರಾಯ್ಡ್ ಆ್ಯಪ್ ಅನುಕೂಲ ಕಲ್ಪಿಸುತ್ತದೆ. ದಾವೆಗಳ ಪ್ರಕ್ರಿಯೆಗಾಗಿ ತಪಾಸಣಾ ವರದಿಯನ್ನು ವೆಬ್‌ ಇಂಟರ್‌ಫೇಸ್‌ನಲ್ಲಿರುವ ವರ್ಕ್‌ ಫ್ಲೋ ಮೂಲಕ ಕಳುಹಿಸಲಾಗುತ್ತದೆ. ಕಾಲಕಾಲಕ್ಕೆ ಜಾರಿ ಮಾಡಲಾಗುವ ಸರ್ಕಾರಿ ಆದೇಶಗಳ ಅನುಸಾರ ಜಾರಿ ಮಾಡಲಾಗುವ ನಷ್ಟ ಪರಿಹಾರವನ್ನು ಅಪ್ಲಿಕೇಶನ್‌ ಮೂಲಕ ಲೆಕ್ಕಾಚಾರ ಮಾಡಲಾಗುತ್ತದೆ ಮತ್ತು ಸ್ವಯಂಚಾಲಿತ ಒಎಂಎಸ್‌ ಅನ್ನು ಸೃಷ್ಟಿಸಲಾಗುತ್ತದೆ. ದಾವೆಯ ಪ್ರಗತಿಯ ಸ್ಥಿತಿಗತಿಯ ಬಗ್ಗೆ ಅರ್ಜಿದಾರನಿಗೆ ಸ್ವಯಂಚಾಲಿತ ಎಸ್‌ಎಂಎಸ್‌ ಕಳುಹಿಸಲು ಈ ಪ್ರಕ್ರಿಯೆಯನ್ನು ಎಸ್‌ಎಂಎಸ್‌ ಸೇವೆಯೊಂದಿಗೂ ಏಕೀಕೃತಗೊಳಿಸಲಾಗಿದೆ.


ಸಿಸ್ಟಮ್ ಅನ್ನು ಪ್ರವೇಶಿಸಲು ಮತ್ತು ಲಾಗಿನ್ ಮಾಡಲು, ಇನ್ನಷ್ಟು ತಿಳಿಯಿರಿ >>