ವಿಭಾಗದ ಬಗ್ಗೆ
ಕರ್ನಾಟಕ ಅರಣ್ಯ ಇಲಾಖೆಯ ಆಡಳಿತ ಮತ್ತು ಸಮನ್ವಯ ಘಟಕ, ಇಲಾಖೆಯ ಆಯವ್ಯಯ ಮತ್ತು ಲೆಕ್ಕಪತ್ರಗಳಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿರುತ್ತದೆ. ಇವುಗಳಲ್ಲದೆ ಇಲಾಖೆಯ ಎಲ್ಲಾ ವಿಭಾಗಗಳ ಲೆಕ್ಕಪರಿಶೋಧನೆ, ಲೆಕ್ಕಪರಿಶೋಧನೆಗೆ ಸಂಬಂಧಿಸಿದ ಆಕ್ಷೇಪಣೆಗಳಿಗೆ, ಸಾರ್ವಜನಿಕ ಲೆಕ್ಕ ಪರಿಶೋಧನ ಸಮಿತಿಯ ಆಕ್ಷೇಪಣೆಗಳಿಗೆ ಮತ್ತು ಸಿ.ಎ.ಜಿ. ಕಂಡಿಕೆಗಳಿಗೆ ಉತ್ತರಗಳನ್ನು ಸಿದ್ಧಪಡಿಸಿ ಸಲ್ಲಿಸುವುದು ಈ ಘಟಕದ ಜವಾಬ್ದಾರಿಯಾಗಿದೆ.