ವಿಭಾಗದ ಮುಖ್ಯಸ್ಥರು

ಶ್ರೀ. ಶ್ರೀ ಬಿ. ಎನ್. ಎನ್.‌ ಮೂರ್ತಿ

ಉಪ ಅರಣ್ಯ ಸಂರಕ್ಷಣಾಧಿಕಾರಿ
ಉಪ ಅರಣ್ಯ ಸಂರಕ್ಷಣಾಧಿಕಾರಿ,ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಕೋಳೀಫಾರ್ಮ್ ಗೇಟ್ ಹತ್ತಿರ, ವೀವರ್ಸ್ ಕಾಲೋನಿ ಕಡೆಗೆ, ಬನ್ನೇರುಘಟ್ಟ ಮುಖ್ಯ ರಸ್ತೆ, ಕಲಕೆರೆ , ಬೆಂಗಳೂರು -83
08029755405
dcfbnp83@gmail.com

ವಿಭಾಗದ ಬಗ್ಗೆ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ (ಬರಾಉ) ಅನ್ನು ಆರಂಭದಲ್ಲಿ 106.83 ಚ.ಕಿ.ಮೀ. ಪ್ರದೇಶದೊಂದಿಗೆ 1974ರಲ್ಲಿ ಘೋಷಣೆ ಮಾಡಲಾಯಿತು. ಆಗ ಇದರಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಹರಡಿಕೊಂಡ ಎರಡು ಮೀಸಲು ಅರಣ್ಯಗಳಿದ್ದವು. ಆನಂತರ 2011ರಲ್ಲಿ, ರಾಮನಗರ ಪ್ರಾದೇಶಿಕ ವಿಭಾಗದ ಕೋಡಿಹಳ್ಳಿ ವಲಯವನ್ನು ರಾಷ್ಟ್ರೀಯ ಉದ್ಯಾನಕ್ಕೆ ಸೇರಿಸಲಾಯಿತು. ಬ.ರಾ.ಉ.ದ ಒಟ್ಟು ವಿಸ್ತಾರ 260.51 ಚ.ಕಿ.ಮೀ. ಆಗಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹರಡಿಕೊಂಡಿರುವ 13 ಮೀಸಲು ಅರಣ್ಯಗಳನ್ನು ಒಳಗೊಂಡಿದೆ. ಬ.ರಾ.ಉ.ದ ಗಡಿ ಅತ್ಯಂತ ಕ್ರಮಬದ್ಧವಲ್ಲದ ವಿನ್ಯಾಸದಲ್ಲಿದೆ ಮತ್ತು ಇದು ಸುಮಾರು 59 ಕಿ.ಮೀ. ಉದ್ದವಿದೆ ಉದ್ಯಾನದ ಅಗಲ 0.3 ಕಿ.ಮೀ. ಯಿಂದ 13.8 ಕಿ.ಮೀ. ವರೆಗೆ ವ್ಯತ್ಯಾಸವಾಗುತ್ತದೆ. ಉದ್ಯಾನದ ಮೇಲ್ವಿಚಾರಣೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ., ಬ.ರಾ.ಉ. ಇವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬ.ರಾ.ಉ. ಇವರ ಸಹಕಾರದೊಂದಿಗೆ ನಡೆಸುತ್ತಾರೆ. ರಾಷ್ಟ್ರೀಯ ಉದ್ಯಾನದಲ್ಲಿ ಆನೇಕಲ್‌, ಬನ್ನೇರುಘಟ್ಟ, ಹೇರೋಹಳ್ಳಿ ಮತ್ತು ಕೊಡಿಹಳ್ಳಿ ವನ್ಯಜೀವಿ ವಲಯ ಎನ್ನುವ ನಾಲ್ಕು ವಲಯಗಳಿವೆ. ರಾಷ್ಟ್ರೀಯ ಉದ್ಯಾನದ ಬಹುತೇಕ ಕಾಡುಗಳು ಕುರುಚಲು ವಿಧದವಾಗಿದ್ದು, ಆಶ್ರಯ ಕಣಿವೆಗಳಲ್ಲಿ ಮಿಶ್ರ ಒಣ ಎಲೆಯುದುರುವ ಕಾಡುಗಳು ಕಂಡುಬರುತ್ತವೆ. ಮೆದ್ರಿ ಬಿದಿರಿನ (ಡೆಂಡ್ರೊಕಲಾಮಸ್ ಸ್ಟ್ರಿಕ್ಟಸ್) ಸಾಕಷ್ಟು ಉತ್ತಮ ಮೆಳೆಗಳಿವೆ. ಉದ್ಯಾನದಲ್ಲಿ ಕಂಡುಬರುವ ಪ್ರಾಣಿಗಳಲ್ಲಿ ಚಿರತೆ, ಆನೆ, ಜೇನು ಕರಡಿ, ಚಿಟ್ಟೆ ಜಿಂಕೆ, ಕಂದು ಲಂಗೂರ್, ಬಾನೆಟ್‌ ಕೋತಿ, ಕಾಡು ಹಂದಿ, ನರಿ, ವಿವಿಧ ಪ್ರಭೇದಗಳ ಸರೀಸೃಪಗಳು ಮತ್ತ ಪಕ್ಷಗಳು ಮುಂತಾದವು ಸೇರಿವೆ. ಕೆಲವೊಮ್ಮೆ ಹುಲಿ ಕಂಡುಬಂದ ಬಗ್ಗೆಯೂ ವರದಿಯಾಗಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

--%>

ಉಪ ವಿಭಾಗಗಳು